ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ಕಗ್ಗೊಲೆ: ಅಮರೇಶ ಕರಡಿ

ಕೊಪ್ಪಳ, ಪೆ.೦೩: ರಾಜ್ಯದಲ್ಲಿ ದಿನೆ ದಿನೇ ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಸಮುದಾಯದಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೂಲೆ ಮಾಡುತ್ತಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಬೂತ ಸಮಿತಿ ಸಂಚಾಲಕ ಅಮರೇಶ ಕರಡಿ ಆರೋಪಿಸಿದರು.
ಅವರು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಭಾಜಪ ಜಿಲ್ಲಾ ಘಟಕದಿಂದ ಕಾರ್ಯಕರ್ತ ಸಂತೋಷ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಇತ್ತಿಚೀನ ಮಧ್ಯರಾತ್ರಿ ಬೆಂಗಳೂರಿನ ಜೆ.ಸಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪ ಗಾರ್ಡನ್ ಹತ್ತಿರ ಸಂತೋಷ ಎಂಬುವ ಬಿಜೆಪಿ ಕಾರ್ಯಕರ್ತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವುದು ನಾಗರಿಕ ಸಮಾಜ ತೆಲೆ ತಗ್ಗಿಸುವಂತಾಗಿದೆ. ಇಂದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರ್ಯಕರ್ತರ ೨೪ ನೇ ಕೊಲೆಯಾಗಿದ್ದು, ಸುಬಧ್ರ ಆಡಳಿತ ನಡೆಸುವಲ್ಲಿ ಸಿದ್ದರಾಮಯ್ಯನ ಸರ್ಕಾರ ಸಂಪೂರ್ಣ ವಿಫಲಾಗಿರುವುದು ಸಾಬೀತಾಗಿದೆ. ಇದೆ ರೀತಿ ಗುಂಡಾ ವರ್ತನೆ ಮುಂದುವರೆದರೆ ಭಾಜಪದಿಂದ ಉಗ್ರವಾಗಿ ಪ್ರತಿಭಟಿಸಿ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಗೌಡ ಪಾಟೀಲ ಹಲಗೇರಿ ಮಾತನಾಡಿ ಸಂತೋಷ ಹತ್ಯೆಯ ಪ್ರಕರಣಕ್ಕೆ ಪೊಲೀಸ್ ಇಲಾಖೆ ಇಬ್ಬರನ್ನು ಬಂಧಿಸಿದ್ದು ಈ ಆರೋಪಿಗಳು ಉಗ್ರವಾದಿ ಸಂಘಟನೆಗಳ ಜೊತೆ ನಂಟಿರುವ ಬಗ್ಗೆ ಪ್ರಬಲ ಶಂಕೆ ಇದ್ದು ಪ್ರಕರಣದ ಸಮಗ್ರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಅವರ ಕುಟುಂಬಕ್ಕೆ ೫೦ ಲಕ್ಷ ಪರಿಹಾರ ಮತ್ತು ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದರು.
ನಂತರದಲ್ಲಿ ಮುನಿಸಿಪಲ್ ಅಧಿಕಾರಿ ನಾಗರಾಜ ಮುಖಾಂತರ ರಾಜ್ಯಾಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ ಹಕ್ಕಾಪಕ್ಕಿ, ಮಹಿಳಾ ಮೊರ್ಚಾ ಅಧ್ಯಕ್ಷೆ ವಾಣಿಶ್ರೀ ಮಠದ, ಮುಖಂಡರಾದ ಕಳಕಪ್ಪ ಜಾಧವ್, ವಿರುಪಾಕ್ಷಯ್ಯ ಗದುಗಿನಮಠ, ಬಸವರಾಜ ಈಶ್ವರಗೌಡರ, ಸಂಗಮೇಶ ಡಂಬಳ, ನೀಲಕಂಠಯ್ಯ ಹಿರೇಮಠ, ದೇವರಾಜ ಹಾಲಸಮುದ್ರ, ಪ್ರವೀಣ ಇಟಗಿ, ಉಮೇಶ ಕುರುಡೇಕರ, ಗಣೇಶ ಹೊರತ್ಟಾನಾಳ, ಶ್ರವಣಕುಮಾರ ಬಂಡಾನವರ, ಬಿ.ಜಿ.ಗದುಗಿನಮಠ, ಚಂದ್ರುಸ್ವಾಮಿ, ಸಿದ್ದು ನೀಡಶೇಶಿ, ರಾಕೇಶ ಬಿಸರಳ್ಳಿ, ಹುಲಗಪ್ಪ ಪೂಜಾರ, ಪುಟ್ಟರಾಜ ಚಕ್ಕಿ, ವೀಣಾ ಬನ್ನಿಗೊಳ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಮತ್ತು ಇನ್ನೂ ಅನೇಕರು ಉಪಸ್ಥಿತರಿದ್ದರು.

Please follow and like us:
error