ಕೊಡುಗು ನೆರೆ ಸಂತ್ರಸ್ಥರಿಗೆ ಸಹಾಯಧನ

Koppal News   ತಾಲೂಕಿನ ಬೂದಗುಂಪಾ ಗ್ರಾಮದ ಶ್ರೀ ಕರಿಯಮ್ಮದೇವಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ (ರಿ) ಯ ಅಡಿಯಲ್ಲಿ ಡಾ. ರಾಧಾಕೃಷ್ಣನ್ ಪಬ್ಲಿಕ ಸ್ಕೂಲ್ ವತಿಯಿಂದ ಉಪಜಿಲ್ಲಾಧಿಕಾರಿ ಶ್ರೀಮತಿ ಗೀತಾರವರ ಮೂಲಕ ಕೊಡುಗು ನೆರೆ ಸಂತ್ರಸ್ಥರಿಗೆ ಸಹಾಯಧನ ನೀಡಲಾಯಿತು.
ಶಾಲೆಯ ಮಕ್ಕಳು, ಶಿಕ್ಷಕವೃಂದದವರು ಹಾಗೂ ಗ್ರಾಮದ ಹಿರಿಯರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇಣಿಗೆಯನ್ನು ಸಂಗ್ರಹಿಸಿ ಸಂತ್ರಸ್ಥರಿಗೆ ನೀಡಲಾಯಿತು. 
ಈ ಸಂದರ್ಬದಲ್ಲಿ ಸಂಸ್ಥೆಯ ಅಧ್ಯಕ್ಷ ಮಧುಸುದನ್ ಡೊಳ್ಳಿನ, ಉಪಾಧ್ಯಕ್ಷ ಮಂಜನಾಥ ಭೋವಿ, ಶಿಕ್ಷಕರಾದ ಚಿದಾನಂದ, ಮಹೇಶ ಬಡಿಗೇರ, ಗೀತಾ ಡೊಳ್ಳಿನ, ಅಮರೇಶ ಕಮ್ಮಾರ, ಶೇಷಮ್ಮ ಹಡಪದ, ಗಂಗಮ್ಮ ಹಲಿಗೇರಿ, ಸುಧಾ, ರೇಣುಕಾ ಪೂಜಾರ, ಯಮನೂರ ಸ್ವಾಮಿ ವಾಲ್ಮೀಕಿ ಇತರರು ಉಪಸ್ಥಿತರಿದ್ದರು.

 

: ಯಲಬುರ್ಗಾ ತಾಲೂಕಿನ ತಳಕಲ್ಲ ಗ್ರಾಮದ ಜ್ಷಾನದಾಹಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ವತಿಯಿಂದ ಕೊಡಗು ನಿರಾಶ್ರಿತರ ಸಹಾಯಕ್ಕಾಗಿ ನಿಧಿಯನ್ನು ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕವೃಂದದವರು ಹಾಗೂ ಗ್ರಾಮದ ಸಾರ್ವಜನಿಕರಿಂದ ಸಂಗ್ರಹಿಸಿ

ಎಡಿಸಿ ಮೂಲಕ ಕೊಡಗು ನಿರಾಶ್ರಿತರಿಗೆ ದೇಣಿಗೆ ನೀಡಿದರು.