ಕೊಪ್ಪಳ,ಗಂಗಾವತಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಕೊಪ್ಪಳ : ಭಾರತ ಬಂದ್ ಹಿನ್ನೆಲೆ ಸಾವಿರಾರು ಕಾರ್ಮಿಕರಿಂದ ಬೃಹತ್ ಮೆರವಣಿಗೆ ನಡೆಯಿತು.

ಕೊಪ್ಪಳ ನಗರ ಹಾಗೂ ಗಂಗಾವತಿಯ ಯಲ್ಲಿ ಪ್ರತಿಭಟನಾಕಾರರು ಬೃಹತ್ ರ್ಯಾಲಿಯ ಮೂಲಕ ಕೇಂದ್ರ ಸರಕಾರದ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು..

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಅಶೋಕ ಸರ್ಕಲ್ ನಲ್ಲಿ ಎನ್ ಪಿಎಸ್ ಪ್ರತಿಕೃತಿ ದಹನ ಮಾಡಿದರು.

ಶೀಘ್ರವೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರಕ್ಕೆ ತಕ್ಕ ಪಾಠ ಕಲಿಸುವದಾಗಿ ಎಚ್ಚರಿಸಿದರು.

Please follow and like us:
error