ಕೊನೆಗೂ ಬಗೆಹರಿದ ಬಿಜೆಪಿ ಟಿಕೇಟ್ ಗೊಂದಲ!

ಕೊಪ್ಪಳ : ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಬಗ್ಗೆ ಇದ್ದ ಗೊಂದಲ ಕೊನೆಗೂ ಅಂತ್ಯ ಕಂಡಿದೆ. ಸಿ.ವಿ.ಚಂದ್ರಶೇಖರ್ ಅಭ್ಯರ್ಥಿ ಎಂದು ಘೋಷಣೆಯಾದ ನಂತರ ನಡೆದ ಬೆಳವಣಿಗೆಗಳು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವಂತಾಗಿತ್ತು. ಒಂದು ವಾರಕಾಲ ಕೊಪ್ಪಳದ ಟಿಕೆಟ್ ವಿವಾದ ರಾಜ್ಯ ರಾಜಧಾನಿ ತಲುಪಿತ್ತು. ಕೊನೆಗೂ ಅಮರೇಶ ಕರಡಿಗೆವಬಿ ಪಾರಂ ಸಿಕ್ಕಿದೆ ಎಂದು ಹೇಳಲಾಗಿದೆ. ಹೀಗಾಗಿ ನಾಳೆ ಬೆಳಿಗ್ಗೆ ೧೦:೩೦ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂದಿಸಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಸಹ ಹಾಕಲಾಗಿದೆ. ಹೀಗಾಗಿ ಸದ್ಯಕ್ಕೆ ಟಿಕೆಟ್ ಗೊಂದಲ ಮುಗಿದಿದೆ ಎನ್ನಲಾಗಿದೆ. ಟಿಕೆಟ್ ತಪ್ಪಿಸಿಕೊಂಡ ಸಿ.ವಿ.ಚಂದ್ರಶೇಖರ ಮುಂದಿನ ನಡೆ ಏನು ಎನ್ನುವುದು ಎಲ್ಲರ ಕುತೂಹಲದ ಪ್ರಶ್ನೆಯಾಗಿದೆ.

Related posts