ಕಾರ್ಯಕರ್ತರೆ ಪಕ್ಷದ ಜೀವಾಳ-ಕೆ.ರಾಜಶೇಖರ ಹಿಟ್ನಾಳ


ಕೊಪ್ಪಳ-೧೪. ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ನಿವಾಸದ ಕಾರ್ಯಾಲಯದಲ್ಲಿ ಬರುವ ೧೬-೧೨-೨೦೧೮ರಂದು ನಡೆಯುವ ಶಕ್ತಿ ಅಭಿಯಾನ ಕಾರ್ಯಕ್ರಮದ ಪೂರ್ವಭಾವಿ ಸಬೇಯಲ್ಲಿ ಮಾತನಾಡಿದ ಮಾಜಿ ಜಿ.ಪಂ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಾಜಶೇಖರ ಹಿಟ್ನಾಳರವರು ನಿಷ್ಠೆಯಿಂದ ಪಕ್ಷದ ಸಂಘಟನೆಯೊಂದಿಗೆ ಕೈಜೋಡಿಸುವ ಕಾರ್ಯಕರ್ತರ ಬಲದಿಂದ ಪಕ್ಷದ ಏಳಿಗೆ ಸಾಧ್ಯ ಕೇವಲ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಸದ್ಬಳಕೆ ಮಾಡಿಕೊಂಡು ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿ ದೇಶದ ಜನತೆಗೆ ಸುಳ್ಳಿನ ಆಶ್ವಾಸನೆ ಕೊಟ್ಟು ಇಂದು ಮುಳುಗುವ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ ಬರುವ ಲೋಕಸಭಾ ಚುನಾವಣೆಗೆ ಪಕ್ಷದ ಮುಖಂಡರ ಜೊತೆಗೆ ಕಾರ್ಯಕರ್ತರು ಸನ್ನಧರಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿಯಿಡಿಯಲು ಸನ್ನಧರಾಗಬೇಕು ಅದಕ್ಕಾಗಿ ಪಕ್ಷದ ಅತ್ಯಂತ ಮಹಾತ್ವಕಾಂಕ್ಷಿ ಯೋಜನೆಯಾದ ಶಕ್ತಿ ಅಭಿಯಾನ ಯೋಜನೆಯಲ್ಲಿ ಪಾಲ್ಗೊಂಡು ಪಕ್ಷದ ಬಲವರ್ಧನೆ ಜೊತೆಗೆ ರಾಹುಲ ಗಾಂದಿಯವರ ಕೈ ಬಲ ಪಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಹಸನ್ ಸಾಬ ದೋಟಿಹಾಳರವರು ಪಂಚರಾಜ್ಯ ಚುನಾವಣೆಯಲ್ಲಿ ಈಗಾಗಲೇ ಫಲಿತಾಂಶ ಹೊರಹೊಮ್ಮಿದ್ದು ಪಕ್ಷದ ಕಾರ್ಯಕರ್ತರ ಸಂಘಟನೆಯ ಹೋರಾಟದಿಂದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಜಯಬೇರಿ ಭಾರಿಸಿದ್ದು ಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು ಪಕ್ಷದ ಮುಖಂಡರು ಪ್ರತಿಯೊಬ್ಬ ಕಾರ್ಯಕರ್ತನಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡಿ ಪಕ್ಷ ಸಂಘಟನೆ ಕೈಗೊಳ್ಳಲು ಸಹಕರಿಸಬೇಕೆಂದು ಮುಖಂಡರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಭೀಮಣ್ಣ ಅಗಸಿಮಂದೀನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವೆಂದ್ರಪ್ಪ ಬಳ್ಳೊಟಗಿ, ಶಿವ ಶಂಕರಗೌಡ ಪಾಟೀಲ, ನಗರಸಭೆ ಸದಸ್ಯೆ ಅಕ್ಬರ ಪಾಷಾ ಪಲ್ಟನ್, ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಮುಖಂಡರುಗಳಾದ ಮಾಲತಿ ನಾಯ್ಕ, ಭಾರತಿ ನೀಲಗಿರಿ, ಪರಸಪ್ಪ ಕತ್ತಿ, ಯುವ ಮುಖಂಡರಾದ ದೊಡ್ಡಬಸು ಬಯ್ಯಾಪುರ, ಶಕುಂತಲಾ ಹಿರೇಮಠ, ಮುರ್ತುಜಾ ಪೇಂಟರ್, ಫಾತೀಮಾ ಭೀ, ಪುರಸಭೆ ಸದಸ್ಯರಾದ ನಾಗರಾಜ ಹಿರೇಮಠ, ವಸಂತ ಮೇಲಿನಮನಿ, ರಾಮಣ್ಣ, ಇಮಾಮ್ ಸಾಬ ಗರಡಿಮನಿ, ತಾ.ಪಂ ಸದಸ್ಯ ಭೀಮಣ್ಣ ತೆಲ್ಲಿಖಾನ, ಸುರೇಶ ಕುಂಟನಗೌಡ್ರ, ಮತ್ತಿತರರು ಉಪಸ್ಥಿತಿಯಲ್ಲಿದ್ದರು.

Please follow and like us:
error