ಕೇಂದ್ರದ ನೆರವು ಪಡೆದು ಸಿದ್ದರಾಮಯ್ಯ ತಮ್ಮ ಜೀವವನ್ನಾದರೂ ಉಳಿಸಿಕೊಳ್ಳಬೇಕು- ಕೆ.ಎಸ್.ಈಶ್ವರಪ್ಪ

ಕೇಂದ್ರದ ಗೃಹ ಸಚಿವರರಿಗೆ ನನ್ನ ರಕ್ಷಣೆಗೆ ನೆರವಿಗೆ ಬನ್ನಿ ಎಂದು ಸಿಎಂ ಮನವಿ ಮಾಡಬೇಕು.ವಿಶ್ವನಾಥ ಶೆಟ್ಟಿ ಅವರ ಕೊಲೆ ಯತ್ನ ನಡೆದಿದೆ, ಸಿಎಂ ಸಿದ್ದರಾಮಯ್ಯರ ಕೊಲೆ ಮಾಡಬಹುದು. ಸಿಎಂ ಕೇಂದ್ರದ ನೆರವು ಪಡೆದು ಸಿದ್ದರಾಮಯ್ಯ ತಮ್ಮ ಜೀವವನ್ನಾದರೂ ಉಳಿಸಿಕೊಳ್ಳಬೇಕು. ರಾಜ್ಯ ಕೊಲೆಗಡುಕರ ರಾಜ್ಯವಾಗಿದೆ. ಹ್ಯಾರಿಸ್ ಪುತ್ರ ನಲಪಾಡ್ ವಿದ್ವತ್ ಮೇಲೆ ಹಲ್ಲೆ ಮಾಡಿದ್ದ.ಸಿದ್ದರಾಮಯ್ಯನ ಶಿಷ್ಯ ನಾರಾಯಣಸ್ವಾಮಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುವ ಬೆದರಿಕೆ ಹಾಕಿದೆ. ಕೊಲೆಗಡುಕರು, ಅತ್ಯಾಚಾರಿಗಳಿಗೆ ಪೊಲೀಸ್, ಸರ್ಕಾರದ ಭಯವಿಲ್ಲ.

ಅಶೋಕ ಖೇಣಿ ಕಾಂಗ್ರೆಸ್ ಸೇರ್ಪಡೆ ವಿಚಾರ. ಸದನ ಸಮಿತಿ ಅಧ್ಯಕ್ಷರಾಗಿ, ಕಾನೂನು ಸಚಿವ ಜಯಚಂದ್ರ ಅವರು ನೈಸ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವರದಿ ನೀಡಿದ್ದಾರೆ. ಆದಾಗ್ಯೂ ಖೇಣಿಯನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡು ಭ್ರಷ್ಟಾಚಾರವನ್ನು ಅಪ್ಪಿಕೊಂಡಿದ್ದಾರೆ.ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಸಿದ್ರಾಮಯ್ಯ ಹೇಳ್ತಾರೆ.ಆದರೆ ಯಡಿಯೂರಪ್ಪ ಮೇಲಿನ ಎಲ್ಲ ಕೇಸ್ ಗಳು ಡಿಸ್ಮಿಸ್ ಆಗಿವೆ.ಎಲ್ಲ ಹಿಂದುಳಿದ ಸಮಾಜಕ್ಕೆ ನೀವೆಷ್ಟು ದುಡ್ಡು ಕೊಟ್ರಿ? ಸಂಗೊಳ್ಳಿ ರಾಯಣ್ಣನ ನಂದಗಢ, ಕಾಗಿನೆಲೆಗೆ ಸಿಎಂ ಕಾಲಿಟ್ಟಿಲ್ಲಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಕಲಿ ನಾಯಕ. ನರೇಂದ್ರ ಮೋದಿ ಹಿಂದುಳಿದ ವರ್ಗದವರಿಗೆ ಅಸಲಿ ನಾಯಕ. ಹಿಂದುಳಿದ ಸಮಾಜದವರು ಬಿಜೆಪಿಗೆ ಬೆಂಬಲ‌ ಕೊಡ್ತಿದ್ದಾರೆ.ಮಾ. ೧೦ ರಂದು ಕೂಡಲ ಸಂಗಮದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದೆ.

ಉತ್ತರ ಕರ್ನಾಟಕದ ೧೦ ಜಿಲ್ಲೆಗಳ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬರಲಿದ್ದಾರೆ.ಒಂದು ಬಸವನ‌ ನಾಡಿನಲ್ಲಿ ಮತ್ತು ಮಾ.‌೨೫ ಕಾಗಿನೆಲಯಲ್ಲಿ ಉಳಿದ ಎಲ್ಲ ಜಿಲ್ಲೆಗಳ ಸಮಾವೇಶ ನಡೆಯಲಿದೆ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇದ್ದರೂ ಅದು ಕೊಲೆಗಡುಕರ ಸರ್ಕಾರ.

ಸಿದ್ದರಾಯಮ್ಮ ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್ ಗೆ ಬಂದರು. ೧೦ ಜನ್ಮ ಎತ್ತಿ ಬಂದರೂ ಆರ್ ಎಸ್ ಎಸ್ ನ್ನು ಏನು ಮಾಡೋಕೆ ಆಗೊಲ್ಲ. ಸಿದ್ದರಾಮಯ್ಯ ಕೊಲೆಗಡುಕರೊಂದಿಗೆ ನೇರ ಸಂಪರ್ಕ‌ ಹೊಂದಿದ್ದಾರೆ.ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಜೀವಂತ ದಾಖಲೆ ಎಂದರೆ ಅಶೋಕ ಖೇಣಿ

ಮೂರು ಅಂಶಗಳನ್ನು ಗಮನಿಸಿ ಪಕ್ಷದ ವರಿಷ್ಠರು ಟಿಕೆಟ್ ಕೊಡ್ತಾರೆ. ಸಿದ್ದರಾಮಯ್ಯ ಎಲ್ಲೆ ಚುನಾವಣೆಗೆ ಸ್ಪರ್ಧಿಸಿದರೂ ಸೋಲು ನಿಶ್ಚಿತ. ನಾನು ಶಿವಮೊಗ್ಗ ಬಿಟ್ಟು ಎಲ್ಲೂ ಹೋಗೋದಿಲ್ಲ ಎಂದು ಕೊಪ್ಪಳದಲ್ಲಿ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಕೊಪ್ಪಳದ ಭಾ.ಜ.ಪಾ.ಪಾರ್ಟಿ ಕಚೇರಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದ ಪೂರ್ವ ಸಿದ್ದತಾ ಸಭೆಯಲ್ಲಿ ಭಾಗವಹಿಸಿದರು
ಈ ಸಭೆಯ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರಾದ. ಕೆ.ಎಸ್.ಈಶ್ವರಪ್ಪನವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತನ ಸದಸ್ಯರಾದ ರಘುನಾಥ್ ಮಲ್ಕಾಪುರಿಯವರು.ಮಾಜಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು.ಮಾಜಿ ಶಾಸಕರಾದ ಶರಣಪ್ಪ ವಕೀಲರು.ಜಿಲ್ಲಾಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ. ಜೀ ವೀರಪ್ಪ. ದೊಡ್ಡನಗೌಡ ಪಾಟೀಲ್ ರವರು.ಪರಣ್ಣ ಮುನವಳ್ಳಿ.ಹಾಲಪ್ಪ ಆರ್ಚಾರ್ .ಚಂದ್ರಶೇಖರ ಕವಲೂರು. ಸಿ.ವಿ.ಚಂದ್ರಶೇಖರ. ಹೆಚ್.ಗಿರೇಗೌಡ್ರು. ತಿಪ್ಪೇರುದ್ರಸ್ವಾಮಿ. ವಿರುಪಾಕ್ಷಪ್ಪ ಬಾರಕೇರಿ. ಕಳಕಪ್ಪ ಜಾಧವ್. ಹಾಗೂ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದರು.