ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೧೩, ಕ್ಷೇತ್ರದ ಕಾತರಕಿ-ಗುಡ್ಲಾನೂರ, ಮೈನಳ್ಳಿ, ಹಂದ್ರಾಳ, ಹಣವಾಳ ಹಾಗೂ ವದಗನಾಳ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿಯಲ್ಲಿ ರೂ.೩ ಕೋಟಿ ೫೦ ಲಕ್ಷದ ಸಿ.ಸಿ.ರಸ್ತೆ, ಚರಂಡಿ ಹಾಗೂ ಚೆಕ್‌ಡ್ಯಾಂ ನಿರ್ಮಾಣ, ಮೈನಳ್ಳಿ-ಹಂದ್ರಾಳ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಕ್ಷೇತ್ರದ ಅಭಿವೃದ್ಧಿಗೆ ಸುಮಾರು ಅಂದಾಜು ಮೊತ್ತ ೨ ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದ್ದು ಇದರಿಂದ ಕ್ಷೇತ್ರದಲ್ಲಿ ಸುಮಾರು ೨೦ ವರ್ಷಗಳಿಂದ ಕುಂಠಿತಗೊಂಡ ಕಾಮಗಾರಿಗಳಿಗೆ ಪುರ್ನಜೀವನ ನೀಡಿ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಅಭಿವೃದ್ಧಿಯ ಕಾಮಗಾರಿಗಳು ತಲೆ ಎತ್ತಿವೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನೆ ಮಾಡುವ ಬಿ.ಜೆ.ಪಿ. ನಾಯಕರು ತಮ್ಮ ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದಾರೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲ ಸಲ್ಲದ ಆರೋಪಗಳನ್ನು ಬಿಟ್ಟು ತಾವು ಮಾಡಿದ ಕಾರ್ಯಗಳ ಬಗ್ಗೆ ವಿವರಣೆ ನೀಡಬೇಕು, ನಾವು ನಮ್ಮ ಸರಕಾರದ ಅವಧಿಯಲ್ಲಿ ತಂದ ಅನುದಾನವನ್ನು ಸದ್ಬಳಕೆ ಮಾಡಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿ ತೋರಿದ್ದೇವೆ. ಕ್ಷೇತ್ರದ ಜನತೆ ಅಭಿವೃದ್ಧಿ ಕಾರ್ಯಗಳಿಗೆ ಕೈ ಬಲಪಡಿಸುವ ಕಾಲ ಸನ್ನಿದ್ದವಾಗಿದೆ. ಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ವಿರೋಧಿಗಳಿಗೆ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಮುಖಂಡರುಗಳಾದ ಯಮನಪ್ಪ ಕಬ್ಬೇರ, ವೆಂಕನಗೌಡ್ರ ಹಿರೇಗೌಡ್ರ, ಶಂಕರಗೌಡ್ರ ಹಿರೇಗೌಡ್ರ, ಕೃಷ್ಣಾರಡ್ಡಿ ಗಲಿಬಿ, ದೇವರಡ್ಡಿ, ರಾಮನಗೌಡ್ರ, ಷಣ್ಮುಖರಡ್ಡಿ, ವಿದ್ಯಾ ಹಿರೇಗೌಡ್ರ, ಯಲ್ಲನಗೌಡ್ರ ಗುಡ್ಲಾನೂರ, ರಾಜಪ್ಪ, ಮಲ್ಲಪ್ಪ ಮಾಂತಪ್ಪನವರ, ಅಂದಪ್ಪ ನಾಯಕ, ವಿವಿಧ ಇಲಾಖೆಯ ಅಭಿಯಂತರರು, ಗುತ್ತಿಗೆದಾರರು ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error