You are here
Home > Election_2018 > ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಲು ಶಕ್ತಿ ಅಭಿಯಾನ- ಕೆ.ರಾಜಶೇಖರ ಹಿಟ್ನಾಳ

ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಲು ಶಕ್ತಿ ಅಭಿಯಾನ- ಕೆ.ರಾಜಶೇಖರ ಹಿಟ್ನಾಳ

-ಡಿ.೧೦ ರಂದು ಶಕ್ತಿ ಅಭಿಯಾನ ಕಾರ್ಯಕ್ರಮ
-ಪ್ರತಿ ವಿಧಾನಸಭಾ ಕ್ಷೇತ್ರದಿಂದ ೩೦ ಸಾವಿರ ನೊಂದಣಿ ಗುರಿ
ಕೊಪ್ಪಳ :
ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೂ ಕಾರ್ಯಕರ್ತರನ್ನು ಸಂಘಟನೆ ಮಾಡುವ ನಿಟ್ಟನಲ್ಲಿ ಶಕ್ತಿ ಅಭಿಯಾನ ಹಮ್ಮೀಕೊಳ್ಳುವ ಮೂಲಕ, ಪಕ್ಷವನ್ನು ಸದೃಢಗೊಳ್ಳಿಸಲು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಡಿ.೧೦ ರಂದು ಶಕ್ತಿ ಅಭಿಯಾನವನ್ನು ಹಮ್ಮೀಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಕೆ.ರಾಜಶೇಖರ್ ಹಿಟ್ನಾಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ತಯಾರಿಯ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ ಪ್ರಮಾಣದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಲಾಗುತ್ತಿದೆ, ಪ್ರತಿಯೊಂದು ವಿಧಾನಸಬಾ ಕ್ಷೇತ್ರದಿಂದ ೩೦ ಸಾವಿರ ಕಾರ್ಯಕರ್ತರನ್ನು ನೊಂದಣಿ ಮಾಡಿಸುವ ಮೂಲಕ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಿಂದ ಒಂದುವರೆ ಲಕ್ಷಕ್ಕೂ ಅಧಿಕ ಮತದಾರರನ್ನು ಪಕ್ಷದ ಒಡನಾಡಿಗಳನ್ನಾಗಿಸು ಕಾರ್ಯವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯು ಮಾಡುತ್ತಿದೆ ಎಂದು ತಿಳಿಸಿದರು.
ಡಿ.೧೦ ರಂದು ಶಕ್ತಿ ಕಾರ್ಯಕ್ರಮ
ನಗರದ ಶಿವಶಾಂತವೀರ ಮಂಗಳ ಭವನದಲ್ಲಿ ಡಿ.೧೦ ರಂದು ಶಕ್ತಿ ಕಾರ್ಯಕ್ರಮವನ್ನು ನಿಗದಿಗೊಳ್ಳಿಸಲಾಗಿದ್ದು ಸುರಜ್ ಹೆಗಡೆ ಶಕ್ತಿ ಕಾರ್ಯಕ್ರಮದ ರೂಪರೇಷಗಳ ವಿವರಣೆಯನ್ನು ನೀಡುವರು, ಅಲ್ಲದೇ ಶ್ರೀಧರ್ ಕಲ್‌ವೀರ್ ಪಕ್ಷದ ಸಂಘಟನೆ ಕುರಿತು ಸಲಹೆ ನೀಡುವರು, ಹಾಗೂ ಬಿ.ಎಲ್.ಶಂಕರ್ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸುವರು ಎಂದು ಹೇಳಿದರು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ, ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ಕೆಪಿಸಿಸಿ ಜಿಲ್ಲಾ ಸದಸ್ಯರು, ಬ್ಲಾಕ್ ಮತ್ತು ತಾಲೂಕ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಸೇರಿದಂತೆ ಮುಂಚೂಣಿ ಘಟಕಗಳು ಮತ್ತು ಜಿಲ್ಲೆಯ ಪಕ್ಷದ ಎಲ್ಲಾ ಚುನಾಯಿತ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಭಾಗ್ಯನಗರ ಪ.ಪಂ. ನಾಮ ನಿರ್ದೇಶಿತ ಸದಸ್ಯ ಮಂಜುನಾಥ.ಜಿ.ಗೊಂಡಬಾಳ, ನಗರಸಭೆ ಸದಸ್ಯ ಅಕ್ಬರ್ ಪಾಷಾ ಮತ್ತು ಜಿಲ್ಲಾ ವಕ್ತಾರ ರವಿ ಕುರುಗೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Top