ಕೆ. ರಾಘವೇಂದ್ರ ಹಿಟ್ನಾಳ ರಿಂದ ಗಬ್ಬೂರ ಗ್ರಾಮದ ಚೆಕ್‌ಡ್ಯಾಂ ಕಾಮಗಾರಿ ವೀಕ್ಷಣೆ

88ಲಕ್ಷ ಮೊತ್ತ, 53 ಉದ್ದ ಹಾಗೂ 10 ಅಡಿ ಆಳದಲ್ಲಿ ಚೆಕ್‌ಡ್ಯಾಂ ನಿರ್ಮಾಣ

ಕೊಪ್ಪಳ : ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಮಂಗಳವಾರದಂದು ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆಯುತ್ತಿರುವ ಸುಮಾರು ಅಂದಾಜು 88 ಲಕ್ಷದ ರೂ.ಗಳ ಚೆಕ್‌ಡ್ಯಾಂ ಕಾಮಗಾರಿಯನ್ನು ಪರಿಶೀಲಿಸಿದರು.

ಚೆಕ್‌ಡ್ಯಾಂ ಕಾಮಗಾರಿ ಕಾರ್ಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಮಾತನಾಡಿ, ಮಳೆ ನೀರಿನ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದ್ದು ಇಂತಹ ಚೆಕ್‌ಡ್ಯಾಂಗಳ ನಿರ್ಮಾಣದಿಂದ ಕೊಳವೆಬಾವಿ, ಬೊರ್‌ವೇಲ್‌ಗಳ ಅಂತರ್ಜಾಲ ರುದ್ದಿಯಾಗುತ್ತದೆ. ಅಲ್ಲದೇ ದನಕರಗಳಗ ನೀರಿನ ದಾಹ ನೀಗಿಸುವ ಸಲುವಾಗಿಯೂ ಸಹ ಇಂತಹ ಕಾರ್ಯಕ್ಕೆ ಮುಂದಾಗಿದ್ದೆವೆ. ಈ ನಿಟ್ಟಿನಲ್ಲಿ ಗಬ್ಬೂರ ಗ್ರಾಮದಲ್ಲಿ 88ಲಕ್ಷ ರೂ. ಮೊತ್ತದ 53 ಅಡಿ ಉದ್ದ ಹಾಗೂ 10 ಅಡಿ ಆಳದಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳಲ್ಲಿಯೂ ಸಹ ಚೆಕ್‌ಡ್ಯಾಂ ನಿರ್ಮಾಣಗಳ ಕಾರ್ಯ ಹಾಗೂ ಕೆರೆ ಹೂಳೆತ್ತುವ ಕಾರ್ಯವನ್ನು ಮುಂದುವರೆಸಲಾಗುವುದು. ರೈತರಿಗೆ ಅನುಕೂಲವಾಗುವಂತೆ ಹಲವಾರು ಜನಪರ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದ್ಯರಾದ ಎಸ್.ಬಿ. ನಾಗರಳ್ಳಿ ಹಾಗೂ ರಾಜಶೇಖರ ಹಿಟ್ನಾಳ್, ತಾಲೂಕ ಪಂಚಾಯತ್ ಅಧ್ಯಕ್ಷ ಬಾಲಚಂದ್ರನ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ, ಇಂಜಿನಿರ‍್ಸ್ಗಳು ಸೇರಿದಂತೆ ಹಲವು ಗಣ್ಯರು, ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error