ಕಾಂಗ್ರೆಸ್ ಮುಖಂಡನ ರೌದ್ರಾವತಾರ : ದಂಪತಿಗಳ ಮೇಲೆ ಹಲ್ಲೆ

ಕೊಪ್ಪಳ : ಕಾಂಗ್ರೆಸ್ ಜಿಲ್ಲಾ ಮುಖಂಡ ರೌದ್ರಾವತಾರ ಪ್ರದರ್ಶನ ಮಾಡಿದ್ದು ಸಾರ್ವಜನಿಕ ವಾಗಿ ಮೈಸೂರು ಮೂಲದ ದಂಪತಿಯನ್ನು ಥಳಿಸಿದ ಘಟನೆ ಕೊಪ್ಪಳದ ಅಶೋಕ ಸರ್ಕಲ್ ಬಳಿ ನಡೆದಿದೆ.

ದದೇಗಲ್ ಗ್ರಾಮದ ಗಾಳೆಪ್ಪ ಪೂಜಾರ ಕಾಂಗ್ರೆಸ್ ಮುಖಂಡ ಜಿಲ್ಲಾ ಎಸ್ಸಿ ಘಟಕದ ಅದ್ಯಕ್ಷ ಥಳಿಸಿದ ವ್ಯಕ್ತಿ.ಥಳಿತಕ್ಕೊಳಗಾದವರು ಮೈಸೂರು ಮೂಲದ ಬಾಲು ಎಂಬ ದಂಪತಿಗಳು ಎಂದು ತಿಳಿದು ಬಂದಿದೆ‌

ಪೊಲೀಸರ ಸಮ್ಮುಖದಲ್ಲಿಯೇ ರೌಡಿಜಂ ಮಾಡಿದ್ದಾರೆ.

ವಾಹನ ಪಾರ್ಕಿಂಗ್ ಮಾಡುವ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿದ್ದು ದಂಪತಿಗಳನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. ಕೊಪ್ಪಳ ನಗರಠಾಣೆಗೆ ಗಾಳೇಪ್ಪನನ್ನು ಕರೆದೊಯ್ದು ಪೊಲೀಸರು ಕರೆದೊಯ್ದಿದ್ದಾರೆ.