ಕೊಡದಾಳ; ಮಕ್ಕಳಿಂದ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು

ಕೊಪ್ಪಳ ಜ.೩೦;
ತಾಲ್ಲೂಕಿನ ಕೊಡದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಗಣರಾಜ್ಯೋತ್ಸವ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ . ಕೊಪ್ಪಳದವರೇ ಆದ ಯುವಬರಹಗಾರ ನಾಗರಾಜನಾಯಕ ಡಿ ಡೊಳ್ಳಿನ ರಚಿಸಿದ “ತಂಬಿಗೆ ಸಿದ್ಧ ನಿದ್ದೇಲಿ ಎದ್ದ” ಕಥೆಯನ್ನು ನಾಟಕವಾಗಿ ಅಭಿನಯಿಸಿದರು.

ಈ ಕಥೆಯನ್ನು ರಂಗದ ಮೇಲೆ ತರಲು ಅದೇ ಗ್ರಾಮದ ವಿಸ್ತಾರ ಸಂಸ್ಥೆಯ ನಾಟಕ ಕಲೆ ಡಿಪ್ಲೋಮಾ ಪದವೀಧರ ಹುಲ್ಲೇಶ್ ಹರಿಜನ ಮಾರ್ಗದರ್ಶನ ನೀಡಿ, ಮಕ್ಕಳಿಗೆ ನೃತ್ಯ, ನಾಟಕ ಕಲಿಸಿ ನಿರ್ದೇಶನ ಮಾಡಿದರು. ನಾಟಕ ನೋಡಿದ ಗ್ರಾಮದ ಜನತೆ, ಮಕ್ಕಳ ಸಂಭಾಷಣೆ ,ಅಭಿನಯಕ್ಕೆ ಸಂತಸ ವ್ಯಕ್ತಪಡಿಸಿದರು,

ನಾಟಕ ಪ್ರದರ್ಶನಕ್ಕೂ ಮೊದಲು ಕಥೆ ರಚನೆಕಾರ ನಾಗರಾಜನಾಯಕ ಡಿ.ಡೊಳ್ಳಿನ ಅವರಿಗೆ ಶಾಲೆಯ ವತಿಯಿಂದ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ನಾಗರಾಜನಾಯಕ ಡೊಳ್ಳಿನ ಮಕ್ಕಳಿಗೋಸ್ಕರವೇ ಬರೆದ ಕಥೆಯು, ಈ ರೀತಿ ರಂಗದ ಮುಖಾಂತರ ಮಕ್ಕಳಿಗೆ ಮತ್ತು ಗ್ರಾಮದ ಜನತೆಗೆ ತಲುಪುತ್ತಿರುವುದಕ್ಕೆ ಸಂತೋಷವಾಗಿದೆ. ಈ ವಿನೂತನ ಕಾರ್ಯಕ್ಕೆ ಮುಂದಾದ ಶಾಲಾ ಮುಖ್ಯ ಶಿಕ್ಷಕರಾದ ಶಿವಪ್ಪ ಜೋಗಿ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಈ ತರಹದ ಬೆಳವಣಿಗೆಗಳಿಂದ ನಾವು ಮಕ್ಕಳಿಗೋಸ್ಕರ ಇನ್ನೂ ಹೊಸ ಹೊಸ ಕತೆ, ನಾಟಕಗಳನ್ನು ತಲುಪಿಸಬಹುದು ಎಂದರು.
ಮುಖ್ಯ ಶಿಕ್ಷಕರಾದ ಶಿವಪ್ಪ ಜೋಗಿ ಮಾತನಾಡಿ ಮಕ್ಕಳಿಗೆ ಪಠ್ಯದ ಜೊತೆಗೆ ಈ ತರಹದ ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕಾದ್ದು ಶಿಕ್ಷಕರಾದ ನಮ್ಮ ಕರ್ತವ್ಯ ಎಂದರು.
ನಾಟಕದಲ್ಲಿ ವಿದ್ಯಾರ್ಥಿಗಳಾದ ಷಣ್ಮುಖ, ಶಿವಕುಮಾರ, ಸೋಮಶೇಖರ,ಶಿವರಾಜ,ಲಿಂಗರಾಜ ಯಶೋಧಾ ನೈಜ ಅಭಿನಯ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ಗ್ರಾಮದ ಹಿರಿಯರು ಹಾಜರಿದ್ದರು

Please follow and like us:
error