ಕಿರ್ಲೋಸ್ಕರ್‌ಕಾರ್ಖಾನೆಗೆ ನವೀನ ಮಾನವ ಸಂಪನ್ಮೂಲ ಪದ್ಧತಿಗಳನ್ನು ಹೊಂದಿರುವ ಉನ್ನತ ಸಂಸ್ಥೆ ಪ್ರಶಸ್ತಿ

ಏಷ್ಯಾ ಪ್ಯಾಸಿಫಿಕ್ ಹೆಚ್.ಆರ್.ಎಮ್‌ಕಾಂಗ್ರೆಸ್‌ಕಮಿಟಿಯು ಕೊಪ್ಪಳ ಜಿಲ್ಲೆಯ ಹೆಸರಾಂತಕಂಪನಿಯಾದಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯನ್ನುನವೀನ ಮಾನವ ಸಂಪನ್ಮೂಲ ಪದ್ಧತಿಗಳನ್ನು ಹೊಂದಿರುವಉನ್ನತ ಸಂಸ್ಥೆಎಂದು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದೆ.
ದಿ ೧೭-೦೯-೨೦೧೯ ರಂದು ಬೆಂಗಳೂರಿನ ತಾಜ್ ಹೋಟಲ್‌ನಲ್ಲಿ ನಡೆದ ೧೮ ನೇ ಆವೃತ್ತಿಯಏಷ್ಯಾ ಪ್ಯಾಸಿಫಿಕ್ ಹೆಚ್‌ಆರ್‌ಎಮ್‌ಕಾಂಗ್ರೆಸ್ ವತಿಯಿಂದಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಕಿರ್ಲೋಸ್ಕರ್‌ಕಾರ್ಖಾನೆಯ ಉಪ ಪ್ರಧಾನ ವ್ಯವಸ್ಥಾಪಕರಾದ  ಬಿ.ಚಂದ್ರಶೇಖರ್‌ಕಾರ್ಖಾನೆಯ ಪರವಾಗಿ ಪ್ರಮಾಣಪತ್ರ ಸ್ವೀಕರಿಸಿದರು.ನವೀನ ಮಾನವ ಸಂಪನ್ಮೂಲ ಪದ್ಧತಿಯನ್ನು ಅಳವಡಿಸಿಕೊಂಡಿರುವ ಉನ್ನತ ಸಂಸ್ಥೆಗಳನ್ನು ಒಗ್ಗೂಡಿಸಿ,ಹೊಸ ವಿಚಾರಧಾರೆಗಳನ್ನು ಪ್ರಾಯೋಗಿಕವಾಗಿಚರ್ಚಿಸುವುದು ಹಾಗೂ ಸಾಮೂಹಿಕ ಚಿಂತನೆಯ ನಾಯಕತ್ವವನ್ನು ಬೆಳೆಸಿಕೊಳ್ಳುವ ಒಂದು ವೇದಿಕೆಯನ್ನು ನಿರ್ಮಾಣ ಮಾಡುವುದು ಈ ಸಮನ್ವಯ ಸಮಿತಿಯಉದ್ದೇಶವಾಗಿದೆ.
ಕಿರ್ಲೋಸ್ಕರ್‌ಕಾರ್ಖಾನೆಯು ವಿಭಾಗದ ಉದ್ದೇಶಗಳನ್ನು ಮತ್ತು ನೌಕರರಉತ್ಪಾದಕತೆಯ ಸಾಮರ್ಥ್ಯವನ್ನು ಹೆಚ್ಚಿಸಲುಉತ್ತಮ ಮಾನವ ಸಂಪನ್ಮೂಲ ಪದ್ಧತಿಗಳನ್ನು ಸಕ್ರೀಯವಾಗಿ ಅಳವಡಿಸಿಕೊಂಡಿದೆ.ಈ ಪದ್ಧತಿಗಳು ಉದ್ಯೋಗಿಗಳಲ್ಲಿ ಕಷ್ಠಕರವಾದ ಸಾಮಾಜಿಕ ಸಂಬಂಧಗಳನ್ನು ನಿರ್ವಹಿಸಲು ಹಾಗೂ ವ್ಯಾಪಾರಜ್ಙಾನವನ್ನುಉತ್ತೇಜಿಸುವುದರ ಮೂಲಕ ವ್ಯವಹಾರದಲ್ಲಿ ಸ್ಪರ್ಧಾತ್ಮಕ ಲಾಭದೊಂದಿಗೆ ಮುನ್ನಡೆಯುವ ಸಾಮರ್ಥ್ಯವನ್ನುತುಂಬುತ್ತದೆ.
ಬಲವಾದ ನಾಯಕತ್ವ ಮತ್ತು ನಿರ್ದೇಶನ, ಹೊಣೆಗಾರಿಕೆ, ಪ್ರತಿಭಾವಂತಕಾರ್ಯಪಡೆ, ಕೆಲಸವನ್ನುಕಾರ್ಯಗತ ಗೊಳಿಸುವುದಲ್ಲಿ ಮುಂದಾಳತ್ವ, ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಂಸ್ಕೃತಿಯನ್ನು ಹೊಂದಿರುವಕಿರ್ಲೋಸ್ಕರ್‌ಕಾರ್ಖಾನೆಯುಉನ್ನತಕಾರ್ಯಕ್ಷಮತೆಯ ಸಂಸ್ಥೆಯಾಗಿದೆ.ನವೀನ ಮಾನವ ಸಂಪನ್ಮೂಲ ಅಳವಡಿಕೆಯ ಮೂಲಕವೇ ಹೆಚ್ಚಿನಕಾರ್ಯಕ್ಷಮತೆಯ ಸಂಸ್ಕೃತಿ ಬರುತ್ತದೆ.
ಕಿರ್ಲೋಸ್ಕರ್‌ಕಾರ್ಖಾನೆಯಲ್ಲಿ ಪ್ರತಿಭಾವಂತರ ಆವಿಷ್ಕಾರ ಮತ್ತು ಪ್ರತಿಭಾವಂತರಧಾರಣಾ ಕ್ರಮಗಳು, ಯೋಜನೆಗಳು ಮತ್ತು ಸೇವೆಗಳು, ಬಹುಮಾನಗಳು ಮತ್ತುಗುರುತಿಸುವಿಕೆ / ಮನ್ನಣೆ, ಥಾಮಸ್‌ಅಸೆಸ್‌ಮೆಂಟ್ ಮತ್ತು ಶೈನ್ ಸಂಸ್ಥೆಯ ಸಹಯೋಗದಿಂದ ಉದ್ಯೋಗಿಗಳ ಕಾರ್ಯಕ್ಷಮತೆಯಲ್ಲಿ ಹೆಚ್ಚಳದ ಉಪಕ್ರಮಗಳು, ವೃತ್ತಿಯೋಜನೆ ಮತ್ತುಅಭಿವೃದ್ಧಿ ಅಭ್ಯಾಸಗಳು, ಕಾರ್ಯಕ್ಷಮತೆಯ ಮೌಲ್ಯಮಾಪನ, ಉತ್ತರಾಧಿಕಾರಯೋಜನೆ, ಕಿರ್ಲೋಸ್ಕರ್‌ಕಾರ್ಖಾನೆಯು ಕೆಲಸ ನಿರ್ವಹಿಸಲು ಅತ್ಯುತ್ತಮ ಸ್ಥಳ ಎಂಬ ಪರಿಕಲ್ಪನೆಯ ಸಾಕಾರ, ಅಲ್ಲದೇ ಸಮುದಾಯದಅಭಿವೃದ್ದಿಯಜವಾಬ್ದಾರಿಯ ಅಳವಡಿಕೆಯನ್ನು ಗುರುತಿಸಿ, ಈ ಪ್ರಶಸ್ತಿಯನ್ನು ನೀಡಲಾಗಿದೆಎಂದುಕಿರ್ಲೋಸ್ಕರ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯಉಪಾಧ್ಯಕ್ಷರಾದ   ಪಿ.ನಾರಾಯಣಇವರು ತಿಳಿಸಿದ್ದಾರೆ.ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತವಲ್ಲದೇ ವಿದೇಶಗಳ ೮೦ ಕ್ಕಿಂತಲೂ ಹೆಚ್ಚಿನ ಮಾನವ ಸಂಪನ್ಮೂಲ ಅಧಿಕಾರಿಗಳು ಭಾಗವಹಿಸಿದ್ದರು.

 

Please follow and like us:
error

Related posts