ಕುರಿಹಟ್ಟಿ ಮೇಲೆ ಚಿರತೆಗಳ ದಾಳಿ. 25 ಕ್ಕೂ ಹೆಚ್ಚು ಕುರಿಗಳ ಸಾವು.

ಗಂಗಾವತಿ : ಜಮೀನಿನಲ್ಲಿ ಗುಂಪಾಗಿ ಇದ್ದ ಕುರಿಗಳ ಮೇಲೆ ಚಿರತೆಗಳು ದಾಳಿ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ನಗರದ ಸಮೀಪ ಇರುವ ಸಿದ್ದಿಕೇರಿ ಬಳಿ ಜಮೀನೊಂದರಲ್ಲಿ ಕುರಿಗಳ ಹಟ್ಟಿಯನ್ನು ಹಾಕಲಾಗಿತ್ತು.‌ಆದರೆ ರಾತ್ರಿ ವೇಳೆ ಮೂರು ಚಿರತೆಗಳು ಏಕಾಏಕಿ ದಾಳಿ ಮಾಡಿ ಕುರಿಗಳನ್ನು ತಿಂದು ಹಾಕಿವೆ. ಸ್ಥಳದಲ್ಲಿ 20 ಕುರಿಗಳು ಸಾವನ್ನಪ್ಪಿದ್ರೆ, 5 ಕುರಿಮರಿಗಳನ್ನು ಚಿರತೆಗಳು ಹೊತ್ತೊಯ್ದಿದೆ. ಇನ್ನು ಯಮನೂರಪ್ಪ ಚಿಲ್ಕಮುಖಿ ಎನ್ನುವವರಿಗೆ ಸೇರಿದ ಕುರಿಗಳಾಗಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Please follow and like us:
error