ಕುಮಾರಸ್ವಾಮಿಗೆ ಸ್ವಾಭಿಮಾನ ಇದ್ರೆ ರಾಜೀನಾಮೆ ನೀಡಲಿ- ಸಂಗಣ್ಣ ಕರಡಿ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ದೊಡ್ಡನಗೌಡ ಪಾಟೀಲ್

ಕೊಪ್ಪಳ :ಸಿ ಎಂ ಹೆಚ್‍ ಡಿ ಕುಮಾರಸ್ವಾಮಿ ರಾಜೀನಾಮೆ ಹೇಳಿಕೆಗೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ಬಿಜೆಪಿಯ ಮುಖಂಡರು ಕುಮಾರಸ್ವಾಮಿ ಅವರಿಗೆ ಸ್ವಾಭಿಮಾನ ಇದ್ರೆ ರಾಜೀನಾಮೆ ಕೊಡಲೇ ಅಂತ ಪ್ರತಿಕ್ರಿಯೆ ನೀಡಿದ್ದಾರೆ.

ಸಂಸದ ಕರಡಿ ಸಂಗಣ್ಣ ಹೇಳಿಕೆ ನೀಡಿ, ಅದು ಅವರ ನಡುವಿನ ಭಿನ್ನಾಪ್ರಯ ಆದ್ರೆ ಕುಮಾರಸ್ವಾಮಿ ಅವರಿಗೆ ನಿಜವಾಗ್ಲೂ ಸ್ವಾಭಿಮಾನ ಇದ್ರೆ ರಾಜೀನಾಮೆ ನೀಡಲಿ ಅಂತ ಹೇಳಿದ್ರು

ಇನ್ನು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ಹಲವಾರು ಸಂದರ್ಭದಲ್ಲಿ ನಾನು ಸಾಂಧರ್ಭಿಕ ಶಿಶು ಅಂತ ಹೇಳುತ್ತಲೇ ಇದ್ದರೆ, ಆದ್ರೆ ಅವ್ರು ಯಾವುದೇ ಪರಸ್ಥಿತಿಯಲ್ಲಿ ರಾಜೀನಾಮೆ ನೀಡುವುದಲ್ಲಿ. ಇದೊಂದು ಕಾಂಗ್ರೆಸ್‍ಗೆ ಅವರು ಮಾಡುವ ಬ್ಲ್ಯಾಕ್‍ಮೇಲ್‍ ತಂತ್ರ ಅಷ್ಟೇ, ನಿಜವಾಗಲೂ ಅವರಿಗೆ ಸ್ವಾಭಿಮಾನ ಇದ್ರೆ ರಾಜೀನಾಮೆ ನೀಡಲಿ ಇಲ್ಲವಾದ್ರೆ ಸುಳ್ಳು ಹೇಳುವುದನ್ನ ಬಿಡಲಿ ಅಂತೆ ಶಾಸಕ ಪರಣ್ಣ ಟೀಕೆ ಮಾಡಿದ್ರು.

ಇನ್ನು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‍ , ಸಮ್ಮಶ್ರಿ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ. ಅಭಿವೃದ್ಧಿಯನ್ನು ಮರೆತು ಅಧಿಕಾರಕ್ಕಾಗಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ರೈತರ ಬಗ್ಗೆ ಜನರ ಬಗ್ಗೆ ಚಿಂತನೆ ಇಲ್ಲ. ನಿಜವಾದ ಸ್ವಾಭಿಮಾನ ಇದ್ದವರು ರಾಜೀನಾಮ ನೀಡಿ ಹೊರ ಬರುತ್ತಾರೆ. ಆದ್ರೆ ಕುಮಾರಸ್ವಾಮಿ ಅವರಿಗೆ ಅಧಿಕಾರದ ಆಸೆ ಅದಕ್ಕೆ ಅವರು ರಾಜೀನಾಮೆ ನೀಡುವ ಲಕ್ಷಣಗಳು ಕಾಣುತ್ತಿಲ್ಲ ಅಂತ ಶಾಸಕ ಹಾಲಪ್ಪ ಆಚಾರ್‍ ಹೇಳಿಕೆ ನೀಡಿದರು.

ಇನ್ನು ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಮಾನಸಿಕವಾಗಿ ಸಿಎಂ ಕುಮಾರಸ್ವಾಮಿ ಎಂದಿಗೂ ಕಾಂಗ್ರೆಸ್ ಅವರನ್ನು ಒಪ್ಪಿಲ್ಲ. ಬಿಜೆಪಿ ಅವರನ್ನು ದೂರವಿಡಲು ಅನಿವಾರ್ಯವಾಗಿ ಕಾಂಗ್ರೆಸ್‍ ಜೊತೆ ಸರ್ಕಾರ ನಡೆಸುತ್ತಿದ್ದಾರೆ. ಹಲವಾರುಬಾರಿ ನಾನು ಸಿಎಂ ಆದ್ರೂ ಸಂತೋಷವಾಗಿಲ್ಲ ಅಂತ ಕಣ್ಣೀರಿಡುತ್ತಲೇ ಇದ್ದಾರೆ. ಮುಂದೆ ಗಂಭೀರವಾದ ಸಮಸ್ಯೆಗಳು ಎದುರಿಸುವುದಕ್ಕಿಂತ ರಾಜೀನಾಮೆ ನೀಡುವುದೇ ಸೂಕ್ತ ಅಂತ ಹೇಳಿಕೆ ನೀಡಿದರು.