ಕೊಟ್ಯಾಂತರ ಕನ್ನಡಿಗರ ಮೆಚ್ಚುಗೆ ಪಡೆದ ಕೆಜಿಎಫ್ ಚಿತ್ರದ ಗರ್ಭದಿ.. ನನ್ನಿರಿಸಿ… ಹಾಡು ಬರೆದ ಕೊಪ್ಪಳದ ಕಿನ್ನಾಳ ರಾಜ

ವಿಶ್ವಾದ್ಯಂತ ಕನ್ನಡದ ಕೆಜಿಎಫ್ ಚಿತ್ರ ಹವಾ ಎಬ್ಬಿಸಿದೆ. ಈಗಾಗಲೇ ಕೆಜಿಎಫ್​​ನ ಟ್ರೈಲರ್​ ಹಾಗೂ ಹಾಡುಗಳು ಬಿಡುಗಡೆಯಾಗಿ ಚಿತ್ರದ ಕ್ರೇಜ್​​ ಮತ್ತಷ್ಟು ಹೆಚ್ಚಿಸಿವೆ. “ಗರ್ಭದಿ.. ನನ್ನಿರಿಸಿ…ಊರಲಿ ನಡೆಯುತಿರೆ…ತೇರಲಿ ಕುಳಿತಂತೆ, ಅಮ್ಮಾ..” ಎಂಬ ತಾಯಿ ಸೆಂಟಿಮೆಂಟ್​ ಹಾಡು ಹಾಗೂ ಅದರ ಸಾಹಿತ್ಯ ಕನ್ನಡಿಗರ ಹೃದಯ ಗೆದ್ದಿದೆ. ಕೆಜಿಎಫ್ ಚಿತ್ರದ ಈ ಮದರ್ ಸೆಂಟಿಮೆಂಟ್ ಹಾಡನ್ನು ಬರೆದವರು ಕೊಪ್ಪಳದ ಕಿನ್ನಾಳ ರಾಜ. ಈ ಹಾಡು ಈಗ ಕೊಟ್ಯಾಂತರ ಕನ್ನಡಿಗರ ಮೆಚ್ಚುಗೆ ಗಳಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಹಾಡು ಹುಟ್ಟಿದ ಕ್ಷಣದ ಬಗ್ಗೆ ಕಿನ್ನಾಳ ರಾಜ, ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಕೆಜಿಎಫ್ ಅನ್ನೋ ದೊಡ್ಡ ಚಿತ್ರದಲ್ಲಿ ನಾನೊಬ್ಬ ಸಾಹಿತಿ ಅಂತಾ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಕೆಜಿಎಫ್ ಗರ್ಭದಿಂದ ಹಾಡನ್ನು ಹಿಟ್ ಮಾಡಿದ್ದೀರಾ. ತಾಯಿ ಬಗ್ಗೆ ಇರುವ ಹಾಡು ಇದು.. ನಿಮ್ಮ ಹೊಗಳಿಕೆ.. ಹಾರೈಕೆ ಏನೇ ಇದ್ದರು ಇದೆಲ್ಲಾ ಸಲ್ಲಿಸಬೇಕಾದದ್ದು ನಿರ್ದೇಶಕ ಪ್ರಶಾಂತ ನೀಲ್​ ಹಾಗೂ ಸಂಗೀತ ನಿರ್ದೇಶಕರಾದ ರವಿ ಸರ್‌ಗೆ, ಪ್ರಶಾಂತ್ ಸರ್‌ ಹೇಳಿದ್ದ ರೀತಿ ಮನಸ್ಸಿಗೆ ಕಟ್ಟಿಕೊಟ್ಟಿತ್ತು.. ರವಿ ಸರ್ ಒಂದು ಮಾತು ಹೇಳಿದ್ರು ಹಾಡು ಅನ್ನುವುದಕ್ಕಿಂತಲೂ ನಿಮ್ಮ ತಾಯಿ ಬಗ್ಗೆ ಏನಾದ್ರು ಬರೆಯುವುದಕ್ಕೆ ಅವಕಾಶ ಅಂತ ಅನ್ಕೋಳ್ಳಿ, ಚೆನ್ನಾಗಿ ಬರೆಯಿರಿ ಅಂತಾ ಹೇಳಿದ್ರು. ಆ ಎರಡು ಜವಾಬ್ದಾರಿ ಗರ್ಭದಿಂದ ಹಾಡು ಹುಟ್ಟುವುದಕ್ಕೆ ಕಾರಣವಾಯ್ತು. ಎಲ್ಲರಿಗೂ ತುಂಬಾ ಧನ್ಯವಾದಗಳು.. ಹಾಡು ಬಗ್ಗೆ ಎಷ್ಟೇ ಹೇಳಿದ್ರು ಕಮ್ಮಿ. ನಿಮ್ಮೆಲ್ಲ ಹೊಗಳಿಕೆ ಸರ್‌ಗೆ ಸಲ್ಲಬೇಕಾದ್ದದು. ಇದೇ ತಿಂಗಳ 21ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ನೀವು ಎಷ್ಟು ಕುತೂಹಲದಿಂದ ಕಾಯುತ್ತಿದ್ದೀರೋ, ಅಷ್ಟೇ ಕುತೂಹಲದಿಂದ ನಾನು ಕೂಡಾ ನನ್ನ ಹಾಡುನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದೇನೆ. ನನ್ನತಂಹ ಹೊಸಬನಿಗೆ ನಿಮ್ಮಲ್ಲೆರ ಪ್ರೊತ್ಸಾಹ ಅಗತ್ಯ. ಸದಾ ನಿಮ್ಮೆಲ್ಲರ ಆಶೀರ್ವಾದ ಇರಲಿ ಅಂತಾ ಕೇಳಿಕೊಳ್ಳುತ್ತೇನೆ ಎಂದು ಕಿನ್ನಾಳ ರಾಜ ಹೇಳಿದ್ದಾರೆ

Please follow and like us:
error