ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭರ್ಜರಿ ಜಯ

ಕೊಪ್ಪಳ : ಕೊಪ್ಪಳ ಜಿಲ್ಲಾ ಪೋಲಿಸ್ ವಾರ್ಷಿಕ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಕ್ರಿಕೆಟ್  ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.  ಜಿಲ್ಲಾ ಪೋಲಿಸ್ ಅಧಿಕಾರಿಗಳ ತಂಡ, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮೀಡಿಯಾ ಕ್ಲಬ್ ನಡುವೆ ಪಂದ್ಯಗಳು ನಡೆದವು. ಜಿಲ್ಲಾ ಪೋಲಿಸ್ ತಂಡ ಪತ್ರಕರ್ತರ ತಂಡಗಳನ್ನು ಸೋಲಿಸಿ ಮೊದಲ ಸ್ಥಾನ ಪಡೆದರೆ , ಕಾರ್ಯನಿರತ ಪತ್ರಕರ್ತರ ಸಂಘ ಮೀಡಿಯಾ ಕ್ಲಬ್ ವಿರುದ್ದ ಭರ್ಜರಿ ಜಯ ದಾಖಲಿಸಿತು. ೧೦ ಓವರ ಗಳಲ್ಲಿ ೧೩೩ ರನ್ ಗುರಿ ನೀಡಿದ ಕಾರ್ಯನಿರತ ಪತ್ರಕರ್ತರ ಸಂಘ  ಎದುರಾಳಿ ಮೀಡಿಯಾ ಕ್ಲಬ್ ತಂಡವನ್ನು ೮೪ ರನ್ ಗಳಿಗೆ ಆಲ್ ಔಟ್ ಮಾಡಿತು. ಆತಿಕ್ ೯೬ ರನ್ ಗಳಿಸಿ ೫ ವಿಕೆಟ್ ಪಡೆದರೆ, ಸಿರಾಜ್ ಬಿಸರಳ್ಳಿ ೩೦ ರನ್ ಬಾರಿಸಿದರು. 

Please follow and like us:
error