

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋಗಿದ್ದಾರೆ.ಆದರೆ ಇನ್ನೂ ಅದೆ ಸೊಕ್ಕು,ಅಹಂಕಾರದಿಂದ ಮಾತನಾಡುತ್ತಿದ್ದಾರೆ.ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,ಸಿದ್ದರಾಮಯ್ಯ,ದಿನೇಶ್ ಗುಂಡೂರಾವ್ ದಂಗೆ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ಪಕ್ಷದ ಗೂಂಡಾಗಳು ವಿಪಕ್ಷ ನಾಯಕರ ಮನೆಗೆ ಹೋಗಿ ಗಲಾಟೆ ಮಾಡ್ತೀದಾರೆ. ಶಾಸಕರನ್ನ ರಕ್ಷಣೆ ಮಾಡೋ ದುಸ್ಥಿತಿಯಲ್ಲಿ ಈಗಿನ ಸರಕಾರವಿದೆ… ಇರುವಷ್ಟು ದಿನ ವರ್ಗಾವಣೆ ಲೂಟಿ ಮಾಡಲು ಹೊರಟಿದ್ದಾರೆ.ರಾಜ್ಯದಲ್ಲಿ ಈ ಸರ್ಕಾರ ಯಾವ ತೊಲಗುತ್ತೆ ಅನ್ನೋದು ಜನ ಕಾಯ್ತಿದಾರೆ…
ಕಾಂಗ್ರೆಸ್ ಜೆ.ಡಿಎಸ್.ಶಾಸಕರು ಅವರ ಪಕ್ಷದಿಂದ ಹೊರ ಬಂದ್ರೆ ತಪ್ಪೇನು..ಅಸಮಾಧಾನ ದಿಂದ ಹೊರಬಂದ್ರೆ ತಪ್ಪೇನು ಎಂದ ಕೆ.ಎಸ್.ಈಶ್ವರಪ್ಪ… ನೇರವಾಗಿ ದಂಗೆ ಏಳಲು ಕರೆಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನ ಬಂಧಿಸಬೇಕು.ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಸಂವಿಧಾನದ ಬಿಕ್ಕಟ್ಟಿದೆ.ರಾಜ್ಯಾಪಾಲರು ಬಗೆ ಹರಿಸಬೇಕು..ನಾವು ಯಾರನ್ನೂ ಕರೆಯುತ್ತಿಲ್ಲ,ಅವರ ಕುತಂತ್ರ ರಾಜಕಾರದಿಂದ ಬೇಸತ್ತು ಬಂದ್ರೆ ನಾವ ಬಿಡಲ್ಲ.. ಅದ್ರೆ ಯಾರಿಗೂ ಆಫರ್ ಕೊಟ್ಟಿಲ್ಲ .ದಂಗೆ ಹೇಳಿಕೆಯನ್ನು ಉಪಯೋಗಿಸಿಕೊಂಡು ಖಂಡಿತವಾಗಿಯೂ ಬಿಜೆಪಿ ರಾಜಕಾರಣ ಮಾಡ್ತಿದೆ ಹಿರಿಯರಾದ ದೇವೆಗೌಡರು ಖಂಡಿಸಬೇಕಿತ್ತು ಅವರು ಆ ಕೆಲಸ ಮಾಡಿಲ್ಲ ಇದು ಬೇಸರದ ಸಂಗತಿ.. ಬರುವವರನ್ನ ಬಿಡೋಕೆ ನಾವು ಸನ್ಯಾಸಿಗಳಲ್ಲ ಸಿದ್ದರಾಮಯ್ಯ ಆರ್.ಶಂಕರ್ ನಮಗೆ ಆತ್ಮೀಯ ಸ್ನೇಹಿತರು ಎಂದ ಈಶ್ವರಪ್ಪ..ಮೂರು ಜನ ನನ್ನ ಸಂಪರ್ಕದಲ್ಲಿದ್ದಾರೆ,ಅವರ್ಯಾರು ಅಂತಾ ನಾನ ಹೇಳಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಿಗೆ ಸರಕಾರ ಬೇಡವಾಗಿದೆ ಎಂದು ಹೇಳಿದರು.