ಕೈ ಉತ್ಪನ್ನ ಮೇಲಿನ ಜಿಎಸ್‌ಟಿ ತೆರಿಗೆ ವಿರೋಧಿಸಿ ಪಾದಯಾತ್ರೆ

ಕೊಪ್ಪಳ : ಬೃಹತ ಉದ್ದೆಮಿಗಳಿಂದ ಅಸಮಾನತೆ ಹೆಚ್ಚುವುದಲ್ಲದೆ ಪರಿಸರವೂ ನಾಶವಾಗಿ ಮನುಷ್ಯರಲ್ಲಿ ಅಸಮಾಧಾನ ಅಸ್ಥಿರತೆ ಉಂಟಾಗಿ ಸಾಮಾಜಿಕ ಸ್ವಾಸ್ತ್ಯತೆ ಹಾಳಾಗುತ್ತದೆ ಆದ್ದರಿಂದ ಕೈ ಉತ್ಪನ್ನಗಳಿಗೆ ಉತ್ತೇಜನ ನೀಡಿ ಕಾಯಕ ಮಹತ್ವ ಸಾರುವ ಮೂಲಕ ನಿಜವಾದ ಅಭಿವೃದ್ಧಿ ಸಾಧಿಸಬೇಕಿದೆ ಎಂದು ಹಿರಿಯ ರಂಗಕರ್ಮಿ ಚಿಂತಕ ಪ್ರಸನ್ನರವರು ಪಾದಯಾತ್ರೆ ಸಿದ್ದತಾ ಸಭೆಯಲ್ಲಿ ಹೇಳಿದರು.
ಅವರು ಅವರು ಜ.೧೭ ರಂದು ನಗರದ ಪ್ರವಾಸಿ ಮಂದಿರದಲ್ಲಿ ಸ್ಥಳಿಯ ಪ್ರಮುಖ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿರುವ ಜಿಎಸ್‌ಟಿ ತೆರಿಗೆ ಅತ್ಯಂತ ಕೆಟ್ಟದಾಗಿದ್ದು ಕೈಕಸುಬಿನ ಜನರಿಗೆ ಮುಂಜಾಗೃತವಾಗಿ ಅದನ್ನು ವಿರೋಧಿಸಿ ಈಗಾಗಲೇ ಹಲವು ಕಾರ್ಯಕ್ರಮ ನಡೆಸಲಾಗಿದ್ದು ಇದೇ ಜ. ೩೦ ರಂದು ಕೊಡೆಕಲ್ಲಿನಿಂದ ಮಂಟೆಸ್ವಾಮಿಯ ಮಂದಿರದವರಗೆ ಪಾದಯಾತ್ರೆ ನಡೆಸಲಾಗುವುದು ಸೌರ್ಹಾತೆಯ ಸಂತನಾದ ಕೊಡೆಕಲ್ಲು ಚನ್ನಬಸವಣ್ಣನ ಕ್ಷೇತ್ರದಲ್ಲಿ ಕಾಯಕ ಸಮಾವೇಶ ನಡೆಸಲಾಗುತ್ತದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.
ಪ್ರಸನ್ನರವರ ಕಾರ್ಯ ಚಟುವಟಿಕೆಗಳಿಗೆ ಜನಾಂದೋಲನದ ವಿವರ ನೀಡಿದ ಒಡನಾಡಿ ವಿಠ್ಠಪ್ಪ ಗೋರಂಟ್ಲಿ ಅವರು ಎಲ್ಲಾ ಕಾರ್ಯಗಳಿಗೆ ಸಹಕರಿಸುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ಅಲ್ಲಮಪ್ರಭು ಬೆಟದೂರು, ವಿ.ಬಿ.ರಡ್ಡೇರ, ಎ.ಎಂ.ಮದರಿ, ಈಶ್ವರ ಹತ್ತಿ, ಬಸವರಾಜ ಶೀಲವಂತರ, ರಾಜಾಭಕ್ಷಿ, ಕಾಶಪ್ಪ ಕರಿಗಾರ, ರಾಜೂರ, ಮಹಾಂತೇಶ ಕೊತಬಾಳ, ಹಾಲ್ಕುರಿಕೆ ಶಿವಶಂಕರ ಸೇರಿದಂತೆ ಮುಂತಾದವರು ಇದ್ದರು.

Please follow and like us:
error