ಕೆರೆಯಲ್ಲಿ ಈಜಲು ಹೋಗಿ ಐದು ಜನ ನೀರು ಪಾಲು

ಕೊಪ್ಪಳ : ಕೆರೆಯಲ್ಲಿ ಈಜಲು ಹೋಗಿ ಐದು ಜನ ನೀರು ಪಾಲು.ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದಲ್ಲಿ ಘಟನೆ. ಣ

ದೇವರ ದರ್ಶನಕ್ಕೆಂದು ಬಂದವರು ನೀರು ಪಾಲಾದ ಹೃದಯವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ . ಗಂಗಾವತಿ ತಾಲೂಕಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನ ಕ್ಕೆ ಬಂದಿದ್ದ ಹೈದರಾಬಾದ್ ಮೂಲದ ಐವರು ನೀರುಪಾಲಾಗಿದ್ದಾರೆ. ಗಂಗಾವತಿಯ ಮಾಜಿ ನಗರಸಭಾ ಸದಸ್ಯ ಮೋಹನರಾವ್ ಎನ್ನುವವರ ಮನೆಗೆ ಬಂದಿದ್ದ ರಾಘವೇಂದ್ರ ಮತ್ತವರ ಕುಟುಂಬದ ಸದಸ್ಯರು ಮೂರು ದಿನಗಳ ಹಿಂದೆಯೇ ಹೇಮಗುಡ್ಡಕ್ಕೆ ಬಂದಿದ್ದಾರೆ ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಪ್ರತಿವರ್ಷ ದೇವಸ್ಥಾನಕ್ಕೆ ಬರುವ ರೂಡಿ ಇಟ್ಟುಕೊಂಡಿದ್ದರು. ಈ ಹಿನ್ನಲೆಯಲ್ಲಿ ಮೊನ್ನೆಯಿಂದಲೇ ಇಲ್ಲಿ ಬಂದಿದ್ದಾರೆ. ಸುಮಾರು ೨೦ಕ್ಕೂ ಹೆಚ್ಚು ಜನ ಕುಟುಂಬ ಸದಸ್ಯರು ಬಂದಿದ್ದಾರೆ. ಇವತ್ತು ಬೆಳಿಗ್ಗೆ ೬ ಜನ ಈ ಕೆರೆಯ ಸಮೀಪ ಬಂದು ಜಳಕಕ್ಕೆಂದು ನೀರಿಗಿಳಿದಿದ್ದಾರೆ. ಉಳಿದವರು ಗುಡಿಯ ಹತ್ತಿರದ ಕಲ್ಯಾಣ ಮಂಟಪದಲ್ಲಿಯೇ ಸ್ನಾನ ಮಾಡುತ್ತಿದ್ದಾರೆ. ರಾಘವೇಂದ್ರ ಮತ್ತು ಉಳಿದ ನಾಲ್ವರು ಮಕ್ಕಳು ಒಬ್ಬೊಬ್ವರಾಗಿ ನೀರಲ್ಲಿ ಮುಳುಗಿದ್ದಾರೆ. ಮಕ್ಕಳನ್ನು ರಕ್ಷಿಸಲು ಹೋದ ರಾಘವೇಂದ್ರ ಸಹ ನೀರಲ್ಲಿ ಮುಳುಗಿದ್ದಾರೆ. ಇವರ ಜೊತೆ ಬಂದಿದ್ದ ಇನ್ನೊಬ್ಬ ಹುಡುಗ ಅವರು ಮುಳುಗುವದನ್ನು ಕಂಡು ಓಡಿ ಹೋಗಿ ಉಳಿದವರಿಗೆ ತಿಳಿಸಿದ್ದಾನೆ ಉಳಿದವರು ಸ್ಥಳಕ್ಕೆ ಬರುವದರೊಳಗೆ ಐಧೂ ಜನ ಸಾವನ್ನಪ್ಪಿದ್ದಾರೆ.
ರಾಘವೇಂದ್ರ, ಆಶಿಸ್ ಚಾಯಿ, ಪಾವನಿ, ಚಿನ್ನಾರಿ, ಪನೀರ. ಮೃತ ದುರ್ದೈವಿಗಳು.
ಮೂರು ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು ಈಜಲು ಹೋಗಿದ್ರು.

ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಗಂಗಾವತಿ ಆಸ್ಪತ್ರೆಗೆ ಸಾಗಿಸಲಾಗಿದೆ‌

Related posts