ಕೆ.ಎಂ.ಸಯ್ಯದ್ ಕೊಪ್ಪಳ ಜೆಡಿಎಸ್ ಅಭ್ಯರ್ಥಿ

ಆ್ಯಂಕರ್: ಕೊಪ್ಪಳ ಜೆಡಿಎಸ್ ಅಭ್ಯರ್ಥಿ ಯಾರಾಗ್ತಾರೆ ಎಂಬುದಕ್ಕೆ ಕೊನೆಗು ತೆರೆ ಬಿದ್ದಿದೆ. ಇಂದು ಕೊಪ್ಪಳ ತಾಲೂಕಿನ ಪ್ರಸಿದ್ದ ದೇವಸ್ಥಾನ ಹುಲಿಗಿಯಲ್ಲಿ ಹೈದ್ರಾಬಾದ್ ಕರ್ನಾಟಕದ

ಉಸ್ತುವಾರಿ ಹೆಚ್ ಆರ್ ಶ್ರೀನಾಥ್, ಅಧಿಕೃತವಾಗಿ ಕೆಎಂ ಸೈಯದ್ ಕೊಪ್ಪಳ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದಾರೆ. ಹೆಚ್ಡಿ ದೇವೆಗೌಡ್ರು, ಕುಮಾರಸ್ವಾಮಿಯವರ ಹೇಳಿದಂತೆ ಇಂದು ಘೋಷಿಸಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದರೊಂದಿಗೆ ಮತಯಾಚನೆಯ ಶುಭಾರಂಭ ಮಾಡಿದ್ದಾರೆ. ರಾಜ್ಯ ದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ್ರೆ, ರೈತರ ಸಂಪೂರ್ಣ ಸಾಲ ಮನ್ನ ಮಾಡ್ತಾರೆ, ಬಾಣಂತಿಯರಿಗೆ ಮಾಸಾಶನ ನೀಡ್ತಾರೆ.ಕುಮಾರಣ್ಣನ ಕೈ ಬಲಪಡಿಸಲು ಸೈಯದ್ ಅವರನ್ನ ಗೆಲ್ಲಿಸಬೇಕು, ಕೊಪ್ಪಳದಲ್ಲಿ ಕಾಂಗ್ರೆಸ್ ಕುಟುಂಬ ರಾಜಕೀಯ ವಾಗಿದೆ. ಇನ್ನು ಬಿಜೆಪಿ ಯನ್ನ ಹತ್ತಿರ ಬಿಟ್ಕೋ ಬೇಡಿ, ಜೆಡಿಎಸ್ ಗೆ ಬೆಂಬಲಿಸಿ ಅಂತ ಹೆಚ್.ಆರ್.ಶ್ರೀನಾಥ್ ಮತದಾರರಲ್ಲಿ ಮನವಿ ಮಾಡಿದ್ರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷ ತೊರೆದು ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು ಜೆಡಿಎಸ್ ಪಕ್ಷ ಸೇರಿದ್ರು.ಿ.

Please follow and like us:
error