ಕುಣಿಕೇರಿ ಏತ ನೀರಾವರಿ ಯೋಜನೆ ಲೋಕಾರ್ಪಣೆ

ಕೊಪ್ಪಳ:೧೯,-೩೦ ವರ್ಷಗಳ ಬೇಡಿಕೆಯಾದ ಕುಣಿಕೇರಿಯ ಏತನೀರಾವರಿ ಯೋಜನೆಯು ನಾಳೆ ದಿನಾಂಕ:೨೦.೦೯.೨೦೧೯ ಶುಕ್ರವಾರದಂದು ಬೆಳೆಗ್ಗೆ ೧೦ ಘಂಟೆಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಿದ್ದಾರೆ. ಸಣ್ಣ ನೀರಾವರಿ ಇಲಾಖೆ ಯೋಜನೆ ಅಡಿಯಲ್ಲಿ ರೂ.೩ ಕೋಟಿ ೫೦ ಲಕ್ಷದ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಏತನೀರಾವರಿ ಯೋಜನೆಯು ಈ ಭಾಗದ ರೈತರಿಗೆ ಕಾಯಕಲ್ಪವಾಗಿದ್ದು, ಗೊಂಡಬಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ರೈತರಿಂದ ನಾಳೆ ಶಾಸಕರಿಗೆ ಅಭಿನಂದನಾ ಸಮಾರಂಭವನ್ನು ಕುಣಿಕೇರಿ ಗ್ರಾಮದಲ್ಲಿ ಏರ್ಪಡಿಸಿದ್ದಾರೆ.

ಕೊಪ್ಪಳ ಜಿಲ್ಲಾ ಕೋಪ್ಪಳ ತಾಲೂಕಿನ ಮುಂಡರಗಿ ಸೈಟ – 2 , ಏತ ನೀರಾವರಿ ಯೋಜನೆಯ ಕಾಮಗಾರಿ
 ಒಟ್ಟು ಅಂದಾಜು ಮೊತ್ತ : – 559 . 67 ಲಕ್ಷಗಳು .
( 109 . 67 ಲಕ್ಷಗಳು 1997 – 98ನೆ ಸಾಲಿನಲ್ಲಿ 350 ಲಕ್ಷಗಳು 2017 – 18 ನೇ ಸಾಲಿನಲ್ಲಿ 100 . ಲಕ್ಷಗಳು 2018 – 19ನೇ ಸಾಲಿನಲ್ಲಿ )
ನೀರಿನ ಮೂಲ : – ತುಂಗಭದ್ರ ಜಲಾಶಯದ ಹಿನ್ನೀರಿನಿಂದ ನೀರನ್ನು ಒದಗಿಸುವುದು ,
ಒಟ್ಟು ನೀರಾವರಿ ಕ್ಷೇತ್ರ : – 900 ಎಕರೆಗಳು
ನೀರಾವರಿಗೆ ಒಳಪಡುವ ಗ್ರಾಮಗಳು : – ಮುಂಡರಗಿ , ಕುಣಕೇರಿ
ಏತ ನೀರಾವರಿ ಯೋಜನೆಯಿಂದ : – 14 . ಕುಸೇಕ್ಸ್ ನೀರನ್ನು ರೈಜಿಂಗ್ ಪೈಪಲೈನ್ ಉದ್ದ : – 2730 ಮೀಟರ್ ಪೈಪಿನ ಡಯಾ : – 610 ಎಂ . ಎಂ ಇಂಟೆಕ್ ಕಾಲುವೆ ಉದ್ದ : – 1020 ಮೀಟರ್ ಅಗಲ 1 . 5 ಮೀಟರ್ ‘ ಜಾಕವೇಲ್ : – 6 ಮೀಟರ್ ವ್ಯಾಸ ಮತ್ತು 6 ಮೀಟರ್ ಎತ್ತರ ಪಂಪ ಮತ್ತು ಮೋಟರಗಳು : – ಒಟ್ಟು ಸಂಖ್ಯೆ 3 , 150 ಎಚ್ . ಪಿ ( 2 – ಕಾರ್ಯನಿರತ 1 – ಸ್ವಾಂಡ ಬೆ ) ಡೇಲಿವರಿ ಚೇಂಬರ್ : – 7 ಮೀಟರ್ ಉದ್ದ 7ಮೀಟರ್ ಅಗಲ 2 . 25 ಎತ್ತರ ಒಟ್ಟು ಕಾಲುವೆಗಳ ಸಂಖ್ಯೆ : – 3 ಕಾಲುವೆ : – 01 , 750 ಮೀಟರ್ ಉದ್ದ ಕಾಲುವೆ : – 02 , 600 ಮೀಟರ್ ಉದ್ದ ಕಾಲುವೆ : – 03 , 1020 ಮೀಟರ್ ಉದ್ದ
Please follow and like us:

Related posts