ಕೊಡಗು ನೆರೆ ಸಂತ್ರಸ್ತರಿಗೆ ಅಂಜುಮನ್ ಕಮಿಟಿಯಿಂದ ದೇಣಿಗೆ


ಕೊಪ್ಪಳ : ಕೊಡಗು ನೆರೆ ಸಂತ್ರಸ್ತರಿಗಾಗಿ ಇತ್ತೀಚಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸೇರಿದಂತೆ ಅಂಜುಮನ್ ಕಮೀಟಿಯಿಂದ ಸಂಗ್ರಹಿಸಿದ ೩೫ ಸಾವಿರ ರೂ. ದೇಣಿಗೆಯನ್ನು ಶನಿವಾರ ಕೊಪ್ಪಳ ಉಪವಿಭಾಗಾಧಿಕಾರಿಯವರಿಗೆ ಹಸ್ತಾಂತರ ಮಾಡಲಾಯಿತು. ನೆರೆ ಹಾವಳಿಯಿಂದ ಸಂತ್ರಸ್ತರಾದ ಕೊಡಗು ಜಿಲ್ಲೆಯ ಜನತೆಯ ನೆರವಿಗಾಗಿ ಕೊಪ್ಪಳ ಜಿಲ್ಲೆಯ ಅಂಜುಮನ್ ಕಮಿಟಿ ಸದಸ್ಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಮುದಾಯದವರಲ್ಲಿ ದೇಣಿಗೆ ಸಂಗ್ರಹಿಸಿದರು. ಸಂಗ್ರಹಿಸಿದ ೩೫ ಸಾವಿರ ದೇಣಿಗೆ ಹಣವನ್ನು ಕೊಪ್ಪಳ ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಅವರ ಮೂಲಕ ಸಿಎಂ ರೀಲಿಫ್ ಪಂಡ್ ಗೆ ಸಲ್ಲಿಸಿದರು. ಈ ವೇಳೆ ಅಂಜುಮನ್ ಕಮೀಟಿ ಅಂಜುನ್ ಕಮಿಟಿ ಅಧ್ಯಕ್ಷ ಕಾಟನ್ ಪಾಷಾ, ಮಾನ್ವಿ ಪಾಷಾ, ಜಾಫರ್ ಸಾಬ್, ಖಾದರ್ ಸಾಬ್, ಮಹ್ಮದ್ ಹುಸೇನಿ, ಇಪ್ಪು, ಹಿಜಾರತ್ ಅಲಿ, ರಾಜಾಬಕ್ಷಿ ಎಚ್ ವಿ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.