ಸ್ವಾತಂತ್ರö್ಯ ಸೇನಾನಿ ಪುಂಡಲಿಕಪ್ಪ ಜ್ಞಾನಮೂಠೆ ಮೇಲ್ಸೇತುವೆ ಲೋಕಾರ್ಪಣೆ
ಕೊಪ್ಪಳ, ಜೂ.: ಕುಷ್ಟಗಿ ನಗರದಲ್ಲಿ ಹಾದು ಹೋಗಿರುವ ರಾಷ್ಟಿçಯ ಹೆದ್ದಾರಿಯ ಮೇಲ್ಸೇತುವೆಗಾಗಿ ಹಲವಾರು ವರ್ಷಗಳಿಂದ ಈ ಭಾಗದ ಜನರ ಬೇಡಿಕೆಯಾಗಿತ್ತು, ಅದು ಈಗ ನನಸಾಗಿದೆ ಎಂದು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಹೇಳಿದರು.
ಅವರು ಇಂದು (ಜೂನ್.16) ಕುಷ್ಟಗಿ ನಗರದಲ್ಲಿ ಹಾದು ಹೋದ ರಾಷ್ಟಿçÃಯ ಹೆದ್ದಾರಿ-15ರ ಮೇಲೆ “ಸ್ವಾತಂತ್ರö್ಯ ಸೇನಾನಿ ಪುಂಡಲಿಕಪ್ಪ ಜ್ಞಾನಮೂಠೆ ಮೇಲ್ಸೇತುವೆ” ಲೋಕಾರ್ಪಣೆ ಮಾಡಿ ಮಾತನಾಡಿದರು.
ಕೇಂದ್ರದ ಸಾರಿಗೆ ಮತ್ತು ರಾಷ್ಟಿçÃಯ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು 2016 ಸೆಪ್ಟೆಂಬರ್. 03 ರಂದು ಈ ಮೇಲ್ಸೇತುವೆಯ ಕಾಮಗಾರಿಗೆ ಶೀಲಾನ್ಯಾಸ ನೆರವೇರಿಸಿದ್ದರು. ಇದು ಒಟ್ಟು ರೂ. 68.6 ಕೋಟಿ ಮೊತ್ತದ ಕಾಮಗಾರಿಯಾಗಿತ್ತು. ಇದರಿಂದ ವಾಹನ ಸಂಚಾರದ ದಟ್ಟನೆ ಮತ್ತು ಅಪಘಾತಗಳನ್ನು ತಡೆಯಲು ಅನುಕೂಲವಾಗಿದೆ. ಜೊತೆಗೆ ಇದರ ಯಶಸ್ವಿಗೆ ಈ ಭಾಗದ ಸಂಸದರು ತುಂಬಾ ಶ್ರಮೀಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 76257 ಕಿ.ಮೀ ರಾಷ್ಟಿçÃಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, 2019-20ರಲ್ಲಿ 9033 ಕೋಟಿ ರೂ. ಅನುದಾನ ಹಾಗೂ 8788 ಕೋಟಿ ರೂ. ಆರ್ಥಿಕ ಪ್ರಗತಿ (ಶೇ.97ರಷ್ಟು), 3900 ಕಿ.ಮೀ ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಮತ್ತು 143 ಸೇತುವೆಗಳ ನಿರ್ಮಾಣ, 22 ನ್ಯಾಯಾಲಯ ಹಾಗೂ ನ್ಯಾಯಾಧೀಶರ ವಸತಿ ಗೃಹಗಳ ನಿರ್ಮಾಣ ಮತ್ತು 15 ಪಿ.ಒ.ಸಿ.ಎಸ್.ಒ ನ್ಯಾಯಾಲಯಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಹರಿಜನ ಮತ್ತು ಗಿರಿಜನ ಕಾಲೋನಿಗಳಲ್ಲಿ ಗುಣಮಟ್ಟದ 1958 ಕಿ.ಮೀ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಎಸ್ಡಿಪಿ ಯೋಜನೆಯಡಿ 588 ಕಿ.ಮೀ ರಸ್ತೆ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ 785 ಕಿ.ಮೀ ರಸ್ತೆ ಅಭಿವೃದ್ಧಿ. ಮಾಡಲಾಗಿದೆ. 500 ಕೋಟಿ ರೂ.ಗಳ ಮೊತ್ತದಲ್ಲಿ 1828 ಪ್ರವಾಹ ಪರಿಹಾರ ಕಾಮಗಾರಿಗಳ ಅನುಷ್ಠಾನಗೊಳಿಸಲಾಗಿದೆ ಎಂದರು.
ಎಸ್.ಎಚ್.ಡಿ.ಪಿ.-ಫೇಸ್-4 ಹಂತ-1ರಲ್ಲಿ 4500 ಕೋಟಿ ರೂ. ಮೊತ್ತದ ಕಾಮಗಾರಿಗಳ ಅನುಷ್ಠಾನ, ಕಶೀಪ್-3ರಡಿ 5334 ಕೋಟಿ ರೂ. ಮೊತ್ತದಲ್ಲಿ 418 ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿ ಚಾಲನೆ, ಕೆ.ಆರ್.ಡಿ.ಸಿ.ಎಲ್. ವತಿಯಿಂದ ಬೆಂಗಳೂರು ಸುತ್ತಮುತ್ತಲಿನ 155ಕಿ.ಮೀ ರಸ್ತೆಗಳ ಅಭಿವೃದ್ಧಿ ಹಾಗೂ ರಾಜ್ಯವ್ಯಾಪಿ 1395 ಕೋಟಿ ರೂ. ಮೊತ್ತದಲ್ಲಿ 215 ಸೇತುವೆಗಳ ನಿರ್ಮಾಣ, ಕೇಂದ್ರ ಸರ್ಕಾರದ ಸಹಯೋಗದಲ್ಲಿ 4762 ಕೋಟಿ ರೂ. ಮೊತ್ತದ ರಾಷ್ಟಿçÃಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನ, ಎನ್ಎಚ್ಎಐ ವತಿಯಿಂದ ಬೆಂಗಳೂರುನಿAದ ಮೈಸೂರು, ತುಮಕೂರುನಿಂದ ಶಿವಮೊಗ್ಗ ಮತ್ತು ಬಳ್ಳಾರಿ ಯಿಂದ ಹಿರಿಯೂರು ಚತುಸ್ಪಥದ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ್ ಅವರು ಮಾತನಾಡಿ, ಸ್ವಾತಂತ್ರö್ಯ ಸೇನಾನಿ ಪುಂಡಲಿಕಪ್ಪ ಜ್ಞಾನಮೂಠೆ ಅವರ ಹೆಸರನ್ನು ಈ ಮೇಲ್ಸೇತುವೆಗೆ ನಾಮಕರಣ ಮಾಡಿರುವುದು ಸಂತಸ. ಈ ಸೇತುವೆಯಿಂದ ಮೂಲ ಭೂತ ಸೌಕರ್ಯ, ಸಾರಿಗೆಗೆ ತುಂಬಾ ಸಹಕಾರಿಯಾಗುವುದರ ಜೊತೆಗೆ ಕೃಷಿ ಹಾಗೂ ಇತರ ವ್ಯಾಪಾರ, ವಹಿವಾಟಿಗೂ ಸಹ ಅನುಕೂಲವಾಗಲಿದೆ. ರಾಜ್ಯ ಮತ್ತು ಅಂತರ್ ರಾಜ್ಯ ಸಾರಿಗೆ ವಾಹನಗಳ ಓಡಾಟಕ್ಕೆ ತುಂಬಾ ಅನುಕೂಲವಾಗುವುದು ಮಾತ್ರವಲ್ಲದೇ ಅಪಘಾತಗಳನ್ನು ತಡೆಯಲು ಸಹ ಅನುಕೂಲವಾಗಲಿದೆ. ಈಗಾಗಲೇ ಕರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ನಿರ್ಮೂಲನೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸರ್ಕಾರದ ನಿಯಮಗಳನ್ನು ನಾವೆಲ್ಲರೂ ಚಾಚುತಪ್ಪದೇ ಪಾಲಿಸಬೇಕು. ಈ ಹಿಂದೆ ಕೊಪ್ಪಳ ಜಿಲ್ಲೆ ಹಸಿರು ವಲಯದಲ್ಲಿತ್ತು ಆದರೆ ಈಗ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಈ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಸಚಿವರು ಸಾರ್ವಜನಿಕರಿಗೆ ತಿಳಿಸಿದರು.
ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಮಾತನಾಡಿ, ಈ ಮೇಲ್ಸೇತುವೆಯಿಂದ ನಮ್ಮ ತಾಲ್ಲೂಕಿನ ಜನರಿಗೆ ಅನುಕೂಲ ವಾಗುವುದು ಮಾತ್ರವಲ್ಲದೇ ಹಲವಾರು ಕಡೆಯ ಸಾರಿಗೆ ವಾಹನಗಳು ಈ ಸೇತುವೆಯ ಮೇಲೆಯಿಂದ ಹಾದು ಹೋಗುವುದಕ್ಕೆ ತುಂಬಾ ಅನುಕೂಲವಾಗಲಿದೆ. ಈ ಹಿಂದೆ ವಾಹನಗಳು ಸುಮಾರು ಎರಡ ರಿಂದ ಮೂರು ನಿಮಿಷ ನಿಂತು ಹೋಗುವುದರ ಜೊತೆಗೆ ರಸ್ತೆ ಸಂಚಾರದ ದಟ್ಟನೆ ಉಂಟಾಗುತ್ತಿತ್ತು. ಮೇಲ್ಸೇತುವೆಯ ನಿರ್ಮಾಣದಿಂದ ಈ ಸಮಸ್ಯೆ ದೂರಾಗಿದೆ. ಇದಕ್ಕೆ ಶ್ರಮೀಸಿದ ಎಲ್ಲರಿಗೂ ಕುಷ್ಟಗಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸAಸದ ಕರಡಿ ಸಂಗಣ್ಣ ಅವರು ಮಾತನಾಡಿ, 2014 ರಲ್ಲಿ ನಾನು ಸಂಸದನಾಗಿ ಬಂದಾಗ ಮೇಲ್ಸೇತುವೆ ನಿರ್ಮಾಣಕ್ಕಾಗಿ ಇಲ್ಲಿಯ ಜನರು ಮನವಿ ಮಾಡಿ, ಇಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಆದಷ್ಟು ಬೇಗ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಹಾಗಾಗಿ ನಾನು ಮತ್ತು ರಾಜ್ಯದ ಹಲವಾರು ಸಂಸದರು ಸೇರಿ ಕೇಂದ್ರ ಸರ್ಕಾರದ ಸಾರಿಗೆ ಮತ್ತು ರಾಷ್ಟಿçÃಯ ಹೆದ್ದಾರಿ ಸಚಿವರಾದ ನೀತಿನ್ ಗಡ್ಕರಿಯವರ ಗಮನಕ್ಕೆ ತಂದು ಈ ಕಾಮಗಾರಿಯನ್ನು 2016 ಸೆಪ್ಟೆಂಬರ್. 03 ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಈ ಕಾಮಗಾರಿಯು ಪೂರ್ಣಗೊಂಡು ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರಿಂದ ಇಂದು ಲೋಕಾರ್ಪಣೆಗೊಂಡಿದ್ದು, ಈ ಭಾಗದ ಜನರ ಕನಸು ನನಸಾಗಿದೆ. ಅಲ್ಲದೇ ಸಾರಿಗೆ ಹಾಗೂ ಸರಕು ಸಾಗಾಣಿಕೆಗಳಿಗೆ ತುಂಬಾ ಅನುಕೂಲವಾಗಲಿದೆ. ಇನ್ನೂ ಕುಷ್ಟಗಿ ತಾಲ್ಲೂಕಿನಲ್ಲಿ ಸರ್ವಿಸ್ ರೋಡ್ ಮತ್ತು ಡ್ರೆöÊನೆಜ್ಗಳನ್ನು ನಿರ್ಮಾಣದ ಅವಶ್ಯಕತೆ ಇದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಈ ತಾಲ್ಲೂಕಿನ ಶಾಸಕರೊಂದಿಗೆ ಸಭೆ ನಡೆಸಬೇಕೆಂದು ಸಂಸದರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್.ವಿಶ್ವನಾಥರೆಡ್ಡಿ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಸವರಾಜ ದಢೇಸೂಗೂರು, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ., ತಾ.ಪಂ. ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.