ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ದಾರಿ ತಪ್ಪಿಸುವ ಪ್ರಯತ್ನದಲ್ಲಿ ನಿರತವಾಗಿದೆ- ಸಿ.ವಿ. ಚಂದ್ರಶೇಖರ


ಕೊಪ್ಪಳ : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮುಳುಗುತ್ತಿರುವ ಕಾಂಗೆಸ್ ದೋಣಿಯನ್ನು ಎತ್ತಲು ಅರ್ಧ ಸತ್ಯವನ್ನು ಹೇಳುವ ಮೂಲಕ ಎಂದಿನಂತೆ ಜನಸಾಮಾನ್ಯರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ನಿರತವಾಗಿದೆ. ಇಂದು ಭಾರತ ಬಂದ್‌ಗೆ ಕರೆ ನೀಡಿರುವುದು ಆ ಪ್ರಯತ್ನದ ಮತ್ತೊಂದು ಆಯಮವಾಗಿದೆ.
ತೈಲ ಕ್ಷೇತ್ರದ ವಾಸ್ತವ ಚಿತ್ರಣವನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಮುಚ್ಚಿಡಲು ಪ್ರಯತ್ನಿಸುತ್ತಿದೆ, ೧೯೪೭ರಿಂದ ೨೦೧೪ರ ತನಕ ೬೭ ವರ್ಷದ ಸ್ವಾತಂತ್ರ ಭಾರತದ ಆಡಳಿತದಲ್ಲಿ ೫೭ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ತೈಲ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿ ಮಾಡುವಲ್ಲಿ ಸಂಪೂರ್ಣವಾಗಿ ವಿಪಲವಾಗಿತ್ತು. ಇಂದು ಸಹ ಭಾರತ ತನ್ನ ಬೇಡಿಕೆಯ ಶೇ.೮೨% ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು ದೇಶದ ಭವಿಷ್ಯದ ಬಗ್ಗೆ ಕಾಳಜಿ ವಹಿಸಿದ, ದೂರದೃಷ್ಟಿಯನ್ನು ಹೊಂದಿರದೆ ಇದ್ದ ಕಾಂಗ್ರೆಸ್ ಪಕ್ಷ ತಮ್ಮ ಅಧಿಕಾರ ಅವಧಿಯಲ್ಲಿ ಭವಷ್ಯದ ಕುರಿತು ಗಮನಹರಿಸದೇ ಇದ್ದುದ್ದರ ಪರಿಣಾಮವೇ ಇಂದು ದೇಶದ ಆರ್ಥಿಕತೆ/ಜನಸಾಮಾನ್ಯರಿಗೆ ಅನಾನುಕೂಲ ಉಂಟಾಗುತ್ತಿರುವ ತೈಲ ಕ್ಷೇತ್ರದ ಸಮಸ್ಯೆ ಬೃಹತ ಉದಾಹರಣೆಯಾಗಿದೆ.
ಈ ಕುರಿತು ಜನಸಾಮಾನ್ಯರಿಗೆ ಸಂಪೂರ್ಣ ಮಾಹಿತಿ ಇದ್ದು ಕಾಂಗ್ರೆಸ್ ಪಕ್ಷದ ದಾರಿ ತಪ್ಪಿಸುವ ತಂತ್ರಗಳಿಗೆ ಕಿವಿಗೊಡದೆ ಇಂದು ಭಾರತ ಬಂದ್‌ಗೆ ಕರೆ ಕೊಟ್ಟಿರುವ ಪಕ್ಷವನ್ನು ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಬಂದ್ ಮಾಡುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿಜೀ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ  ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Please follow and like us:
error