You are here
Home > Koppal News > ಕಿರ್ಲೋಸ್ಕರ್ ಕಾರ್ಖಾನೆ : ನಮ್ಮ ನಾಡು – ನಮ್ಮ ಸಂಸ್ಥೆ – ೨೦೧೮ ಪ್ರಶಸ್ತಿಗೆ ಭಾಜನ

ಕಿರ್ಲೋಸ್ಕರ್ ಕಾರ್ಖಾನೆ : ನಮ್ಮ ನಾಡು – ನಮ್ಮ ಸಂಸ್ಥೆ – ೨೦೧೮ ಪ್ರಶಸ್ತಿಗೆ ಭಾಜನ

Koppal : ನಿರಂತಕ ಇದೊಂದು ಕನ್ನಡ ಪರ ಕಾಳಜಿ ಇರುವ ಸಂಸ್ಥೆ ( ಎನ್ ಜಿ ಓ ) ಆಗಿದ್ದು, ೨೦೧೭ ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಮಾನವ ಸಂಪನ್ಮೂಲ ವೃತ್ತಿ ನಿರತರ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಸಂಯೋಜಿಸಿದ್ದರು.

ಈ ವರ್ಷವೂ ಸಹ ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು ಬೆಂಗಳೂರಿನ ಹೋಟಲ್ ಕ್ಯಾಪಿಟೋಲ್‌ನಲ್ಲಿ ಆಯೋಜಿಸಿದ್ದರು. ನಾಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುತ್ತಾ , ಸಂಸ್ಥೆಯಲ್ಲಿ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಉದ್ಯಮಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.

ಈ ಸಮ್ಮೇಳನದ ಅಂಗವಾಗಿ ನಮ್ಮ ನಾಡು ನಮ್ಮ ಸಂಸ್ಥೆ -೨೦೧೮ ಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದರು, ನಮ್ಮ ಕಾರ್ಖಾನೆಯ ವತಿಯಿಂದ ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿತ್ತು.

ಕಿರ್ಲೋಸ್ಕರ್ ಕಾರ್ಖಾನೆಯು ಸ್ಥಾಪಿತವಾದಾಗಿನಿಂದಲೂ ತನ್ನ ವ್ಯಾಪಾರ – ವಹಿವಾಟಿನ ಜೊತೆಯಲ್ಲಿಯೇ ಕನ್ನಡ ಭಾಷೆಯನ್ನು ತನ್ನ ದಿನನಿತ್ಯದ ವ್ಯವಹಾರದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸುತ್ತಾ ಬಂದಿದ್ದು ಹಾಗೆಯೇ ಕನ್ನಡ ಬೆಳವಣಿಗೆಗೆ ಪೂರಕ ವಾತಾವರಣವನ್ನು ಸೃಷ್ಠಿಸಿದುದರ ಹಿನ್ನೆಲೆಯಲ್ಲಿ ನಮ್ಮ ನಾಡು – ನಮ್ಮ ಸಂಸ್ಥೆ – ೨೦೧೮ ಪ್ರಶಸ್ತಿಗೆ ಭಾಜನವಾಗಿದೆ.

ದಿನಾಂಕ ೨೪-೧೧-೨೦೧೮ ರಂದು ಬೆಂಗಳೂರಿನ ಹೋಟಲ್ ಕ್ಯಾಪಿಟೋಲ್‌ನಲ್ಲಿ ನೆಡೆದ ಸಮಾರಂಭದಲ್ಲಿ ಕಿರ್ಲೋಸ್ಕರ್ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರಾದ  ಪಿ ನಾರಾಯಣ ಮತ್ತು ವ್ಯವಸ್ಥಾಪಕರಾದ   ರವಿಕುಮಾರ್ ಯಾದವ್ ಇವರುಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿರುತ್ತಾರೆ.

Top