ಕೆ.ಜಿ.ಪಿ ಗಾಮೆಂಟ್ಸ್ ಮ್ಯಾನೇಜರ್ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಜ. :  ಕೊಪ್ಪಳದ ಬಸ್ ನಿಲ್ದಾಣದ ಬಳಿಯ ಕೆ.ಜಿ.ಪಿ ಸಿಲ್ಕ್ & ಸಾರೀಸ್, ಟೆಕ್ಸಟೈಲ್ ಮತ್ತು ಗಾಮೆಂಟ್ಸ್ ಮಳಿಗೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ನೀಲೇಶ ತಂದೆ ವಾಸುದೇವ ರೇವಣಕರ ಎಂಬುವರು ಜ.03 ರಂದು ಬೆಳಗ್ಗೆ 11-30 ಗಂಟೆಗೆ ಕೆ.ಜಿ.ಪಿ ಸಾರಿಸ್ ಟೆಕ್ಸ್ ಟೈಲ್ ನಿಂದ ರೂ. 6,52,000/- ಗಳನ್ನು ಮಳಿಗೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲೆಂದು ಹೊರಗೆ ಹೋದವರು ನಾಪತ್ತೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವ್ಯಕ್ತಿಯ ಚಹರೆಯ ವಿವರ ಇಂತಿದೆ. ವಯಸ್ಸು. 31 ವರ್ಷ, ಎತ್ತರ – 5 ಫೀಟ್ 3 ಇಂಚು, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಮುಂದಲೆ ಬೊಕ್ಕು ತಲೆ. ದುಂಡು ಮುಖ, ಅಗಲ ಹಣೆ ಹೊಂದಿದ್ದು,  ಕಾಣೆಯಾದ ಸಂದರ್ಭ ಕಂದು ಬಣ್ಣದ ಶರ್ಟ್, ಕಪ್ಪು ಬಣ್ಣದ ಜೀನ್ಸ್ಪ್ಯಾಂಟ್ ಧರಿಸಿದ್ದಾನೆ. ಕನ್ನಡ, ಹಿಂದಿ, ಮರಾಠಿ, ಕೊಂಕಣಿ ಭಾಷೆ ಮಾತನಾಡುತ್ತಾನೆ.
ಕೊಪ್ಪಳದ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ನಗರ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಇನ್ಸೆಪೆಕ್ಟರ್ ಕೊಪ್ಪಳ ಮೊಬೈಲ್ ನಂ.9480803745, ಸಬ್ ಇನ್ಸ್ಪೆಕ್ಟರ್ ಮೋಬೈಲ್ ಸಂ.9449484086, ದೂರವಾಣಿ ಸಂಖ್ಯೆ. 08539-220333 ಮತ್ತು ಕಂಟ್ರೋಲ್ ರೂಂ. ಸಂ: 08539-230100 ಮತ್ತು 230100 ಗೆ ತಿಳಿಸಲು  ಪ್ರಕಟಣೆ ತಿಳಿಸಿದೆ.

Please follow and like us:
error