ಕಾಂಗ್ರೆಸ್ ಐಎನ್‌ಟಿಯುಸಿ ರಾಜ್ಯ ಕಾರ್ಯದರ್ಶಿಯಾಗಿ ಗೊಂಡಬಾಳ ನೇಮಕ


ಕೊಪ್ಪಳ, ನ. ೧೫: ನಗರದ ಯುವ ಮುಖಂಡ, ಭಾಗ್ಯನಗರ ಪಟ್ಟಣ ಪಂಚಾಯತ ಸದಸ್ಯ ಮಂಜುನಾಥ ಜಿ. ಗೊಂಡಬಾಳ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ (ಐಎನ್‌ಟಿಯುಸಿ ರಾಜ್ಯ ಸಮಿತಿ) ದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ರಾಜ್ಯ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಆದೇಶ ಹೊರಡಿಸಿದ್ದಾರೆ.
ರಾಜ್ಯ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನಿರ್ದೇಶನದ ಮೇರೆಗೆ ರಾಜ್ಯ ಸಮಿತಿಗೆ ನೇಮಿಸಿದ್ದು, ಕೊಪ್ಪಳ, ಬಳ್ಳಾರಿ, ಗದಗ, ರಾಯಚೂರ, ಬಿಜಾಪೂರ ಮತ್ತು ಬಾಗಲಕೋಟ ಜಿಲ್ಲೆಗಳಿಗೆ ಕಾಂಗ್ರೆಸ್ ಕಾರ್ಮಿಕ ವಿಭಾಗದ ಉಸ್ತುವಾರಿಯನ್ನು ಸಹ ನೀಡಿದ್ದು ಸದರಿ ಜಿಲ್ಲೆಗಳಲ್ಲಿ ಕಾರ್ಮಿಕ ವಿಭಾಘದ ಮೂಲಕ ಎಲ್ಲಾ ಪ್ರಕಾರದ ಕಾರ್ಮಿಕರನ್ನು ಒಳಗೊಂಡ ಸಮಿತಿಗಳ ನೇಮಕ ಮತ್ತು ಅವುಗಳ ಕ್ರಿಯಾಶೀಲತೆ ಹಾಗೂ ಸರಕಾರದ ಕಾರ್ಮಿಕ ಇಲಾಖೆಯಲ್ಲಿ ಕಾರ್ಡ್ ಕೊಡಿಸಲು ಶ್ರಮಿಸುವಂತೆ ಕರೆ ನೀಡಿದ್ದು. ಮುಂಬರುವ ೨೦೧೯ರ ಲೋಕಸಭೆ ಚುನಾವಣೆಗೆ ಈ ಜಿಲ್ಲೆಗಳ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ರಿಯಾಶೀಲ ಕಾರ್ಯಕರ್ತರನ್ನು ತಯಾರಿ ಮಾಡಬೇಕು ಎಂದು ಸೂಚಿಸದ್ದಾರೆ.

Please follow and like us:
error