ಕಿರ್ಲೋಸ್ಕರ್ -ವಸುಂಧರಾ ಅಂತರ್ರಾಷ್ಡ್ರೀಯ ಚಲನ ಚಿತ್ರೋತ್ಸವ -೨೦೧೮

Koppal : ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್-ಈ ಕಾರ್ಖಾನೆಯು ಪ್ರಪ್ರಥಮವಾಗಿಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶಚಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಹತ್ತಿರ ೧೯೯೩ ರಲ್ಲಿ ಸ್ಥಾಪನೆಗೊಂಡಿದ್ದು,ಕಂಪನಿಯ ಪ್ರಮುಖವಾಗಿ ಬೀಡುಕಬ್ಬಿಣ ಮತ್ತು ಬೂದುಕಬ್ಬಿಣದ ಎರಕಗಳನ್ನು ಉತ್ಪದಿಸುತ್ತಿದೆ. ಈ ಉತ್ಪದನೆಗಳು ಮುಖ್ಯವಾಗಿ ವಾಹನ ತಯಾರಿಕಾ ವಲಯಕ್ಕೆ ಬಿಡಿಭಾಗವಾಗಿ ಪೊರೈಸಲ್ಪಡುತ್ತವೆ.

ಕಾರ್ಖಾನೆಯು ಸ್ಥಾಪನೆಯಾದಾಗಿನಿಂದಲೂ ಹತ್ತಿರವಿರುವ ಬೇವಿನಹಳ್ಲಿ ಗ್ರಾಮ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುತತದೆ.ಕಂಪನಿಯ ಸಾಂಘಿಕ ಸಮಾಜಿಕ ಹೊಣೆಗಾರಿಕೆಯನ್ನು(ಅSಖ)ಕ್ರಮಬದ್ಧವಾಗಿ ನೆಡೆಸಲು ೨೦೦೧ ರಲ್ಲಿಕಿರ್ಲೋಸ್ಕರ್ ಫೆರಸ್‌ಗ್ರಾಮೀಣಾಭಿವೃದ್ಧಿಟ್ರಸ್ಟನ್ನು ಸ್ಥಾಪಿಸಲಾಗಿದ್ದು, ಈ ಟ್ರಸ್ಟ್‌ನ ಮುಖಾಂತರಗ್ರಾಮದ ಮೂಲಭೂತ ಸೌಕರ್ಯ, ಶಿಕ್ಷಣ,ಆರೋಗ್ಯ ಮತ್ತು ನೈರ್ಮಲ್ಯ ಇವುಗಳಿಗೆ ಒತ್ತುಕೊಟ್ಟು ವಾರ್ಷಿಕಯೋಜನೆಯನ್ನು ರೂಪಿಸಿ ಅದರಂತೆ ಕೆಲಸಗಳನ್ನು ಕೈಗೆತ್ತಿಗೊಳ್ಲುತ್ತಿದೆ. ಈ ಚಟುವಟಿಕೆಗಳಲ್ಲಿ ಕಿರ್ಲೋಸ್ಕರ್ ವಸುಂಧರಾಅಂತಾರಾಷ್ಡ್ರೀಯ ಚಲನ ಚಿತ್ರೋತ್ಸವವೂಒಂದಾಗಿದೆ.
ಪರಿಸರಸಂರಕ್ಷಿಸುವಕುರಿತುಕಿಂಚಿತ್ತಾದರೂ ಸೇವೆಯನ್ನು ಸಲ್ಲಿಸುವದೃಷ್ಠಿಯಿಂದ, ಪುಣೆಯಲ್ಲಿ ಸ್ಥಾಪನೆಗೊಂಡವಸುಂಧರಾಕ್ಲಬ್‌ಜೊತೆಗೂಡಿಕಿರ್ಲೊಸ್ಕರ್-ವಸುಂಧರಾ ಎಂಬ ವೇದಿಕೆಯಡಿಯಲ್ಲಿ ಈ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವವನ್ನುಆಯೋಜಿಸುತ್ತ ಬಂದಿದ್ದೇವೆ. ಕಳೆದ ಹನೊಂದು ವರ್ಷಗಳಿಂದ ದೇಶದ ೭ ರಾಜ್ಯಗಳ ೩೦ ನಗರಗಳಲ್ಲಿ ಈ ಚಲನ ಚಿತ್ರವನ್ನುಆಯೋಜಿಸುತ್ತಿದ್ದು, ಈ ವರ್ಷವೂ ಸಹ ಈ ಚಲನಚಿತ್ರೋತ್ಸವವನ್ನು ದಿನಾಂಕ ೨೭-೧೧-೦೨೦೧೮ ರಿಂದ ೩೦-೧೧-೨೦೧೮ ರವರೆಗೆಆಯೋಜಿಸಲಾಗುತ್ತಿದೆ.

ಈ ಕಾರ್ಯಕ್ರಮದ ಮುಖ್ಯ ಸಂದೇಶ – ಪೃಥ್ವಿಯನ್ನು ರಕ್ಷಿಸಿ, ಸಂರಕ್ಷಿಸಿ, ಉಳಿಸಿ ಮುಂದಿನ ಪೀಳಿಗೆಗಾಗಿ! ಮಾಲಿನ್ಯತಡಿಯೋಣ, ನದಿಗಳನ್ನು ಉಳಿಸೋಣ ! (“PREVENT POLLUTION,PROTECT RIVERS”) ಎಂಬುದು ಈ ವರ್ಷದ ಮುಖ್ಯ ವಿಷಯವಾಗಿರುತ್ತದೆ.

ಈ ಚಿತ್ರೋತ್ಸವದಲ್ಲಿ ಪರಿಸರ, ವನ್ಯಜೀವಿ, ಶಕ್ತಿ, ಗಾಳಿ, ನೀರುಕುರಿತುಜಾಗೃತಿ ಮೂಡಿಸುವ ದೇಶೀಯ ಹಾಗೂ ವಿದೇಶೀಯ ಖ್ಯಾತ ನಿರ್ಧೇಶಕರು ತಯಾರಿಸಿದ ರಾಷ್ಟ್ರೀಯ ಹಾಗೂ ಅಂತರಾಷ್ಟೀಯ ಪ್ರಶಸ್ತಿಗಳಿಸಿದ ಆಯ್ದ ಚಲನಚಿತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶೀಸಲಾಗುತ್ತದೆ. ಈ ಚಿತ್ರೋತ್ಸವದ ಅಂಗವಾಗಿ ಸಕಾಳ್ -ಪೋಟೋಗ್ರಫಿ ವಸ್ತುಪ್ರದರ್ಶನವನ್ನು ಸಹ ಆಯೋಜಿಸಲಾಗಿದ್ದು, ವಿಶ್ವಾದ್ಯಾಂತ ಆಹ್ವಾನಿಸಿದ ಸುಮಾರು ೧೦.೦೦೦ ಅತ್ಯತ್ತಮ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಇದಲ್ಲದೇ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾಕೂಟಗಳು, ಕಿರುನಾಟಕ ಸ್ಪರ್ಧೆ ಮತ್ತುಘೋಷಣಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಪರಿಸರದಕುರಿತುಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಈ ಚಲನಚಿತ್ರೋತ್ಸವದ ಅಂಗವಾಗಿ, ಪರಿಸರ, ವನ್ಯಜೀವಿ,ಕೃಷಿ ಇತ್ಯಾದಿ ವಿಭಾಗಗಳಲ್ಲಿ ಸಾಧನೆ ಮಾಡಿದಅಗ್ರಗಣ್ಯರಿಗೆವಸುಂಧರ ಮಿತ್ರ,ವಸುಂಧರ ಸನ್ಮಾನ್ ಮತ್ತುಜೀವಮಾನ ಸಾಧನೆಪ್ರಶಸ್ತಿಗಳನ್ನು ನೀಡಿಗೌರವಿಸಲಾಗುವುದು.

ಈ ಕಾರ್ಯಕ್ರಮವು ವಿವಿಧ ಭಾಗಗಳಿಗೂ ತಲುಪಬೇಕು, ಸಾಕಷ್ಟು ಜನರನ್ನುತಲುಪಬೇಕುಎನ್ನುವುದು ನಮ್ಮಉದ್ದೇಶ. ಆದ್ದರಿಂದ, ಈ ಬಾರಿ, ತೋಟಗಾರಿಕಾ ವಿಜ್ಙಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಇವರ ಸಂಯುಕ್ತಾಶ್ರಯದಲ್ಲಿಈ ಚಲನಚಿತ್ರೋತ್ಸವದಉದ್ಘಾಟನಾ ಸಮಾರಂಭವನ್ನು ದಿನಾಂಕ ೨೭-೧೧-೨೦೧೮ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಮುನಿರಬಾದ್‌ನತೋಟಗಾರಿಕೆ ಮಹಾವಿದ್ಯಾಲಯದಲ್ಲಿಆಯೋಜಿಸಲಾಗಿದ್ದು, ಡಾ|| ಇಂದರೇಶ್.ಬಿ.ಎಂ. ಉಪಕುಲಪತಿಗಳು, ತೋಟಗಾರಿಕಾವಿಜ್ಙಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಇವರು ಈ ಚಿತ್ರೋತ್ಸವವನ್ನುಉದ್ಘಾಟಿಸಲಿದ್ದಾರೆ.ಈ ಸಮಾರಂಭದಲ್ಲಿಡಾ|| ಎಲ್ಲಪ್ಪರೆಡ್ಡಿ, ನಿವೃತ್ತಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು, ಇವರು ಪರಿಸರ ಸಂರಕ್ಷಣೆಕುರಿತು ಮಾಡಿದ ಅಮೋಘ ಸಾಧನೆಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿಗೌರವಿಸಲಾಗುವುದು, ಹಾಗೆಯೇಶ್ರಿ ಜಿ ಪುರುಷೋತ್ತಮಗೌಡ ,ಅಧ್ಯಕ್ಷರು, ತುಂಗಭದ್ರಾರೈತ ಸಂಘ, ಬಳ್ಳಾರಿ, ಇವರಿಗೆ ವಸುಂಧರಾ ಮಿತ್ರ ಪ್ರಶಸ್ತಿ ನೀಡಿಗೌರವಿಸಲಾಗುವುದು, ಶ್ರೀನಾಥ ಮಹಾದೇವ್‌ಜೋಷಿ ಭಾ.ಪೋ.ಸೇ. ಕಮ್ಯಾಂಡೆಂಟ್, ಕರ್ನಾಟಕರಾಜ್ಯ ಮೀಸಲು ಪಡೆ, ಮುನಿರಾಬಾದ್, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ಧೇಶಕರಾದಶ್ರೀ ಆರ್. ವಿ.ಗುಮಾಸ್ತೆ,ಶ್ರೀ ವಿರೇಂದ್ರಚಿತ್ರವ್, ಚಲನಚಿತ್ರೋತ್ಸವದ ನಿರ್ಧೇಶಕರು, ವಸುಂಧರಾಕ್ಲಬ್ ಪುಣೆ ಇವರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಚಲನಚಿತ್ರೋತ್ಸದಸಮಾರೋಪ ಸಮಾರಂಭವನ್ನುಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಕಾರ್ಖಾನೆಯಲ್ಲಿದಿನಾಂಕ ೩೦-೧೧-೨೦೧೮ರಂದು ಸಾಯಂಕಾಲ ೪.೦೦ ಗಂಟೆಗೆಆಯೋಜಿಸಲಾಗಿದ್ದು, ಈ ಸಮಾರಂಭದಲ್ಲಿ ಪರಿಸರ ಸಂರಕ್ಷಣೆಯಕುರಿತು ಅಮೋಘ ಸೇವೆ ಸಲ್ಲಿಸುತ್ತಿರುವ ಮತ್ತು ಸಾವಯುವಕೃಷಿಕರಾಗಿ ಶ್ರಮಿಸುತ್ತಿರುವರಾಯಚೂರುಜಿಲ್ಲೆಯ ಕವಿತಾಳ ಗ್ರಾಮದಶ್ರೀಮತಿ ಕವಿತಾಉಮಾಶಂಕರ್ ಮಿಶ್ರಾಇವರಿಗೆವಸುಂಧರಾ ಸನ್ಮಾನ್ ಪ್ರಶಸ್ತಿಯನ್ನು ನೀಡಿಗೌರವಿಸಲಾಗುವುದು.ಅಲ್ಲದೆ ಸೈಕಲ್‌ಉಪಯೋಗಿಸುವುದರಿಂದಹೇಗೆ ಇಂಧನವನ್ನು ಉಳಿಸಬಹುದು, ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುಬಹುದುಎಂದುತನ್ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡಬಹುದುಎಂಬುದರಕುರಿತು ಸಾಧನೆಗೈದ ಹಾಗೂ ಬೆಂಗಳೂರಿನ ಮೊದಲ ಸೈಕಲ್ ಮೇಯರ್ ಪ್ರಶಸ್ತಿ ವಿಜೇಯತರಾದ ಶ್ರೀ ಸತ್ಯಶಂಕರ್‌ಇವರಿಗೆ ವಸುಂಧರಾ ಮಿತ್ರ ಪ್ರಶಸ್ತಿನೀಡಿಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿಡಾ||ಆರ್.ಎಸ್.ಹೆಚ್.ಶ್ರೀವತ್ಸಉಪನಿರ್ಧೇಶಕರು, ಕೃಷಿ ಸಚಿವಾಲಯ, ಬೆಂಗಳೂರು, ಡಾ|| ಮಧುಸೂದನ್‌ಕಾರಿಗನೂರು,ರಾಜ್ಯಾಧ್ಯಕ್ಷರು- ಭಾರತೀಯ ವೈದ್ಯಕೀಯ ಸಂಘ ರಾಜ್ಯಘಟಕ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ಧೇಶಕರಾದಶ್ರೀ ಆರ್. ವಿ. ಗುಮಾಸ್ತೆ,ಶ್ರೀ ವಿರೇಂದ್ರಚಿತ್ರವ್, ಚಲನಚಿತ್ರೋತ್ಸವದ ನಿರ್ಧೇಶಕರು, ವಸುಂಧರಾಕ್ಲಬ್, ಪುಣೆ ಇವರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಚಲನಚಿತ್ರೋತ್ಸವ ಪೂರ್ವಭಾವಿಯಾಗಿ ದಿನಾಂಕ ೧೮-೧೧-೨೦೧೮ ರಂದು ಸೈಕಲ್ ಸವಾರಿಯನ್ನು ಆಯೋಜಿಸಿದ್ದು, ಹೊಸಪೇಟೆಯ ನಗರಸಭೆ ಮೈದಾನ ( ವಿಜಯನಗರಕಾಲೇಜುಎದುರುಗಡೆ) ದಿಂದ ಬೆಳಿಗ್ಗೆ ೦೬-೦೦ ಗಂಟೆಗೆ ಪ್ರಾರಂಭವಾಗಿ ಹೊಸಪೇಟೆಯ ವಿವಿಧ ಸ್ಥಳಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಸೈಕಲ್‌ಉಪಯೋಗಿಸುವುದರ ಮಹತ್ವವನ್ನು ವಿವರಿಸಲಾಯಿತು, ಬೆಂಗಳೂರಿನ ಮೊದಲ ಸೈಕಲ್ ಮೇಯರ್ ಎಂಬ ಪ್ರಶಸ್ತಿಗೆ ಪಡೆದಶ್ರಿ ಸತ್ಯಶಂಕರಇವರು ಈ ಸೈಕಲ್‌ಜಾಥಾಕ್ಕೆ ಚಾಲನೆ ನೀಡಿದರು, ಹಾಗೂ ಅವರುತಮ್ಮ ಬಾಷಣದಲ್ಲಿ ಸೈಕಲ್‌ಉಪಯೋಗಿಸುವುದರಿಂದ ಆಗುವ ಲಾಭಗಳು ಹಾಗೂ ಪರಿಸರವನ್ನು ಹೇಗೆ ಸಂರಕ್ಷಿಸಬಹುದುಎಂದು ತಿಳಿಸಿಕೊಟ್ಟರು. ಸುಮಾರು ೨೫೦ ಕ್ಕೂ ಅಧಿಕ ಪರಿಸರ ಪ್ರೇಮಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಿರ್ಲೋಸ್ಕರ್ ಲೇಡೀಸ್‌ಕ್ಲಬ್ ಸದಸ್ಯೆಯರುಗಳು,ಕಾರ್ಖಾನೆಯ ಉದ್ಯೋಗಿಗಳು ಭಾಗವಹಿಸಿದ್ದರು.

ಈ ಚಲನಚಿತ್ರೋತ್ಸವದ ಅಂಗವಾಗಿ ದಿನಾಂಕ ೧೯-೧೧-೨೦೧೮ ರಿಂದ೩೦-೧೧-೨೦೧೮ ರವರೆಗೆ ಹೊಸಪೇಟೆ ಮತ್ತು ಕೊಪ್ಪಳದ ವಿವಿಧ ಶಾಲಾ-ಕಾಲೇಜುಗಳಲ್ಲಿ ಪರಿಸರದಕುರಿತು ಕಿರುಚಿತ್ರಗಳನ್ನು ಪ್ರದರ್ಶೀಸಲಾಗುತ್ತಿದೆ.

ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಮತ್ತುಕಿರುನಾಟಕ ಸ್ಪರ್ಧೆಯನ್ನು ದಿನಾಂಕ ೨೪-೧೧-೨೦೧೮ ರಂದುಆಯೋಜಿಸಲಾಗಿತ್ತು.

ಪರಿಸರ ಸಂರಕ್ಷಣೆಯಕುರಿತುಬೀದಿ ನಾಟಕವನ್ನು ದಿನಾಂಕ ೨೫-೧೧-೨೦೧೮ ರಂದು ಹೊಸಪೇಟೆಯಲ್ಲಿಆಯೋಜಿಸಲಾಗಿದ್ದು, ಈ ತಂಡವು ಹೊಸಪೇಟೆಯ ವಿವಿಧ ಸ್ಥಳಗಳಲ್ಲಿ ಪರಿಸರ ಸಂರಕ್ಷಣೆಯಕುರಿತು ಪ್ರಾತ್ಯಕ್ಷಿಕೆಯನ್ನುನೀಡಲಿದ್ದಾರೆ.

ದಿನಾಂಕ ೨೮-೧೧-೨೦೧೮ ರಂದುಚಿತ್ರಕಲಾ ಸ್ಪರ್ಧೆಯನ್ನು ಹೊಸಪೇಟೆಯಕೆಎಫ್‌ಐಎಲ್‌ಆಫೀಸರ್‍ಸ್‌ಕ್ಲಬ್‌ನಲ್ಲಿಆಯೋಜಿಸಲಾಗಿದ್ದು.ಈ ಚಿತ್ರಕಲಾ ಸ್ಪರ್ಧೆಯಲ್ಲಿರಾಜ್ಯದ ವಿವಿಧ ಪ್ರಾಂತ್ಯಗಳಿಂದ ಆಗಮಿಸಿದ ಕಲಾವಿದರು ಚಿತ್ರಗಳನ್ನು ಅನಾವರಣ ಮಾಡಲಿದ್ದಾರೆ.ಈ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಪ್ರಖ್ಯಾತಚಿತ್ರಕಲಾವಿದರಾದ ಶ್ರೀಮತಿ ಶ್ಯಾಮಲಾಗುರುಪ್ರಸಾದ್‌ಇವರು ಆಗಮಿಸಿ ಕಲಾವಿದರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ದಿನಾಂಕ ೨೯-೧೧-೨೦೧೮ ರಂದು ಹೊಸಪೇಟೆಯಕೆಎಫ್‌ಐಎಲ್‌ಆಫೀಸರ್‍ಸ್‌ಕ್ಲಬ್‌ನಲ್ಲಿ ಮಹಿಳೆಯರಿಗಾಗಿ ಪರಿಸರಸ್ನೇಹಿ ರಂಗೋಲಿ ಸ್ಪರ್ಧೆಯನ್ನುಆಯೋಜಿಸಲಾಗಿದೆ.

ಇದಲ್ಲದೇ, ಈ ಚಲನಚಿತ್ರೋತ್ಸವ ಮುಗಿದ ನಂತರವೂ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು ನಿಸರ್ಗದತ್ತ ನಡೆಕಾರ್ಯಕ್ರಮವನ್ನು ದಿನಾಂಕ ೦೨-೧೨-೨೦೧೮ ರಂದು, ವಿವಿಧ ಶಾಲೆ-ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆಯಕುರಿತುರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರಗಳ ಪ್ರದರ್ಶನವನ್ನು ದಿನಾಂಕ ೦೩-೧೨-೨೦೧೮ ರಿಂದ ೦೭-೧೨-೨೦೧೮ ರವರೆಗೆ, ನೀರು ಸಂರಕ್ಷಣೆಯಕುರಿತಂತೆದಿನಾಂಕ ೨೭-೧೨-೨೦೧೮ ರಂದುಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

Please follow and like us:
error