ಕೊಪಣ  ವೈಭವ-೨೦೧೯ ಕಾರ್ಯಕ್ರಮ-

ಕೊಪ್ಪಳ :ನಗರದ ಕುಷ್ಟಗಿ ರಸ್ತೆಯಲ್ಲಿ `ಕೊಪಣ ವೈಭವ-೨೦೧೯’ ರಾಜ್ಯಮಟ್ಟದ  ಮಹಾ ಅಧಿವೇಶನ ಇಂದಿನಿಂದ ಜುಲೈ ೪ರಿಂದ ಮೂರು ದಿನಗಳ ಕಾಲ 
ಕಾರ್ಯಕ್ರಮ ನಡೆಯಲಿದೆ ಎಂದು ನವದೆಹಲಿಯ ಆಲ್ ಇಂಡಿಯಾ ಟೆಂಟ್ ಮತ್ತು ಡೆಕೋರೇಟರ್ಸ್  ವೆಲ್‌ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಮೆಹಬೂಬ್ ಮುಲ್ಲಾ ಸಿದ್ಧಾಪುರ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಗಂಗಾವತಿಯ ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್, ಧ್ವನಿ ಮತ್ತು  ಬೆಳಕು ಕ್ಷೆÃಮಾಭಿವೃದ್ಧಿ ಸಂಘ, ನವದೆಹಲಿಯ ಆಲ್ ಇಂಡಿಯಾ ಟೆಂಟ್ ಮತ್ತು  ಡೆಕೋರೇಟರ್ಸ್ ವೆಲ್‌ಫೇರ್ ಅಸೋಸಿಯೇಷನ್‌ನ ಹಾಗೂ ಜಿಲ್ಲಾ ಡೆಕೋರೇಟರ್ಸ್ ಮತ್ತು   ಸಪ್ಲೆಯರ್ಸ್ ಕ್ಷೆÃಮಾಭಿವೃದ್ಧಿ ಸಂಘಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಜುಲೈ ೪ರಂದು ಬೆಳಿಗ್ಗೆ ೯ಕ್ಕೆ ಪೂಜಾ ಸಮಾರಂಭ ಹಾಗೂ ಧ್ವಜಾರೋಹಣ ನಡೆಯಲಿದ್ದು, ಬೆಳಿಗ್ಗೆ ೧೦.೩೦ಕ್ಕೆ ಡೆಕೋರೇಟ್ ವಸ್ತುಗಳ ಪ್ರದರ್ಶನ ಹಾಗೂ  ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಹೂವಿನಹಡಗಲಿ ಗವಿಮಠದ ಡಾ.ಹಿರೇಶಾಂತವೀರ ಸ್ವಾಮೀಜಿ ಹಾಗೂ ಭಾಗ್ಯನಗರದ ಶಂಕರಾಚಾರ್ಯ ಮಠದ ಶಿವಪ್ರಕಾಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಡೆಕೋರೇಟರ್ಸ್  ಮತ್ತು ಸಪ್ಲಯರ್ಸ್ ಕ್ಷೆÃಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರಿÃರಾಮನಗರದ ಗುಂಡಯ್ಯಸ್ವಾಮಿ  ಹಿರೇಮಠ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಸಂಘದ ಸಂಘಟನಾ ಕಾರ್ಯದರ್ಶಿ ಎಂ.ರಾಜಾಸಾಬ್ ಕೆ.ಬಿ.ಎನ್. ಭಾಗವಹಿಸುವರು ಎಂದರು. ಅಂದು ಸಂಜೆ ೪ಕ್ಕೆ ನಡೆಯಲಿರುವ ೧ನೇ ಮಹಾ ಅಧಿವೇಶನದ ಉದ್ಘಾಟನಾ  ಸಮಾರಂಭದ ಸಾನ್ನಿಧ್ಯವನ್ನು ಅಭಿನವ ಗವಿಸಿದ್ಧೆÃಶ್ವರ ಸ್ವಾಮೀಜಿ, ಮಂಗಳೂರು  ಅಲ್‌ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ನ ಪ್ರಿನ್ಸಿಪಾಲ್ ಮೌಲಾನಾ ಹಾಫಿಝ್‌ಸುಫ್ಯಾನ್ ಸಖಾಫಿ  ಹಾಗೂ ನಗರದ ಇಸಿಐ ಚರ್ಚ್ನ ಸಭಾಪಾಲಕ ರೇ.ಜೆ.ರವಿಕುಮಾರ ವಹಿಸುವರು. ಸಂಸದ ಸಂಗಣ್ಣ ಕರಡಿ ಮತ್ತು ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ  ಈ.ತುಕಾರಾಂ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ಜುಲೈ ೫ರಂದು ಬೆಳಗ್ಗೆ ೯ರಿಂದ ೧ರ ವರೆಗೆ ಕೂಡ್ಲಿಗಿಯ ಜಾನಪದ ಕಲಾತಂಡದಿಂದ ಮೆರವಣಿಗೆ, ಸಂಜೆ ೫ರಿಂದ ೮ರ ವರೆಗೆ ಹಿರಿಯ ನಾಗರಿಕರಿಗೆ, ೩೦ ಜಿಲ್ಲಾ ಅಧ್ಯಕ್ಷರು  ಮತ್ತು ಕಾರ್ಯದರ್ಶಿಗಳಿಗೆ ಸನ್ಮಾನ ಸಮಾರಂಭ ಮತ್ತು ಲಕ್ಕಿ ಡ್ರಾ ನಡೆಯಲಿದೆ.  ರಾತ್ರಿ ೯ಕ್ಕೆ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಜುಲೈ ೬ರಂದು ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ರ ವರೆಗೆ ಸಂಘದ ಪದಾಧಿಕಾರಿಗಳಿಗೆÀ  ಸನ್ಮಾನ ಸಮಾರಂಭ ಹಾಗೂ ನೆನಪಿನ ಕಾಣಿಕೆ ವಿತರಣೆ ಕಾರ್ಯಕ್ರಮ  ನಡೆಯಲಿದ್ದು, ಮಧ್ಯಾಹ್ನ ೨ರಿಂದ ಸಂಜೆ ೫ರ ವರೆಗೆ ಸಮಾರೋಪ ಸಮಾರಂಭ,  ಮಳಿಗೆ ಪ್ರದರ್ಶನಕಾರರಿಗೆ ಮತ್ತು ಆಯೋಜಕರಿಗೆ ಸನ್ಮಾನ ಸಮಾರಂಭ ವ

Please follow and like us:
error