ಹುಲಿಕೆರೆಗೆ ಬಾಗೀನ ಅರ್ಪಿಸಿದ ಶಾಸಕ ರಾಘವೇಂದ್ರ ಹಿಟ್ನಾಳ

koppal ಕೊಪ್ಪಳ ನಗರದ ಹುಲಿಕೆರೆಗೆ ಶಾಸಕ ರಾಘವೇಂದ್ರ ಹಿಟ್ನಾಳ  ಭಾಗೀನ ಅರ್ಪಿಸಿದರು. ತೀವ್ರ ಬರಗಾಲ ಕಾಡುತ್ತಿದ್ದರೂ ಸಹ ತುಂಗಭದ್ರೆಯಿಂದ ನೀರನ್ನು ತಂದು ಕೆರೆಯನ್ನು ತುಂಬಿಸಲಾಗಿದೆ.  ಹುಲಿಕೆರೆಯು ಕೊಪ್ಪಳ  ಮತ್ತು ಭಾಗ್ಯನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಪ್ರಮುಖವಾಗಿದೆ. ಮಳೆ ಇಲ್ಲದ್ದರಿಂದ ಕೆರೆ ಪೂರ್ಣವಾಗಿ ಒಣಗಿಹೋಗಿತ್ತು. ಆದರೆ ಶಾಸಕ ರಾಘವೇಂದ್ರ ಹಿಟ್ನಾಳ ಕೆರೆ ತುಂಬಿಸುವ ಯೋಜನೆಯ ಅಂಗವಾಗಿ ಕೊಪ್ಪಳದ ಈ ಪುರಾತನ ಕೆರೆಗೆ ನೀರನ್ನು ತರುವ ಮೂಲಕ ಈ ಭಾಗದಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಕೆಲಸ ಮಾಡಲಾಗಿದೆ ಅಲ್ಲದೇ ಬೇಸಿಗೆಯಲ್ಲಿಯೂ ಸಹ ಕೊಪ್ಪಳ ಭಾಗ್ಯನಗರಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ  ಕೆರೆ ತುಂಬಿಸಲಾಗಿದೆ . ಮುಂದಿನ ದಿನಗಳಲ್ಲಿ ಕೆರೆಯನ್ನು ಅಭಿವೃದ್ದಿ ಪಡಿಸಲಾಗುವುದು. ಇದಕ್ಕಾಗಿ ಯೋಜನೆಯನ್ನು ರೂಪಿಸಲಾಗಿದ್ದು ಶೀಘ್ರವೇ ಕಾಮಗಾರಿಗಳು ಆರಂಭವಾಗಲಿವೆ  ಎಂದು ಹೇಳಿದರು.

ಈ ಸಂದರ್ಭದಲ್ಲಿ ಜುಲ್ಲುಸಾಬ ಖಾದ್ರಿ, ಕೃಷ್ಣ ಇಟ್ಟಂಗಿ, ಸುರೇಶ ಭೂಮರಡ್ಡಿ, ಕಾಟನ್ ಪಾಷಾ, ಹೊನ್ನೂರಸಾಬ ಬೈರಾಪೂರ, ರಾಜಶೇಖರ ಹಿಟ್ನಾಳ, ಮಹೇಂದ್ರ ಚೋಪ್ರಾ, ಯಮನೂರಪ್ಪ ನಾಯಕ, ಮಾರುತಿ ಹೆಚ್. ಅಮ್ಜದ್ ಪಟೇಲ್ , ರವಿ ಕುರಗೋಡ , ಮಾನ್ವಿ ಪಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮರ್ಧಾನ ಅಲಿ ದರ್ಗಾದ ಬಳಿ ನಡೆಯುತ್ತಿರುವ ಶಾದಿ ಮಹಲ್ ಕಟ್ಟಡ ಕಾಮಗಾರಿಯನ್ನೂ ಸಹ ಪರಿಶೀಲನೆ ನಡೆಸಿದರು

Please follow and like us:
error