You are here
Home > Koppal News > ಕೊಪ್ಪಳಕ್ಕೆ ತಟ್ಟಲಿಲ್ಲ ಬಂದ್ ಬಿಸಿ

ಕೊಪ್ಪಳಕ್ಕೆ ತಟ್ಟಲಿಲ್ಲ ಬಂದ್ ಬಿಸಿ

ಮಹದಾಯಿಗಾಗಿ ಆಗ್ರಹಿಸಿ ಇಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್‍ನ ಬಿಸಿ ಕೊಪ್ಪಳ ಜಿಲ್ಲೆಯಲ್ಲಿ ತಟ್ಟಲಿಲ್ಲ. ಕೊಪ್ಪಳದಲ್ಲಿ ಯಾವುದೇ ರೀತಿಯ ಬಂದ್ ನಡೆಯಲಿಲ್ಲ. ಬಂದ್ ಬೆಂಬಲಿಸಿ ಕೆಲ ಕನ್ನಡಪರ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು.

ಬೆಳಗ್ಗೆಯಿಂದಲೇ ಎಲ್ಲ ಅಂಗಡಿಗಳು ಎಂದಿನಂತೆ ತೆರೆದು ವ್ಯಾಪಾರ ವಹಿವಾಟು ನಡೆಸಿವು. ಇನ್ನು ಸಾರಿಗೆ ಸಂಸ್ಥೆಯ ಬಸ್‍ಗಳು ಹಾಗೂ ಖಾಸಗಿ ವಾಹನಗಳು ಎಂದಿನಂತೆ ಓಡಾಡಿವು. ಆದರೆ, ಗದಗ್ ಮಾರ್ಗವಾಗಿ ಓಡಾಡುತ್ತಿದ್ದ ಬಸ್‍ಗಳನ್ನು ಸ್ಥಗಿತಗೊಂಡಿದ್ದವು. ಎಂದಿನಂತೆ ಶಾಲಾ, ಕಾಲೇಜ್‍ಗಳು ಓಪನ್ ಆಗಿದ್ದವು. ಆದರೆ, ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಕರವೇ ಯುವಸೇನೆ ಕಾರ್ಯಕರ್ತರು ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ವಾಹನಗಳನ್ನು ತಡೆಯಲು ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸರು ತಾಕೀತು ಮಾಡಿದರು. ಇನ್ನು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಗೋವಾ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿದರು. ಇನ್ನು ಕೊಪ್ಪಳದ ಗಂಗಾವತಿಯಲ್ಲಿಯೂ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಬೆಂಬಲಿಸಿ ಕೊಪ್ಪಳದಲ್ಲಿ ಕೆಲ ಕನ್ನಡಪರ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿದನ್ನು ಬಿಟ್ಟರೆ, ಕೊಪ್ಪಳ ಜಿಲ್ಲೆಯಲ್ಲಿ ಬಂದ್ ನಡೆಯಲಿಲ್ಲ.

Top