ಕಿರ್ಲೋಸ್ಕರ್‌ಕಾರ್ಖಾನೆಗೆ ಸಚಿವರ ಭೇಟಿ

ಕಿರ್ಲೋಸ್ಕರ್‌ಕಾರ್ಖಾನೆಗೆ ಕೆ.ಜೆ.ಜಾರ್ಜ್, ಮಾನ್ಯ ಬೃಹತ್ ಮತ್ತುಮಧ್ಯಮಕೈಗಾರಿಕಾ ಸಚಿವರು
ಹಾಗೂ ಚಿಕ್ಕಮಗಳೂರು ಜಿಲ್ಲಾಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ ಭೇಟಿ

ಬಳ್ಳಾರಿ – ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿರುವ  ಬೃಹತ್ ಮತ್ತುಮಧ್ಯಮಕೈಗಾರಿಕಾ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾಉಸ್ತುವಾರಿ ಸಚಿವರಾದ   ಕೆ.ಜೆ.ಜಾರ್ಜ್‌ಇವರು ದಿನಾಂಕ ೦೫-೦೭-೨೦೧೯ ರಂದು ಕಿರ್ಲೋಸ್ಕರ್‌ಕಾರ್ಖಾನೆಗೆ ಭೇಟಿನೀಡಿದ್ದರು.ಈ ಸಂಧರ್ಭದಲ್ಲಿವೈದ್ಯಕೀಯ ಶಿಕ್ಷಣ ಹಾಗೂ ಕೊಪ್ಪಳ ಜಿಲ್ಲಾಉಸ್ತುವಾರಿ ಸಚಿವರಾದ  ಇ. ತುಕಾರಾಂ ಸಹ ಜೊತೆಗಿದ್ದರು.ಸಚಿವರುಕಾರ್ಖಾನೆಯ ಫೌಂಡ್ರಿಘಟಕದ ವಿವಿಧ ವಿಭಾಗಗಳಿಗೆ ಭೇಟಿ ನೀಡಿಉತ್ಪಾದನಾ ಕಾರ್ಯವಿಧಾನಗಳನ್ನು ವೀಕ್ಷಿಸಿದರು.ಅಲ್ಲದೇ, ಸಭೆ ನಡೆಸಿ, ಕಾರ್ಖಾನೆಯಉತ್ಪಾದನಾ ಪ್ರಕ್ರಿಯೆ, ಪರಿಸರ ನಿರ್ವಹಣಾ ಪದ್ಧತಿಯಡಿಲ್ಲಿಕೈಗೊಂಡ ಕಾರ್ಯಗಳು, ಹಾಗೂ ಸಿಎಸ್‌ಆರ್ ಆಡಿಯಲ್ಲಿಕೈಗೊಂಡ ಸಾಮಾಜಿಕ ಕಾರ್ಯಗಳ ಕುರಿತು ಪರಾಮರ್ಶಿಸಿದರು.ಕಾರ್ಖಾನೆಯುದೂರದೃಷ್ಠಿಯನ್ನಿಟ್ಟುಕೊಂಡುಉನ್ನತತಾಂತ್ರಿಕತೆಯನ್ನು ಅಡವಡಿಸಿರುವುದು, ಬೋರ್‌ವೆಲ್‌ಗಳಿಗೆ ಮರುಪೂರಣ ವ್ಯವಸ್ಥೆ, ಪರಿಸರ ಸಂರಕ್ಷಣೆಯಕುರಿತುಕೈಗೊಂಡಿರುವ ಚಟುವಟಿಕೆಗಳು ಹಾಗೂ ಸಮುದಾಯದಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸಗಳು ನಿಜಕ್ಕೂ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಾಧ್ಯವಾದ ಕಡೆಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಸಮತೋಲನ ಕಾಪಾಡಿಕೊಂಡು ಹೋಗಬೇಕೆಂದು ತಿಳಿಸಿದರು ಅಲ್ಲದೆ, ಕಾರ್ಖಾನೆಯಆವರಣದಲ್ಲಿ ಸಸಿ ನೆಡುವುದರ ಮೂಲಕ ತಮ್ಮ ಪರಿಸರ ಪ್ರೇಮವನ್ನು ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣ ಹಾಗೂ ಕೊಪ್ಪಳ ಜಿಲ್ಲಾಉಸ್ತುವಾರಿ ಸಚಿವರಾದ   ಇ.ತುಕಾರಾಂಇವರು ಈ ಸಂದರ್ಭದಲ್ಲಿಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿವಿಧ್ಯಾಭ್ಯಾಸ ಮುಗಿಸಿರುವ ವಿದ್ಯಾರ್ಥಿಗಳಿಗೆ ಕೌಶಲ್ಯತರಬೇತಿಯನ್ನುಎಲ್ಲಾ ಕಾರ್ಖಾನೆಗಳು ಸೇರಿಕೊಂಡು ಹಮ್ಮಿಕೊಳ್ಳಬೇಕು, ಅವರಲ್ಲಿ ಸ್ವತಂತ್ರವಾಗಿ ಬದುಕಲು ಬೇಕಾದ ಸ್ತೈರ್ಯ ಹಾಗೂ ಉತ್ತೇಜನ ನೀಡುವಂತಹತರಬೇತಿಯನ್ನು ನೀಡಬೇಕುಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಡಾ.ಎನ್.ಶಿವಶಂಕರ್, ಭಾ.ಆ.ಸೇ, ಮುಖ್ಯಕಾರ್ಯನಿರ್ವಾಹಕಅಧಿಕಾರಿ ಹಾಗೂ ಕಾರ್ಯಕಾರಿ ಸದಸ್ಯರು, ಕರ್ನಾಟಕಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು, ಸಚಿವರ ಆಪ್ತ ಕಾರ್ಯದರ್ಶಿಯಾದ   ಸತೀಶ್, ಜಿಲ್ಲಾಕೈಗಾರಿಕಾ ಮತ್ತು ವಾಣಿಜ್ಯಇಲಾಖೆಯ ಜಂಟೀ ನಿರ್ದೇಶಕರಾದ   ಪ್ರಶಾಂತ್, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ   ಆರ್.ವಿ.ಗುಮಾಸ್ತೆ, ಮಾನವ ಸಂಪನ್ಮೂಲ ವಿಭಾಗದ ಹಿರಿಯಉಪಾಧ್ಯಕ್ಷರು  ಪಿ.ನಾರಾಯಣ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

Please follow and like us:
error