ಕಾಂಗ್ರೆಸ್ ಕಟ್ಟುವಲ್ಲಿ ಗಾಂಧೀ ಕುಟುಂಬದ ಬಲಿದಾನ ದೊಡ್ಡದು : ಹಿಟ್ನಾಳ

ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಸೋನಿಯಾ ಹುಟ್ಟುಹಬ್ಬದಲ್ಲಿ ಹೇಳಿಕೆ
ಕೊಪ್ಪಳ, ಡಿ. 09: ದೇಶದಲ್ಲಿ 150 ವರ್ಷ ಇತಿಹಾಸದ ಕಾಂಗ್ರೆಸ್ ಕಟ್ಟುವ ಕೆಲಸದಲ್ಲಿ ಗಾಂಧೀ ಕುಟುಂಬದ ತ್ಯಾಗ ಮತ್ತು ಬಲಿದಾನ ದೊಡ್ಡದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ 3ನೇ ವಾರ್ಡಿನಲ್ಲಿ ಕೊಪ್ಪಳ ಮಹಿಳಾ ಕಾಂಗ್ರೆಸ್‍ನ ವತಿಯಿಂದ ಹಮ್ಮಿಕೊಂಡಿದ್ದ ಸೋನಿಯಾ ಗಾಂಧಿ ಅವರ 73ನೇ ಹುಟ್ಟುಹಬ್ಬ ನಿಮಿತ್ಯ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಕೇಕ್ ಕಟ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ದೇಶದಲ್ಲಿ ಸಾಕಷ್ಟು ಸಾಧಿಸಿದೆ, ವಿರೋಧಿಗಳು ಕೇವಲ ಸುಳ್ಳುಗಳನ್ನು ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ, ಅಲ್ಲದೆ ದೇಶಕ್ಕೆ ಸ್ವಾತಂತ್ರ್ಯ ತರಿಸುವಲ್ಲಿ ಎಷ್ಟು ದೊಡ್ಡ ಪಾತ್ರವಹಿಸಿದೆ, ಅಷ್ಟೇ ದೊಡ್ಡ ಕೆಲಸವನ್ನು ಸ್ವಾತಂತ್ರ್ಯ ಬಂದು 70 ವರ್ಷದಲ್ಲಿ ಮಾಡಿದೆ ಎಂದರು.
ಕೆಪಿಸಿಸಿ ರಾಜ್ಯ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಕಿಶೋರಿ ಬೂದನೂರ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೆಪಿಸಿಸಿ ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಕೊಪ್ಪಳ ಬ್ಲಾಕ್ ಅಧ್ಯಕ್ಷ ಚಾಂದಪಾಶಾ ಕಿಲ್ಲೆದಾರ್, ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಯಶೋಧಾ ಮರಡಿ, ಸದಸ್ಯರಾದ ಹುಲಿಗೆಮ್ಮ ತಟ್ಟಿ, ಸವಿತಾ ಗೋರಂಟ್ಲಿ, ಕುಡಾ ಮಾಜಿ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ಜಿ. ಪಂ. ಸದಸ್ಯ ಎಸ್. ಬಿ. ನಾಗರಳ್ಳಿ, ಮಾಜಿ ಜಿ. ಪಂ. ಸದಸ್ಯ ಪ್ರಸನ್ನ ಗಡಾದ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಜಾಕೀರ ಹುಸೇನ್ ಇತರರು ಇದ್ದರು.

Please follow and like us:
error