fbpx

ತಂಗಡಗಿ ಚಾಣಾಕ್ಷತನಕ್ಕೆ ಅತಂತ್ರ ಕೈ ನಾಯಕ ಬಿಜೆಪಿಗೆ

ನಾಗಪ್ಪ ಸಾಲೋಣಿಗೆ ಪರ್ಯಾಯವಾಗಿ ಕುರುಬ ಸಮುದಾಯದ ನಾಯಕರನ್ನು ಬೆಳೆಸಿರುವ ತಂಗಡಗಿ ಚಾಣಾಕ್ಷತನಕ್ಕೆ ಅತಂತ್ರಗೊಂಡ ನಾಯಕ ಬಿಜೆಪಿ ಸೇರಲು ರೆಡಿ

ಕೊಪ್ಪಳದ ಕಾಂಗ್ರೇಸಿನ ಪ್ರಭಾವಿ ಮುಖಂಡ ಹಾಗೂ ಕುರುಬ ಸಮುದಾಯದ ಪ್ರಭಾವಿ ನಾಯಕ ಮಾಜಿ ಸಚಿವ ಸಾಲೋಣಿ ನಾಗಪ್ಪ ಇದೀಗ ಬಿಜೆಪಿ ಸೆರ್ಪಡೆಯಾಗಲು ವೇದಿಕೆ ಸಿದ್ದವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೊಪ್ಪಳದ ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಬಿಜೆಪಿ ನಾಯಕರು ಸಾಲೋಣಿ ನಾಗಪ್ಪರವರ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಸಾಲೋಣಿ ನಾಗಪ್ಪ ಸಹ ಸಹಮತ ವ್ಯಕ್ತಪಡಿಸಿದ್ದು, ಇದೇ 5 ಅಥವಾ 6 ತಾರೀಖಿನಂದು ಬಿಜೆಪಿ ಸೆರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಕನಕಗಿರಿ ಕ್ಷೇತ್ರದಲ್ಲಿ ಕುರುಬ ಸಮುದಾಯ ಮತಗಳು ಹೆಚ್ಚು ಇರೋದ್ರಿಂದ ಒಂದು ವೇಳೆ ಸಾಲೋಣಿ ನಾಗಪ್ಪ ಬಿಜೆಪಿ ಸೆರ್ಪಡೆಯಾದ್ರೆ ಕಾಂಗ್ರೇಸ್ ಗೆ ಹೊಡೆತ ಕೊಡಲಿದೆ ಎಂದೇ ಹೇಳಲಾಗಿದೆ. ಸಾಲೋಣಿ ನಾಗಪ್ಪ ಬಿಜೆಪಿಗೆ ಆಗಮನದಿಂದ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ, ಬಿಜೆಪಿ ಅಭ್ಯರ್ಥಿ ದಡೆಸೂಗೂರು ಬಸವರಾಜಗೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನುವ ಮಾತು ಕೇಳಿಬರುತ್ತಿವೆ. ಸಾಲೋಣಿ ನಾಗಪ್ಪ ಕೆಲದಿನಗಳಿಂದ ಶಾಸಕ ಶಿವರಾಜ ತಂಗಡಗಿ ವಿರುದ್ದ ಅಸಮಾಧಾನಗೊಂಡಿದ್ರು. ಇದ್ರಿಂದ ಸಹಜವಾಗಿಯೇ ಶಾಸಕ ಶಿವರಾಜ್ ತಂಗಡಗಿಗೆ ತಲೆನೋವಾಗಿ ಪರಿಣಮಿಸಲಿದೆ. ಆದರೆ ನಾಗಪ್ಪ ಸಾಲೋಣಿಗೆ ಪರ್ಯಾಯವಾಗಿ ಕನಕಗಿರಿ ಕ್ಷೇತ್ರದಲ್ಲಿ ಕುರುಬ ಸಮುದಾಯದ ನಾಯಕರನ್ನು ಬೆಳೆಸಿರುವ ತಂಗಡಗಿ ಚಾಣಾಕ್ಷತನಕ್ಕೆ ಅತಂತ್ರಗೊಂಡಿರುವ ಸಾಲೋಣಿ ನಾಗಪ್ಪ ಬಿಜೆಪಿ ಸೇರಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಜಿ.ಪಂ. ಉಪಾದ್ಯಕ್ಷ , ತಾಲೂಕ ಪಂಚಾಯತ್ ಅದ್ಯಕ್ಷ, ಎಪಿಎಂಸಿ, ಪಟ್ಟಣ ಪಂಚಾಯತ್ ನಲ್ಲಿ ಕುರುಬ ಸಮುದಾಯದವರಿಗೆ ಶಿವರಾಜ್ ತಂಗಡಗಿ ಹೆಚ್ಚಿನ ಆದ್ಯತೆ ನೀಡಿದ್ದಾರೆ ಈಗಾಗಿ ಸಾಲೋಣಿ ನಾಗಪ್ಪ ಬಿಜೆಪಿ ಸೇರಿದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ ಎನ್ನುವದು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯ..

Please follow and like us:
error
error: Content is protected !!