ಕುವೆಂಪು ಜನ್ಮ ದಿನಾಚರಣೆ


ಕೊಪ್ಪಳ: ಡಿ, ೨೯ ನಗರದ ಅನುದಾನಿತ ಕುವೆಂಪು ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ರವರ ೧೧೪ ನೇ ಜನ್ಮ ದಿನಾಚರಣೆನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ಶಿಕ್ಷಣಾ ಇಲಾಖೆ ಉಪ ನಿರ್ದೇಶಕರಾದ ಶ್ರೀಮತಿ ಉಮಾದೇವಿ ಸೂನ್ನದ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೋಭಾ ಬಾಗೆವಾಡೇ
ಇವರಿಂದ ಕುವೆಂಪು ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿದರು.
ನಂತರ ಮಾತನಾಡಿದ ಅವರು ಭಾರತೀಯ ಸಾಹಿತ್ಯ ಪ್ರಪಂಚದ ಶ್ರೇಷ್ಠ ಕೃತಿಗಳನ್ನು ರಚಿಸಿ ಮನುಕುಲಕ್ಕೆ ನೀಡಿದ ಜಾನಪೀಠ ಪ್ರಶಸ್ತಿ ಹಿರಿಮೆಯನ್ನು ಹೊಂದಿದ ಶ್ರೀ ರಾಮಾಯಣದರ್ಶನಂ ಮಹಾಕಾವ್ಯ ಹೆಸರುವಾಸಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ರಾಮಪ್ಪ ಹಿರೇಮನಿ ಹಾಗೂ ಶಿಕ್ಷಕರು ಮತ್ತು ಸಂಸ್ಥೆಯ ಪರವಾಗಿ ಶ್ರೀಮತಿ ರೇಣುಕಾ ಓಲೇಕಾರ್ ಹಾಜರಿದ್ದರು.
ಶಿಕ್ಷಕಿ ಶ್ರೀಮತಿ ಗೀತಾ ಮಾರ್ಕಂಡೇಶ್ವರ ರಾಷ್ಟ್ರಕವಿ ಕುವೆಂಪುರವರ ಜೀವನ ಸಾಧನೆ ಬಗ್ಗೆ ಮಕ್ಕಳಿಗೆ ತಿಳಿಸಿದರು. ಶ್ರೀಮತಿ ಪೂರ್ಣಿಮಾ ಕುಕನೂರು ನಿರೂಪಿಸಿದರು, ಶಿಕ್ಷಕಿ ನಾಗರತ್ನ ಘಂಟೆ ಸ್ವಾಗತಿಸಿದರು, ಕವಿತಾ ಸಂಕನೂರು ವಂದಿಸಿದರು.
ಕೊನೆಗೆ ಮಕ್ಕಳಿಗೆ ಸಿಹಿ ಊಟ ವಿತರಿಸಲಾಯಿತು.

Please follow and like us:
error