ಕೊಪ್ಪಳ ಜಿಲ್ಲೆಯಲ್ಲಿ ಇಂದು ನಾಲ್ಕು ಪಾಜಿಟಿವ್ ಪ್ರಕರಣಗಳು ಪತ್ತೆ

ಕೊಪ್ಪಳಕ್ಕೆ ತಟ್ಟಿದ ಜಿಂದಾಲ್ ನಂಟು

ಕೊಪ್ಪಳ : ಬಳ್ಳಾರಿ ಜಿಲ್ಲೆಯ ಜಿಂದಾಲ್ ನಂಟು ಕೊನೆಗೂ ಕೊಪ್ಪಳಕ್ಕೆ ತಟ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಇಂದು ಹೊಸದಾಗಿ ನಾಲ್ಕು ಕರೋನಾ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ತಂದೆ ಮತ್ತು ತಾಯಿಗೆ ಪಾಜಿಟಿವ್ ಪತ್ತೆಯಾಗಿದೆ. ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಜಿಂದಾಲ್ ಕಾರ್ಮಿಕನ ತಂದೆ ತಾಯಿಗಳಿಗೆ ಕರೋನಾ ಪಾಜಿಟಿವ್ ಕನ್ಮರ್ಮ ಆಗಿದೆ. ಅದೇ ರೀತಿ ಗಂಗಾವತಿಯ 3 ವರ್ಷದ ಮಗುವಿಗೂ ಕರೋನಾ ಪಾಜಿಟಿವ್ ಪತ್ತೆಯಾಗಿದೆ. ಇವರ ಪೋಷಕರು ಬಾಂಬೆಯಿಂದ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ ಜೊತೆಗೆ  ಕುಕನೂರು ತಾಲೂಕಿನ ಬಳಿಗೇರಿಯ 33  ವರ್ಷದ ವ್ಯಕ್ತಿಗೆ ಪಾಜಿಟಿವ್ ಕನ್ಪರ್ಮ ಈ ವ್ಯಕ್ತಿ ಮಹಾರಾಷ್ಟರದ ಕೋಲಾಪುರದಿಂದ ಬಂದಿದ್ದ ಎನ್ನಲಾಗಿದೆ.

ಗಂಗಾವತಿ ವಕೀಲಗೇಟ್ ಬಳಿ ನಿವಾಸಿ ೩ ವರ್ಷದ ಮಗುವಿಗೆ ಕೊರೊನಾ ಸೋಂಕು ಜೂ.೯ ರಂದು ಮುಂಬೈನಿಂದ ಪಾಲಕರೊಂದಿಗೆ ಆಗಮಿಸಿದ್ದ ಮಗು ಅನಾರೋಗ್ಯ ಹಿನ್ನೆಲೆಯಲ್ಲಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದಾಗ ದೃಢಪಟ್ಟ ಕೊರೊನಾ ತಂದೆ, ತಾಯಿ ಗಂಟಲು ದ್ರವ ಪಡೆದ ವೈದ್ಯರ ತಂಡ ಮಗುವನ್ನು ಕೊಪ್ಪಳದ ಐಸೋಲೇಶನ್ ವಾರ್ಡಗೆ ಶಿಫ್ಟ್ ಮಾಡಿದ ವೈದ್ಯರು ನಿವಾಸದ ಸ್ಥಳಕ್ಕೆ ದೌಡಾಯಿಸಿದ ನಗರಸಭೆ ಅಧಿಕಾರಿಗಳ ತಂಡ ತಾಲ್ಲೂಕಿನ ಮರಳಿಯಲ್ಲಿ ದಂಪತಿಗೆ ಕೊರೊನಾ ಸೋಂಕು ಪತ್ತೆ ೫೩ ವರ್ಷದ ಪತಿ, ೪೫ ವರ್ಷದ ಪತ್ನಿಗೆ ಕೊರೊನಾ ಸೋಂಕು ಬಳ್ಳಾರಿಯ ಜಿಂದಾಲ್ ನಲ್ಲಿ ಕೆಲಸ ಮಾಡುವ ಪುತ್ರನಿಂದ ಸೋಂಕು ತಗುಲಿರುವ ಶಂಕೆ ಸ್ಥಳಕ್ಕೆ ತಾಲ್ಲೂಕಾಡಳಿತದ ಅಧಿಕಾರಿಗಳ ತಂಡ ಭೇಟಿ ನಗರದ ವಕೀಲ್ ಗೇಟ್ ಮತ್ತು ಮರಳಿ ಸೀಲ್ ಡೌನ್ ಮಾಡಲಾಗಿದೆ.

Please follow and like us:
error