ಬಿಜೆಪಿ ಮುಖಂಡನ ಮನೆಗೆ ಕಾಂಗ್ರೇಸ್ ಚುನಾವಣಾ ವೀಕ್ಷಕ

ಕಾಂಗ್ರೇಸ್ ಚುನಾವಣಾ ವೀಕ್ಷಕರಾದ ವಿ.ನಾರಯಣಸ್ವಾಮಿ ದಿಢೀರ್ ಬಿಜೆಪಿ ಮುಖಂಡನ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.. ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಇಂದು ಚುನಾವಣಾ ವೀಕ್ಷಕರಾದ ವಿ.ನಾರಯಣಸ್ವಾಮಿ ಭೇಟಿ ನೀಡಿದ್ರು. ಇದಕ್ಕೂ ಮೊದಲು ಗಂಗಾವತಿ ಸಮೀಪದ ವಿದ್ಯಾನಗರ ಬಳಿಯ ಬಿಜೆಪಿ ಮುಖಂಡ ಹಾಗೂ ಪಂಚಮಸಾಲಿ ಸಮಾಜದ ಮುಖಂಡನ ಮನೆಗೆ ವಿ.ನಾರಣಸ್ವಾಮಿ ಹಾಗೂ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮನೆಗೆ ಭೇಟಿ ನೀಡಿ ಅರ್ಧಗಂಟೆಗಳ ಕಾಲ ಚರ್ಚೆ ಮಾಡಿದ್ರು. ಇನ್ನು ಬಿಜೆಪಿ ಮುಖಂಡರ ಮನೆಗೆ ಕಾಂಗ್ರೇಸ್ ಚುನಾವಣಾ ವಿಕ್ಷಕರು ತೇರಳಿದ್ದನ್ನು ಗಮನಿಸಿದ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಬಿಜೆಪಿ ಮುಖಂಡನ ಮನೆಗೆ ಬಂದು ಇಲ್ಲಿಗ್ಯಾಕೆ ಬಂದಿದ್ದೀರಿ ಎಂದು ವೀಕ್ಷಕರನ್ನು ಪ್ರಶ್ನೆ ಮಾಡಿದ್ರು. ಇದ್ರಿಂದ ಕೆಲ ಕಾಲ ಗೊಂದಲಕ್ಕೀಡಾದ ವೀಕ್ಷಕರು, ಇದು ಬಿಜೆಪಿ ಮುಖಂಡನ ಮನೆ ಅಂತಾ ನನಗೆ ಗೊತ್ತಿದ್ದಿಲ್ಲ. ಆತ್ಮೀಯರು ಎನ್ನುವ ಕಾರಣಕ್ಕೆ ಬಂದಿದ್ದೇನೆ ಎಂದು ಅಲ್ಲಿಂದ ಕಾಲ್ಕಿತ್ತಿದ್ರು. ಇನ್ನು ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೇಟ್ ಜೆಡಿಎಸ್ ಬಂಡಾಯ ಶಾಸಕ ಇಕ್ಬಾಲ್ ಅನ್ಸಾರಿಗೆ ಪೈನಲ್ ಆಗಿತ್ತು. ಇದರ ನಡುವೆ ನಾನು ಕೂಡ ಟಿಕೇಟ್ ಆಕಾಂಕ್ಷಿ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಪ್ರಚಾರಕ್ಕಿಳಿದಿದ್ದು ಇಷ್ಟೇಲ್ಲಾ ಅವಾಂತರಗಳಿಗೆ ಕಾರಣವಾಗಿದೆ.

Related posts