ಕುಷ್ಟಗಿ : ಬೈಕ್ ಮತ್ತು ಸ್ಕೂಲ್ ವಾಹನದ ಮದ್ಯೆ ಡಿಕ್ಕಿ ಮೂವರ ಸಾವು

1 2 3

ಬೈಕ್ ಮತ್ತು ಸ್ಕೂಲ್ ವಾಹನದ ಮದ್ಯೆ ಡಿಕ್ಕಿಯಾಗಿ  ಮೂವರ ಸಾವನ್ನಪ್ಪಿದ ಘಟನೆ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ. .ಕುಷ್ಟಗಿ ತಾಲೂಕಿನ ಬೋದೂರು ತಾಂಡಾ ಕ್ರಾಸ್ ಬಳಿ ಘಟನೆ.ಮಂಜು, ಮಹಾಂತೇಶ, ಬಸವರಾಜ ಮೃತಪಟ್ಟ ದುರ್ದೈವಿಗಳು. ಖಾಸಗಿ ಶಾಲೆಯ ಮಿನಿ ಸ್ಕೂಲ್ ಬಸ್, ಬೈಕ್ ನಡುವೆ ಡಿಕ್ಕಿಯಾಗಿದ್ದರಿಂದ ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪಿದ್ದಾರೆ. ಸಾವನ್ನಪಿದವರು ಬೋದೂರು ಗ್ರಾಮದವರು ಎಂದು ಹೇಳಲಾಗಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts

Leave a Comment