You are here
Home > Crime_news_karnataka > ಕೊಪ್ಪಳಕ್ಕೆ ಬ್ಲಾಕ್ ಸಂಡೇ

ಕೊಪ್ಪಳಕ್ಕೆ ಬ್ಲಾಕ್ ಸಂಡೇ

ಇವತ್ತು ಕೊಪ್ಪಳ ಜಿಲ್ಲೆಗೆ Black Sunday ಎಂದೇ ಹೇಳಬಹುದು. ವಿವಿಧ ಅಫಘಾತಗಳಲ್ಲಿ ಐವರು ಸಾವನ್ನಪ್ಪಿದ್ದಾರೆ.

ವಿದ್ಯುತ್ ಶಾಕ್ ಹೊಡೆದು ಇಬ್ಬರು ಸಾವು. ಮೂವರಿಗೆ ಗಾಯ. ವಿದ್ಯುತ್ ಕಂಬದಲ್ಲಿ ಕೆಲಸ ಮಾಡುವ ವೇಳೆ ಘಟನೆ.ಹನುಮಂತಪ್ಪ ಗಂಜಿ(40), ಮೆಹಬೂಬ್ ಸಾಬ(28) ಮೃತ ಕಾರ್ಮಿಕರು.ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಘಟನೆ.ಹಿರೇಬೆಣಕಲ್ ಗ್ರಾಮದ ಸುಬ್ಬರಾವ್ ಎನ್ನುವ ಜಮೀನಿನಲ್ಲಿ ಘಟನೆ.ಮೃತರು ವೆಂಕಟಗಿರಿ ಗ್ರಾಮದವರು. ಕೂಲಿ ಕೆಲಸಕ್ಕಾಗಿ ಬಂದಿದ್ದ ಮೃತರು.

ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಬ್ಬರು ಬಲಿ. ಅಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಶ ಗಂಗಾವತಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಘಟನೆ.

ಕೊಪ್ಪಳ

ರೈಲ್ವೆ ಬ್ರಿಡ್ಜ್ ಡಿವೈಡರ್ ಗೆ ಡಿಕ್ಕಿ, ಇಬ್ಬರು ಸ್ಥಳದಲ್ಲೆ ಸಾವು, ಇನ್ನಿಬ್ಬರಿಗೆ ಗಾಯ

ಕೊಪ್ಪಳದ ಜಬ್ಬಲಗುಡ್ಡದ ಬಳಿ ಅಪಘಾತ. ರಮೇಶ ಡೋಳ್ಳಿ, ರತ್ನಮ್ಮ ಈಳಿಗೇರ ಮೃತ ದುರ್ದೈವಿಗಳು.ಮೃತರು ಗುಳದಳ್ಳಿ, ಅಲ್ಲಾನಗರ ಗ್ರಾಮದವರು.

ಗಾಯಾಳುಗಳು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು. ಒಂದೆ ಬೈಕ್ ಮೇಲೆ ನಾಲ್ವರು ಪ್ರಯಾಣಿಸುತ್ತಿದ್ದರು. ಬೈಕ್ ನಿಯಂತ್ರಣಕ್ಕೆ ಸಿಗದೆ ಡಿವೈಡರ್ ಗೆ ಡಿಕ್ಕಿ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

: ಕೊಪ್ಪಳ

ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ

ಪಾದಾಚಾರಿ ಸ್ಥಳದಲ್ಲೆ ಸಾವು. ಕೊಪ್ಪಳದ ಕಾರಟಗಿಯ ರಿಲಿಯನ್ಸ್ ಪೆಟ್ರೋಲ್ ಬಂಕ್ ಬಳಿ ಘಟನೆ. ಸ್ಥಳಕ್ಕೆ ಕಾರಟಗಿ ಪೊಲೀಸರ ಬೇಟಿ,ಪ್ರಕರಣ ದಾಖಲು

ಕೊಪ್ಪಳ…

ಕೊಪ್ಪಳ ಗಂಜ್ ಕ್ರಾಸ್ ನಲ್ಲಿ ಮಿನಿ ಬಸ್ ಗೆ ಡಿಕ್ಕಿ ಹೊಡೆದ ಕಾಂಕ್ರೀಟ್ ಲಾರಿ

ತಪ್ಪಿದ ಭಾರಿ ಅನಾಹುತ.

ಜನರಿಂದ ಕೂಡಿದ ಮಿನಿ ಬಸ್ ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ.ರಸ್ತೆ ಕ್ರಾಸ್ ಮಾಡುವಾಗ ನಡೆದ ಘಟನೆ.ಕಾಂಕ್ರೀಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ ನ ಗ್ಲಾಸ್ ಗಳು ಛಿದ್ರ

ರಸ್ತೆ ನಿರ್ಮಾಣದ ಹಿನ್ನಲೆ ನಿತ್ಯ
ಒಂದಿಲ್ಲೊಂದು ಅವಘಡ.

ರಸ್ತೆ ಕಾಮಗಾರಿ ಬೇಗನೆ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯ.

Top