ಕೃಷ್ಣ ಮೇಲ್ದಂಡೆ ೩ನೇ ಹಂತ : ಸಲಹೆ ಹಾಗೂ ಅಭಿಪ್ರಾಯ ಸಂಗ್ರಹಣೆ ಸಭೆ

ಕೃಷ್ಣಾ ಮೇಲ್ದಂಡೆ ಯೋಜನೆಯ ೩ನೇ ಹಂತದಲ್ಲಿ ಭೂಸ್ವಾಧೀನಗೊಳ್ಳುವ ಜಮೀನುಗಳಿಗೆ ಏಕ ರೂಪದ ದರ ನಿಗಧಿಪಡಿಸುವ ಬಗ್ಗೆ ಸಂತ್ರಸ್ಥರ ಹಾಗೂ ಜನ ಪ್ರತಿನಿಧಿಗಳ ಸಲಹೆ, ಅಭಿಪ್ರಾಯವನ್ನು ಸಂಗ್ರಹಿಸಲು ಜಿಲ್ಲೆಯಲ್ಲಿ ಡಿ. ೨೯ ಮತ್ತು ೩೦ ರಂದು ಕುಷ್ಟಗಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕು ಮಟ್ಟದ ಸಭೆಗಳನ್ನು ಏರ್ಪಡಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ೩ನೇ ಹಂತದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಭೂಸ್ವಾಧೀನಗೊಳ್ಳುವ ಜಮೀನುಗಳಿಗೆ ಏಕ ರೂಪದ ದರ ನಿಗಧಿಪಡಿಸುವ ಕುರಿತಂತೆ ಯೋಜನೆಯಡಿ ಬಾಧಿತ ಗ್ರಾಮಗಳಲ್ಲಿ ಬಾಧಿತ ಜನರ ಹಾಗೂ ಜನ ಪ್ರತಿನಿಧಿಗಳ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆದುಕೊಳ್ಳುವುದಕ್ಕಾಗಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಲು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಡಿ. ೨೯ ರಂದು ಕುಷ್ಟಗಿ ತಾಲೂಕ ಮಟ್ಟದ ಸಭೆ ಬೆಳಿಗ್ಗೆ ೧೦ ಗಂಟೆಗೆ ಕುಷ್ಟಗಿಯ ಗುತ್ತಿ ಬಸವೇಶ್ವರ ದೇವಸ್ಥಾನದಲ್ಲಿ, ಹಾಗೂ ಗಂಗಾವತಿ ತಾಲೂಕ ಮಟ್ಟದ ಸಭೆ ಮಧ್ಯಾಹ್ನ ೩ ಗಂಟೆಗೆ ಕನಕಗಿರಿಯ ಎ.ಪಿ.ಎಂ.ಸಿ ಕಲ್ಯಾಣ ಮಂಟಪದ ಆವರಣದಲ್ಲಿ ಜರುಗಲಿದೆ. ಡಿ. ೩೦ ರಂದು ಯಲಬುರ್ಗಾ ತಾಲೂಕು ಮಟ್ಟದ ಸಭೆ ಬೆಳಿಗ್ಗೆ ೧೦ ಗಂಟೆಗೆ ಯಲಬುರ್ಗಾ ತಹಸೀಲ್ ಕಾರ್ಯಾಲಯದಲ್ಲಿ, ಹಾಗೂ ಕೊಪ್ಪಳ ತಾಲೂಕ ಮಟ್ಟದ ಸಭೆ ಮಧ್ಯಾಹ್ನ ೩ ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.