ಕೊಡಗಿನ ನೆರೆ ಸಂತ್ರಸ್ತರಿಗೆ ಕೊಪ್ಪಳದ ಇನ್ನರ್‌ವ್ಹೀಲ್ ಕ್ಲಬ್ ಸಹಾಯಹಸ್ತ


ಕೊಪ್ಪಳ : ಪ್ರಕೃತಿಯ ಮಾತೆಯ ವಿಕೋಪಕ್ಕೆ ಉಂಟಾದ ಅತಿವೃಷ್ಟಿಯಿಂದ ನಲುಗಿದ ಕೊಡಗಿನ ನೆರೆ ಸಂತ್ರಸ್ಥರಿಗೆ ಕೊಪ್ಪಳದ ಪ್ರತಿಷ್ಠೀತ ಸಂಸ್ಥೆಯಾದ ಇನ್ನರ್‌ವ್ಹೀಲ್ ಕ್ಲಬ್ ಸಹಾಯಸ್ತ ಚಾಚಿದೆ,ಸಂಸ್ಥೆಯು ನೆರೆ ಸಂತ್ರಸ್ಥರಿಗೆ ಅಕ್ಕಿ, ಬೇಳೆ, ಬಿಸ್ಕೀಟ್, ತಟ್ಟೆ, ಲೋಟಾ, ೨೧೭೦೦ ರೂ ಹಣದ ನೆರವುವನ್ನು ನೀಡಿ ಮಾನವಿಯತೆಯನ್ನು ಮೆರೆದಿದೆ.
ಈ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಮಮತಾ ಶೆಟ್ಟರ್, ಕಾರ್ಯದರ್ಶಿ ನೀತಾ ತಂಬ್ರಳ್ಳಿ, ಖಚಾಂಚಿ ಸುಮಂಗಲಾ ಹಂಚಿನಾಳ, ಐಎಸ್‌ಓ ಶರಣಮ್ಮ ಪಾಟೀಲ್, ಸಂಸ್ಥೆಯ ವಿಜಯಾ ಹಂಚಾಟೆ, ಪದ್ಮಾ ಜೈನ್, ಇಂದುಮತಿ, ಸುಧಾ ಶೆಟ್ಟರ್, ಚಿತ್ರಾ ಬಣ್ಣದಬಾವಿ, ಸವಿತಾ ಸವಡಿ, ಡಾ.ರಾಧಾಬಾಯಿ ಕುಲಕರ್ಣಿ, ಹೇಮಾ ಬಳ್ಳಾರಿ, ವಿಜಯಾ ಡಿಗ್ಗಾವಿ ಉಪಸ್ಥಿತರಿದ್ದರು.