ಕಾರ್ಮಿಕರ ಮೇ-ಡೇ ರ್‍ಯಾಲಿಗೆ ಕೆಂಬಾವುಟ ಬೀಸುವುದರ ಮೂಲಕ ಚಾಲನೆ

ಕೊಪ್ಪಳ ನಗರದಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯೂಸಿಐ) ಆಯೋಜಿಸಿರುವ ೧೩೩ನೇ ವಿಶ್ವ ಕಾರ್ಮಿಕ ದಿನದ ಅಂಗವಾಗಿ ಬಸವೇಶ್ವರ ವೃತ್ತದಿಂದ ರ್‍ಯಾಲಿಯನ್ನು ಆರಂಭಿಸಲಾಯಿತು. ಕಾರ್ಮಿಕರ ಮೇ-ಡೇ ರ್‍ಯಾಲಿಗೆ ಕೆಂಬಾವುಟ ಬೀಸುವುದರ ಮೂಲಕ ಚಾಲನೆ ನೀಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕೃತರಾದ ಶ್ರೀ ವಿಠ್ಠಪ್ಪ ಗೋರಂಟ್ಲಿಯವರು ಮಾತನಾಡುತ್ತ ನಾನು ಸ್ವತ: ನೇಕಾರ ಕಾರ್ಮಿಕನಾಗಿ ದುಡಿದಿದ್ದೇನೆ. ಶ್ರಮಿಕರಿಂದ ಸಕಲ ಸಂಪತ್ತು ಸೃಷ್ಟಿಯಾಗುತ್ತದೆಯಾದರೂ ಯಾವತ್ತೂ ಮಾಲಿಕ ವರ್ಗ ಕಾರ್ಮಿಕರ ಶೋಷಣೆ ಮಾಟುವುದನ್ನು ಬಿಡಲಾರ. ತನ್ನ ಲಾಭಾಂಶದಲ್ಲಿ ಆತನ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದರೆ ಕಾರ್ಮಿಕನ ಕುಟುಂಬ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯಲ್ಲಿರಲು uci_koppaಸಾಧ್ಯ. ಕಾರ್ಮಿಕನ ಶೋಷಣೆ ಎಲ್ಲಿಯವರೆಗೆ ಮುಂದುವರೆತ್ತದೆಯೋ ಅಲ್ಲಿಯವರೆಗೆ ವರ್ಗ ಸಂಘರ್ಷ ನಿಲ್ಲುವುದಿಲ್ಲ ಎಂದರು
ಸಂಘಟಿತ-ಅಸಂಘಟಿತ-ಸೇವಾ ಕ್ಷೇತ್ರದ ನೂರಾರು ಕಾರ್ಮಿಕರು ವಿಶೇಷವಾಗಿ ಮಹಿಳಾ ಕಾರ್ಮಿಕರು ಕೈಯಲ್ಲಿ ಕೆಂಬಾವುಟಗಳನ್ನು ಹಿಡಿದು ರ್‍ಯಾಲಿಯುದ್ದಕ್ಕೂ ಮೇ-ಡೇ ಜಯಕಾರ ಮೊಳಗಿಸಿ, ಮಾಲಿಕ ವರ್ಗ ಹಾಗೂ ಸರ್ಕಾರಗಳ ಕಾನೂನು ವಿರೋಧಿ ನಡೆಯ ವಿರುದ್ಧ ಘೋಷಣೆ ಕೂಗಿದರು.
ಬಸವೇಶ್ವರ ವೃತ್ತದಿಂದ ರ್‍ಯಾಲಿ ಆರಂಭಿಸಿ ಸಾಹಿತ್ಯ ಭವನದ ಮೈದಾನಕ್ಕೆ ಬಂದು ತಲುಪಿದ ಕಾರ್ಮಿಕರ ಮೇಡೇ ಬಹಿರಂಗ ಸಭೆಗೆ ಹಿರಿಯ ಬಂಡಾಯ ಸಾಹಿತಿಗಳಾದ ಶ್ರೀ ಅಲ್ಲಮಪ್ರಭು ಬೆಟ್ಟದೂರು ಅವರು ತಮ್ಮ ಉದ್ಘಾಟನಾ ಭಾಷಣ ನೆರವೇರಿಸಿ ಈ ದಿನ ಕಾರ್ಮಿಕರು ಹೋರಾಡಿ ತಮ್ಮ ೮ ತಾಸಿನ ಕೆಲಸದ ಸಮಯವನ್ನು ಪಟೆದುಕೊಂಡರು. ಅಮೆರಿಕಾದಿಂದ ಆರಂಭವಾದ ಕಾರ್ಮಿಕರ ಈ ಜಾಗೃತಿ ಹೋರಾಟ ಇಲ್ಲಿಯವರೆಗೆ ನಿಂತಿಲ್ಲ. ಯಾಕೆಂದರೆ ಬಂಡವಾಳಶಾಹಿ ಮತ್ತು ಕಾರ್ಮಿಕನ ಮಧ್ಯದಲ್ಲಿ ಅಂತರ ಹೆಚ್ಚಾಗುತ್ತಿರುವುದೆ ಇದಕ್ಕೆ ಕಾರಣ. ಭಾರತ ದೇಶದ ಕಾರ್ಮಿಕರು ಅಮೆರಿಕಾ ಮತ್ತು ಯೂರೋಪ್ ದೇಶಗಳಿಗಿಂತಲೂ ಹೆಚ್ಚು ಶೋಷಣೆಗೆ ಒಳಗಾಗುತಿದ್ದಾರೆ. ಮಾಲಿಕನ ಶೋಷಣೆ ತಪ್ಪಬೇಕಾದರೆ ಎಲ್ಲಾ ಕ್ಷೇತ್ರದ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಹೇಳಿದರು.
ಟಿಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ್ ಪ್ರಾಸ್ತಾವಿಕ ಮಾತನಾಡಿ ಮೇಡೇ ಎನ್ನುವುದು ಕಾರ್ಮಿಕರಿಗೆ ಅತ್ಯಂತ ವಿಶೇಷ ದಿನ. ವಿಜ್ಞಾನದ ಬೆಳವಣಿಗೆಯಿಂದ ಕೈಗಾರಿಕಾ ಉತ್ಪಾದನೆ ಹೆಚ್ಚಾಯಿತು. ಆಗ ಮಾಲಿಕ ವರ್ಗ ಹಾಗೂ ಕಾರ್ಮಿಕ ವರ್ಗ ಉದಯವಾದವು. ಮಾಲಿಕ ತನ್ನ ಕೊನೆಯಿಲ್ಲದ ಲಾಭಕ್ಕಾಗಿ ೧೨-೧೬ ತಾಸಿನವರೆಗೆ ಕಾರ್ಮಿಕರನ್ನು ದುಡಿಸಿಕೊಂಡನು. ಅಸಮಾನ ಶೋಷಣೆಯನ್ನು ವಿರೋಧಿಸಿ ಕಾರ್ಮಿಕರ ರಾಜಕೀಯ ಚಿಂತಕರಾದ ಕಾರ್ಲ್‌ಮಾರ್ಕ್ಸ್-ಎಫ್. ಎಂಗೆಲ್ಸ್ ಇವರ ಬಂಡವಾಳ ಮತ್ತು ಕಮ್ಯೂನಿಸ್ಟ್ ಪ್ರಣಾಳಿಕೆಯಿಂದ ಪ್ರೇರಣೆ ಪಡೆದು ೧೭೭೧ ರಲ್ಲಿ ಫ್ರಾನ್ಸ್ ದೇಶದ ಪ್ಯಾರೀಸ್‌ನಲ್ಲಿ ಕಾರ್ಮಿಕರು ಸಶಸ್ತ್ರಕ್ರಾಂತಿ ಜರುಗಿಸಿ ೭೨ ದಿನ ಮಾತ್ರ ಅಧಿಕಾರ ನಡೆಸಿದರು. ೧೮೮೬ ರಲ್ಲಿ ಅಮೆರಿಕಾದ ಚಿಕ್ಯಾಗೋ ನಗರದಲ್ಲಿ ೧೬ ತಾಸು ದುಡಿಸಿಕೊಳ್ಳುವ ಬಂಡವಾಳಶಾಹಿ ಮಾಲಿಕರ ವಿರುದ್ಧ ದಂಗೆ ಎದ್ದು ಬೀದಿಗಿಳಿದರು. ಸರ್ಕಾರ ಮತ್ತು ಮಾಲಿಕರ ಗೂಂಡಾಗಳ ಬಂದೂಕಿಗೆ ಕಾರ್ಮಿಕರು ಎದೆಯೊಡ್ಡಿದರು. ಆಗ ೪ ಕಾರ್ಮಿಕರು ಗಲ್ಲಿಗೇರಿದಾಗ ಇಡೀ ಜಗತ್ತಿನ ಕಾರ್ಮಿಕರು ಖಂಡಿಸಿ, ೮ ತಾಸಿನ ಕೆಲಸಕ್ಕಾಗಿ ಹೋರಾಡಿದಾಗ ಅಂದಿನಿಂದ ಕೆಂಬಾವುಟ ಉದಯವಾಗಿ ೮ತಾಸಿನ ಕೆಲಸದ ಹಕ್ಕು ಲಭಿಸಿತು. ದೇಶದಲ್ಲಿ ನರೇಂದ್ರ ಮೋದಿಯವರು ೪೪ ಲೇಬರ್ ‘ಲಾ’ಗಳ ಜಾಗದಲ್ಲಿ ಕೇವಲ ೪ ಲೇಬರ್ ಕೋಡ್‌ಗಳನ್ನು ತಂದು ಕಾನೂನು ಬಲಹೀನಗೊಳಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ದೇಶದಲ್ಲಿ ಕಾರ್ಮಿಕರು ಮತ್ತೊಮ್ಮೆ ದಂಗೆ ಏಳಬೇಕಿದೆ
ಮತ್ತೊಬ್ಬ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಡಿ.ಎಚ್.ಪೂಜಾರ ಇವರು ಮಾತನಾಡಿ ದೇಶದಲ್ಲಿ ರೈತ ಕಾರ್ಮಿಕರ ಐಕ್ಯತೆಯಿಂದ ಮಾತ್ರ ಚಳವಳಿಯಿಂದ ಮಾತ್ರ ಈ ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ ಎಂದರು.
ವೇದಿಕೆ ಮೇಲೆ ಜಿಲ್ಲಾಧ್ಯಕ್ಷರಾದ ಚನ್ನವೀರಯ್ಯ ಹಿರೆಮಠ, ಮೂಕಪ್ಪ ಎನ್. ಮೇಸ್ತ್ರಿ, ರತ್ನಮ್ಮ ಪುರಾಣಿಕಮಠ. ವೀರಮ್ಮ ಗಡಾದ, ಬಸವರಾಜ ನರೆಗಲ್, ಶರಣಪ್ಪ ಟಿ. ಮೆತ್ತಗಲ್, ವಿದ್ಯಾ ನಾಲವಾಡ, ಕೆ.ಎಸ್.ಮೈಲಾರಪ್ಪ, ಬಸಮ್ಮ ದೊಡ್ಮನಿ ಎದ್ದರು.

Please follow and like us:
error