ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ : ಸಿಹಿ ಹಂಚಿ ಸಂಭ್ರಮ

Koppal :: ಕೊಪ್ಪಳ ನಗರ ಬ್ಲಾಕ ಕಾಂಗ್ರೇಸ್ ಸಮಿತಿಯಿಂದ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ   ಡಿ. ಕೆ ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷರುಗಳಾದ ಸತೀಶ್ ಜಾರಕಿ ಹೂಳಿ, ಈಶ್ವರ ಖಂಡ್ರೆ, ಸಲೀಂ ಅಹಮದ್ ರವರಿಗೆ ಅಭಿನಂದನೆಗಳನ್ನು ನಗರದ ಅಶೋಕ ವೃತ್ತದಲ್ಲಿ ಸಿಹಿ ಹಂಚುವ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಘಟಕ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ   ಎಂ. ಪಾಷಾ ಕಾಟನ್‌ರವರು ಮಾತನಾಡುತ್ತ  ಡಿ. ಕೆ. ಶಿವಕುಮಾರ ಒಬ್ಬ ದಕ್ಷ ಚಾಣಾಕ್ಷ್ಯ, ಜನಪರ ಕಾಳಜಿ ಹೊಂದಿದ ನಾಯಾಕರಾಗಿದ್ದಾರೆ ಇವರಲ್ಲೆರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಹೊಸ ಹುರುಪು ಬಂದಿದ್ದು ಕಾರ್ಯಕರ್ತರಲ್ಲಿ ಪಕ್ಷದ ಸಂಘಟನೆಯಲ್ಲಿ ಸಕ್ರೀಯಾವಾಗಿ ಪಾಲ್ಗೊಳ್ಳಲು ಕರೆನೀಡಿದರು.ಈ ಸಂದರರ್ಭದಲ್ಲಿ ಎಪಿಎಂಸಿ ಅಧ್ಯಕ್ಷರಾದ ನಾಗರಾಜ ಚಳ್ಳಾರಿ, ಮಹಿಳಾ ಕಾಂಗ್ರೇಸ್ ಶ್ರೀಮತಿ ಇಂದಿರಾ ಬಾವಿಕಟ್ಟಿ, ಶ್ರೀಮತಿ ಕಿಶೋರಿ ಬೂದುನೂರ, ನಗರ ಸಭೆಯ ಸದಸ್ಯರಾದ ಅಕ್ಬರ್ ಪಾಷಾ ಪಲ್ಟನ್, ಗುರುರಾಜ ಹಲಗೇರಿ, ವಿರುಪಣ್ಣ ಮೋರನಾಳ, ಮುತ್ತುರಾಜ್ ಕುಷ್ಟಗಿ, ಹಾಗೂ ಮಾಜಿ ನಗರಸಭೆಯ ಸದಸ್ಯರಾದ ಮಾನ್ವಿಪಾಷಾ, ಪೀರಾಹುಸೇನ್ ಮುಜವಾರ ಮುಖಂಡರಾದ ಶಿವಕುಮಾರ ಶೆಟ್ಟರ್, ಶರಣಪ್ಪ ಸಜ್ಜನ, ನಾಗರಾಜ ಬಳ್ಳಾರಿ, ಎಸ್.ಬಿ. ಪಾಟೀಲ್, ಮಂಜುನಾಥ ಉಲ್ಲತ್ತಿ, ಸಲೀಂ ಅಳವಂಡಿ, ಯೂಸುಫ್, ಸಲೀಮ್ ಪಲ್ಟನ್, ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಧಿತರಿದ್ದರು

 

Please follow and like us:
error