ಕೊಪಪಳದಲ್ಲಿ ಗಂಧರ್ವ ಲೋಕದಒಂದುರಾತ್ರಿ : ಪಾನಘಂಟಿ


ಕೊಪ್ಪಳ: ಶಾಸ್ತ್ರೀಯ ಸಂಗೀತ ವಿದ್ಯೆಒಲಿಯಬೇಕಾದರೆ ಶ್ರವಣ ಮನನಧ್ಯಾನ ಬಹಳ ಮುಖ್ಯ ಕೊಪ್ಪಳದಲ್ಲಿ ಅಂತರರಾಷ್ಟ್ರೀಯಖ್ಯಾತಿ ಕಲಾವಿದರುಗಳು ಗಂಧರ್ವ ಲೋಕದಒಂದುರಾತ್ರಿಯನ್ನೆ ಸೃಷ್ಟಿಸಿಬಿಟ್ಟರು ಎಂದು ಹಿರಿಯ ನ್ಯಾಯವಾದಿ ರಾಘವೇಂದ್ರ ಪಾನಘಂಟಿ ಹೇಳಿದರು.
ಅವರು ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಮತ್ತು ಬೆಂಗಳೂರು ಶ್ರೀರಾಘವೇಂದ್ರಸ್ವಾಮಿಗಳವರ ಮಠ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ೧೧ನೇ ವರ್ಷದ ಸಂಗೀತ ಮಹೋತ್ಸವ ಹಾಗೂ ದಿ|| ಹನುಮಂತರಾವ್ ಬಂಡಿಅವರ ೮ನೇ ವರ್ಷದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದ ಪ್ರಯುಕ್ತ ೧೭/೫/೨೦೧೮ ಶ್ರೀರಾಘವೇಂದ್ರಸ್ವಾಮಿಗಳವರ ಮಠದಆವರಣದಲ್ಲಿಏರ್ಪಡಿಸಿದ್ದ ಅಹೋರಾತ್ರಿ ಸಂಗೀತಕಾರ್ಯಕ್ರಮದ ಮುಖ್ಯತಿಥಿಗಾಗಿ ಪಾಲ್ಗೊಂಡು ಮಾತನಾಡಿತ್ತಿದ್ದರು.

ಬೆಂಗಳೂರಿನ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕಲಾವಿದರಾದ ಡಾ.ಮುದ್ದುಮೋಹನ ಅವರುಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಸ್ತ್ರೀಯ ಸಂಗೀತಕೇವಲ ಒಂದು ಬಾರಿಕ್ಯಾಸೇಟ್ ಕೇಳಿ ಕಲಿಯುತ್ತೇವೆಎಂದರೆಆಗದು ಗುರುಗಳ ಮುಖೇನ ಸತತಅಧ್ಯಯನ ನಡೆಸಬೇಕುಸಿನಿಮಾ ಸಂಗೀತಎಲ್ಲರನ್ನುರಂಜಿಸುತ್ತಆದರೆ ಬಹಳಹೊತ್ತು ಜನರ ಮನದಲ್ಲಿ ಉಳಿಯುವುದಿಲ್ಲ ಶಾಸ್ತ್ರೀಯ ಸಂಗೀತ ಹಾಗಲ್ಲ ಮನಸ್ಸಿಗೆ ಮುದ ಶಾಂತಿಯನ್ನು ನೀಡುತ್ತದೆಸರ್ಕಾರಗಳು ಹೆಚ್ಚು ಸಹಾಯಪ್ರೋತ್ಸಾಹ ನೀಡಬೇಕುಹಾಗೂ ಮಾಧ್ಯಗಳು ಹೆಚ್ಚು ಪ್ರಚಾರ ನೀಡಬೇಕಾಗಿದೆ.ಯುವಕರು, ಪಾಲಕರು ಹೆಚ್ಚು ಹೆಚ್ಚು ನಮ್ಮ ಪರಂಪರೆಯಿಂದ ಬಳುವಳಿಯಾಗಿ ಬಂದಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಒಲವು ನೀಡಬಾಕಾಗಿದೆ. ಸಂಗೀತಕಷ್ಟದಾಯಕ ವಿದ್ಯೆಯಾಗಿದೆಐಎಎಸ್ ಸುಲಭವಾಗಿ ಪಾಸಾಗಬಹದು ಪ್ರಖ್ಯಾತ ಉದ್ಯಮಿಗಳಾಗಬಹುದುಆದರೆ ಪ್ರಖ್ಯಾತ ಸಂಗೀತಗಾರನಾಗುವುದು ಬಲು ಕಷ್ಟದ ಕೆಲಸ ಶಾಸ್ತ್ರೀಯ ಸಂಗೀತ ಕೇವಲ ಮೂರು ತಿಂಗಳಲ್ಲಿ ಕಲಿಯಬಹುದುಎಂದು ಬಂದವರು ಬ್ರಮರನಿರಷನಗೊಳ್ಳುತ್ತಾರೆ ಇದಕ್ಕೆ ನಿರಂತರಅಧ್ಯಯನ ಶ್ರವಣ ಮನನ ಧ್ಯಾನ ಮುಖ್ಯಎಂದು ಹೇಳಿದರು.
ಜಿಲ್ಲಾ ಪ್ರಧಾನ ಸತ್ರನ್ಯಾಯಾಧೀಶರಾಜೀವಗುರುನಾಥಜೋಷಿ ಅವರುಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಮಾಧ್ಯಮಅಕಾಡಮಿರಾಜ್ಯ ಪ್ರಶಸ್ತಿ ಪುರಸ್ಕೃತಪತ್ರಕರ್ತಎಂ.ಸಾದಿಕ ಅಲಿ, ವ್ಹಿ.ಎಂ.ಭೂಸನೂರಮಠ, ಮಾರುತೇಶ್ವರ ಬಯಲಾಟಸಂಘದಅಧ್ಯಕ್ಷ ನಾರಾಯಣಪ್ಪಕಲಾಲ್, ನಿವೃತ್ತ ಪ್ರಾಂಶುಪಾಲ ಡಾ.ಡಿ.ಆರ್.ಬೆಳ್ಳಟ್ಟಿಸೇರಿದಂತೆಅನೇಕರುಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ರುದ್ರೇಶಉಜ್ಜನಕೊಪ್ಪ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಂ.ವೆಂಕಟೇಶಕುಮಾರಅವರಿಗೆ ಸನ್ಮಾನಿಸಲಾಯಿತು.

ಶಹನಾಯಕಲಾವಿರಾದ ಕೃಷ್ಣಾ ವೆಂಕಪ್ಪಕ್ಷತ್ರೀಯಅವರ ಮಂಗಲವಾದ್ಯ (ಶಹನಾಯಿ) ಗೌಡಸಾರಂಗ್‌ರಾಗದೊಂದಿಗೆಅಹೋರಾತ್ರಿ ಸಂಗೀತ ಮಹೋತ್ಸವಕಾರ್ಯಕ್ರಮ ಚಾಲನೆಗೊಂಡಿತು. ನಂತರಕು.ವಿಭಾಕಟ್ಟಿತಮ್ಮ ಸುಮಧುರಕಂಠದಿಂದಕೇದಾರ್‌ರಾಗ ಪ್ರಸ್ತುತ ಪಡಿಸಿದರು.ವಿದೂಷಿ ಶ್ರೀಮತಿ ಕವಿತಾ ಹಾಗೂ ತಂಡದಿಂದ ನೃತ್ಯರೂಪಕಜನರನ್ನು ರಂಜಿಸಿತು.
ಧಾರವಾಡದಖ್ಯಾತ ಹಿಂದೂಸ್ತಾನಿ ಸಂಗೀತಕಲಾವಿದರಾದ ಪದ್ಮಶ್ರೀ ಪಂ.ವೆಂಕಟೇಶಕುಮಾರಅವರುರಾಗ್ ಬಿಹಾಗ್ ವಿಲಂಬಿತಏಕ್‌ತಾಲದಲ್ಲಿಧೃತ್‌ತೀನ್‌ತಾಲದಲ್ಲಿದುರ್ಗಾರಾಗ್ ಹಾಗೂ ತರಾನಾ ವಚನ ಮತ್ತುದಾಸವಾಣಿ ನೆರೆದಜನಸ್ತೋಮವನ್ನು ಮಂತ್ರಮುಗ್ದಗೊಳಿಸಿತ್ತು.
ಖ್ಯಾತತಬಲಾವಾದಕ ಪಂ.ರವೀಂದ್ರಯಾವಗಲ್‌ಅವರತಬಲಾ ಸೊಲೋದಲ್ಲಿತೀನ್‌ತಾಲ್, ಚಕ್ರಧಾರ, ಝಪ್‌ತಾಲದಲ್ಲಿ ಪೇಶಕಾರ್‌ಕಾಯ್ದೆ, ಖಂಡಜಾತಿಕಾಯ್ದೆ, ಮಿಶ್ರಜಾತಿಕಾಯ್ದೆ ನುಡಿಸಿದರು.ಎನ್.ಆರ್‌ಕುಕನೂರುಅವರುದಾಸವಾಣಿ ನಡೆಸಿಕೊಟ್ಟರು. ವಿದೂಷಿ ಶ್ರೀಮತಿ ಚೈತ್ರಾ ಸೊಂಟಕ್ಕಿಅವರರಾಗ್‌ಮಾಲ್ಗುಂಝಿ ವಿಲಂಬಿತ್‌ಏಕ್‌ತಾಲದಲ್ಲಿ ಹಾಗೂ ಧೃತ್‌ತೀನತಾಲದಲ್ಲಿಗಾಯನ ಸುಶ್ರಾವ್ಯವಾಗಿ ಮೂಡಿಬಂತು.
ಅಂತರರಾಷ್ಟ್ರೀಯಖ್ಯಾತಿಯಗ್ರ್ಯಾಮಿ ಪ್ರಶಸ್ತಿ ಪುರಸ್ಕೃತಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಗಿಟಾರವಾದಕಡಾ.ಪ್ರಕಾಶ ಸೊಂಟಕ್ಕಿಅವರುರಾಗ್‌ಚಾರುಕೇಶ ವಿಲಂಬಿತ್‌ತೀನ್‌ತಾಲ್‌ದಾದ್ರಾ ತಾಳದಲ್ಲಿ ತಮ್ಮಗಿಟಾರವಾದನಮತ್ತುಖ್ಯಾತತಬಲಾ ವಾದಕ ಪಂ.ಶಾಂತಲಿಂಗದೇಸಾಯಿಕಲ್ಲೂರುಅವರುತಮ್ಮತಬಲಾ ವಾದನದಿಂದ ನೆರೆದಿದ್ದ ಸಂಗೀತ ಪ್ರೀಮಿಗಳನ್ನು ಸಂಗೀತ ಸಾಗರದಲ್ಲಿ ಮುಳುಗಿಸಿಬಿಟ್ಟರು.
ಕಾರ್ಯಕ್ರಮದಎಲ್ಲ ಕಲಾವಿದರುಗಳಿಗೆಪಂ.ಸತೀಶ್ ಕೊಳ್ಳಿ,   ವೀರೇಶ್ ಹಿಟ್ನಾಳ, ನಾರಾಯಣದಾಸ ಸಂತೇಕೆಲ್ಲೂರ, ಲಚ್ಚಣ್ಣ ಕಿನ್ನಾಳ ಹಾರ್‍ಮೋನಿಯಂ ಸಾಥ್ ನೀಡಿದರು. ತಬಲಾ ಸಾಥಿಯಾಗಿಪಂ.ಶಾಂತಲಿಂಗದೇಸಾಯಿಕಲ್ಲೂರು ಕಲಬು ರಗಿ, ಶ್ರೀನಿವಾಸ ಜೋಶಿ, ಕುಮಾರ ಶಿವಲಿಂಗಪ್ಪ ಕಿನ್ನಾಳ ಅನಂತ ಪುಣಸ್ಕರ್‌ಕೊಪ್ಪಳ ತಾಳ ಸಾಥ್. ಕೃಷ್ಣಾ ಸೊರಟೂರ, ಕು.ವಿನಾಯಕ, ಕು.ಗೋವಿಂದರಾಜ.ಬದರಿ ಪುರೋಹಿತಅವರವ್ಯಂಗ್ಯಚಿತ್ರ ಮತ್ತುರಂಗ್‌ಚಿತ್ರಶಾಲೆಯವಿದ್ಯಾರ್ಥಿಗಳಿಂದ ನಡೆದಚಿತ್ರಕಲಾ ಪ್ರದರ್ಶನಗಮನಸೆಳೆಯಿತು.

Please follow and like us:
error