ಕಾಂಗ್ರೆಸ್ ಮುಖಂಡ ಡಾ.ಅಮರೇಶ ಬಂಡಿ ಕರೋನಾಕ್ಕೆ ಬಲಿ

ಗಂಗಾವತಿ : .ಕಾಂಗ್ರೆಸ್ ಮುಖಂಡ ಡಾ.ಅಮರೇಶ ಬಂಡಿ ಕರೋನಾಕ್ಕೆ ಬಲಿಯಾಗಿದ್ದಾರೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಅಮರೇಶ ಬಂಡಿ ಹಂಪಿ ಯುನಿವರ್ಸಿಟಿ ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದರು. ಪ್ರಗತಿಪರ ನಿಲುವಿನೊಂದಿಗೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು.

ಮಲ್ಲಾಪುರ ಗ್ರಾಮದವರಾದ ಹಾಗೂ ಆನೆಗುಂದಿ ಭಾಗದ ಪ್ರಬಲ ಕಾಂಗ್ರೆಸ್ ಮುಖಂಡರು ಹಾಗೂ ವಾಲ್ಮೀಕಿ ಸಮಾಜದ ಪ್ರಮುಖ ನಾಯಕರಾದ ಮತ್ತು ನನ್ನ ಆಪ್ತರಾಗಿದ್ದ ಡಾ.ಅಮರೇಶ ಬಂಡಿಯವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ, ಇದು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬದವರಿಗೆ ದೇವರು ದುಃಖಭರಿಸುವ ಶಕ್ತಿ ನೀಡಲಿ ಹಾಗೂ ಇವರಿಗೆ ಸ್ವರ್ಗ ಪ್ರಾಪ್ತಿಸಲಿಯೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ- ಇಕ್ಬಾಲ್ ಅನ್ಸಾರಿ Iqbal Ansari

ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಡಾ . ಅಮರೇಶ್ ಬಂಡಿ ( 36 ) ಕರೋನಾ ಸೊಂಕಿಗೆ ಬಲಿಯಾಗಿದ್ದಾರೆ .

ಎರಡು ದಿನಗಳ ಹಿಂದೆ ಅಲ್ಪ ಜ್ವರ ಕಾಣಿಸಿಕೊಂಡು ನಿನ್ನೆ ತೀವ್ರ ಉಸಿರಾಟದ ತೊಂದರೆ ಕಂಡುಬಂದಿದ್ದರಿಂದ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. . ಡಾ . ಅಮರೇಶ್ ಬಂಡಿ ಸಾವಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ , ಶ್ಯಾಮೀದ್ ಮನಿಯಾರ್ ಸೇರಿದಂತೆ ಇತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 

Please follow and like us:
error