ಕುತಂತ್ರಿ ಚೀನಾದ‌ ವಿರುದ್ದ ಪ್ರತಿಭಟನೆ

ಚೀನಾ ವಸ್ತುಗಳನ್ನು ಸುಟ್ಟು ಪ್ರತಿಭಟನೆ

Koppal ಹಿಂದೂ ಸಂಘಟಣೆ ವತಿಯಿಂದ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಲಡಾಕ್‌ನ ಗಾಲ್ಯಾನ್ ಕಣಿವೆಯಲ್ಲಿ ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ವೀರಯೋದರಿಗೆ ವೀರ ನಮನವನ್ನು ಸಲ್ಲಿಸಿ ಭಾರತೀಯ ಸೈನಿಕರನ್ನು ಹತ್ಯೆಗೈದ ಖಂಡಿಸಿ ಪ್ರತಿಭಟನೆ ಮಾಡಿ ನಂತರ ಚೀನಾದ ವಸ್ತುಗಳನ್ನು ರಸ್ತೆಗೆ ಚೆಲ್ಲಿ ಚೀನಾದ ಬಾವುಟದ ಚಿತ್ರವನ್ನು ಮತ್ತು ಚೀನಾ ವಸ್ತುಗಳನ್ನು ದಹನ ಮಾಡಲಾಯಿತು . ಹಿಂದೂ ಸಂಘಟನೆ ಮುಖಂಡರಾದ ಗವಿಸಿದ್ದಪ್ಪ ಜಂತಗಲ್ , ಮಾತನಾಡಿ ದೇಶದಲ್ಲಿ ಕೊರೋನಾ ಮಹಾಮಾರಿ ವೈರಸ್ಸು ಇರುವ ಸಂಧರ್ಭವನ್ನು ಬಳಸಿಕೊಂಡು ಚೀನಾ ದೇಶವು ಭಾರತದ ಮೇಲೆ ಅತಿಕ್ರಮ ಮಾಡಿ ನಮ್ಮ ದೇಶದ ಸೈನಿಕರನ್ನು ಹತ್ಯೆಗೈದು ಹೇಡಿ ಚೀನಾವು ನೆರವಾಗಿ ಯುದ್ಧವನ್ನು ಮಾಡುವದನ್ನು ಬಿಟ್ಟು ನರಿ ಬುದ್ದಿಯನ್ನು ಉಪಯೋಗಿಸಿ ಹಿಂದಿನ ಬಾಗಿಲಿನಿಂದ ನಮ್ಮ 20 ಭಾರತೀಯ ಸೈನಿಕರನ್ನು ಹತ್ಯೆ ಮಾಡಿ , ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೈನ್ಯವು ಚೀನಾದ ಮೇಲೆ ದಾಳಿಯನ್ನು ಮಾಡಿ ಪ್ರತಿಕಾರವನ್ನು ತೀರಿಸಿಕೊಂಡಿದೆ . ಇದೇ ಸಂಧರ್ಭವನ್ನು ಭಾರತ ದೇಶದ ಮಾರುಕಟ್ಟೆಯಲ್ಲಿ ಶೇ .75 % ರಷ್ಟು ಚೀನಾ ವಸ್ತುಗಳು ಮಾರುಕಟ್ಟೆಯಲ್ಲಿರುವುದು ಕಂಡು ಬರುತ್ತದೆ . ಭಾರತ ದೇಶವು ಚೀನಾ ವಸ್ತುಗಳನ್ನು ಆಮುದು ಮಾಡಿಕೊಳ್ಳುವದರಿಂದ ಚೀನಾಕ್ಕೆ ಆರ್ಥಿಕ ಲಾಭ ಹೆಚ್ಚಾಗುತ್ತದೆ ಮತ್ತು ಚೀನಾದ ಸೈನ್ಯವನ್ನು ಈ ಹಣದಿಂದ ಸದೃಡ ಮಾಡಲು ಚೀನಾವು ಮುಂದಾಗಿದೆ . ಆದಕಾರಣ ಭಾರತ ದೇಶವು ಕೂಡಲೇ ಚೀನಾದ ವಸ್ತುಗಳನ್ನು ಭಾರತ ಸರ್ಕಾರ ಆಮದು ಮಾಡಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಭಾರತ ದೇಶದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಹೀಗೆ ಮಾಡಿದಾಗ ದೇಶಕ್ಕೆ ಬುದ್ದಿಯನ್ನು ಕಲಿಸುವ ಕೆಲಸವನ್ನು ಭಾರತ ದೇಶ ಕೂಡಲೇ ಮಾಡಬೇಕೆಂದು ಹೇಳಿದರು .

ಈ ಸಂದರ್ಬದಲ್ಲಿ ಹಿಂದೂಪರ ಸಂಘಟನೆ ಮುಖಂಡರಾದ ವೆಂಕಟೇಶ , ಬಾಬಣ್ಣ ಬಿಲ್ವಂಕರ , ಪ್ರಾಣೇಶ ಮಾದಿನುರು , ರಾಖೇಶ ಪಾನಘಂಟಿ , ಆನಂದ ಅಶಿರ್ತ , ಪ್ರವೀಣ ಇಟಗಿ , ಸಂತೋಷ ಟಣಕನಕಲ್ , ದೀಪಕ್ , ಅಜಯ , ಪ್ರಶಾಂತ , ಆತೀಪ್ , ಪಂಪ ಪಲ್ಲೇದ್ ವಸಂತ ಬೆನ್ನಳ್ಳಿ , ನಾಗರಾಜ ಕಂದಗಲ್ , ರಾಘು , ಶಿವಕುಮಾರ , ಗೋಪಿ ಮತ್ತಿತರಿದ್ದರು .

Please follow and like us:
error