ಕೇಂದ್ರ ಸಚಿವ ಅನಂತಕುಮಾರ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಕೊಪ್ಪಳ: ನಗರದ ಅಶೋಕ ವೃತ್ತದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಜಿಲ್ಲೆಯ ಕುಕನೂರಿನಲ್ಲಿ ಭಾನುವಾರದಂದು ನಡೆದ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಶಾಸಕರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದರು.

ಸಂವಿಧಾನ ಯಾರೊಬ್ಬರ ಸ್ವತ್ತಲ್ಲ. ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕು ನೀಡಿರುವ ಸಂವಿಧಾನವು ವಿಶ್ವದಲ್ಲೇ ಮಾತ್ಯತೆ ಪಡೆದಿದೆ. ಸಂವಿಧಾನವನ್ನು ಬದಲಾಯಿಸುವ ಹಕ್ಕು ಈ ರಾಷ್ಟ್ರದ ಯಾವುದೇ ರಾಜಕೀಯ ಪಕ್ಷಕ್ಕೆ ಇರುವುದಿಲ್ಲ. ಆದ ಕಾರಣ ಕೇಂದರ ಸಚಿವ ಅನಂತಕುಮಾರ ಹೆಗಡೆ ಅವರ ಸ್ವೇಚ್ಚಾಚ್ಚಾರದಂತೆ ಮಾತನಾಡಿ ಸಮಾಜದಲ್ಲಿ ಗೊಂದಲ ಸೃಷ್ಠಿ ಮಾಡಬಾರದು. ಮತ್ತೇ ಈರೀತಿಯ ಹೇಳಿಕೆಗಳು ಸಚಿವರ ಬಾಯಿಂದ ಬಂದರೆ ರಾಜ್ಯಾದ್ಯಂತ ಉಘ್ರ ಪ್ರತಿಭಟನೆ ಮಾಡಿ ಸಚಿವರ ರಾಜಿನಾಮೆ ಪಡೆಯಲು ಆಗ್ರಹಿಸಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಪ್ರಧೀಖಾರದ ಅಧ್ಯಕ್ಷ ಜುಲ್ಲು ಖಾದ್ರಿ, ಬ್ಲಾಕ್ ಅಧ್ಯಕ್ಷರುಗಳಾದ ಸುರೇಶ ಭುಮರಡ್ಡಿ, ಕಾಟನ್ ಪಾಷಾ, ನಗರಸಬಾ ಸದಸ್ಯರುಗಳಾದ ಮುತ್ತುರಾಜ ಕುಷ್ಠಗಿ, ಬಾಳಪ್ಪ ಬಾರಕೇರ, ರಾಮಣ್ಣ ಹದ್ದೀನ್, ಮುಖಂಡರುಗಳಾದ ಪ್ರಸನ್ನ ಗಡಾದ, ಗವಿಸಿದ್ದಪ್ಪ ಮುದಗಲ್, ಗಾಳೆಪ್ಪ ಪೂಜಾರ, ಸವಿತಾ ಗೋರಂಟ್ಲಿ, ಹುಲಿಗೆಮ್ಮ ತಟ್ಟಿ, ಕೃಷ್ಣಾ ಇಟ್ಟಂಗಿ, ಯಮನೂರಪ್ಪ ನಾಯಕ್, ಮಂಜುನಾಥ ಗೊಂಡಬಾಳ, ಜಾಕೀರ್ ಕಿಲ್ಲೆದಾರ, ಮಾನ್ವಿ ಪಾಷಾ, ವಕ್ತಾರ ಅಕ್ಬರಪಾಷಾ ಪಲ್ಟನ್ ಸೇರಿಂದತೆ ಇತರರು ಇದ್ದರು.

Please follow and like us:
error

Related posts