ಕಾಂಗ್ರೆಸ್ಸಿಗರಿಗೆ ಬಿಜೆಪಿ ಟೀಕಿಸುವ ನೈತಿಕ ಹಕ್ಕಿಲ್ಲ : ಅಮರೇಶ ಕರಡಿ

ಡಾ. ಅಂಬೇಡ್ಕರ್ ಸೋಲಿಸಿದ ಕಾಂಗ್ರೆಸ್: ಅಮರೇಶ ಕರಡಿ ಟೀಕೆ

ಕೊಪ್ಪಳ: ಶೋಷಿತರ ಸಮಾನ ಹಕ್ಕಿಗೆ ಶ್ರಮಿಸಿದ ವಿಶ್ವವಂದ್ಯ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ್ದ ಕಾಂಗ್ರಸಿಗರಿಗೆ ಬಿಜೆಪಿ ಪಕ್ಷವನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಮುಖಂಡ ಅಮರೇಶ ಕರಡಿ ಹೇಳಿದರು.
ತಾಲೂಕಿನ ಬೇವಿನಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಫಲಾನುಭವಿಗಳಿಗೆ ಬುಧವಾರ ಉಚಿತ ಗ್ಯಾಸ್ ಕಿಟ್ ವಿತರಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಕೇವಲ ತನ್ನ ಸ್ವಾರ್ಥಕ್ಕಾಗಿ ದೇಶದ ಪ್ರಗತಿಯನ್ನು ಕಡೆಗಣಿಸಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರು ವರ್ಷದ ಆಡಳಿತದಲ್ಲಿ ಜಗತ್ತೇ ಭಾರತದತ್ತ ನಿಬ್ಬೆರಗಾಗಿ ನೋಡುವಂತಹ ಮಹತ್ತರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮುಂಬರುವ ದಿನಗಳಲ್ಲಿ ಭಾರತ ದೇಶ ಆರ್ಥಿಕವಾಗಿ ಬಲಿಷ್ಠವಾಗಿರುವ ದೇಶಗಳನ್ನು ಮಣಿಸಲಿದೆ ಎಂದು ಅವರು ಹೇಳಿದರು.
ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಸೌಲಭ್ಯಗಳು ದೊರೆಯಬೇಕೆಂಬ ನಿಟ್ಟಿನಲ್ಲಿ ಮಹಿಳೆಯರಿಗೆ ಆಧ್ಯತೆ ನೀಡಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಡಿ ದೇಶದ ಬಡ ಕುಟುಂಬಗಳ ಒಬ್ಬ ಮಹಿಳೆಯ ಹೆಸರಿಗೆ ಉಚಿತ ಗ್ಯಾಸ್ ವಿತರಿಸಲಾಗುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರೀಶ ಹಿರೇಮಠ, ಶರಣಪ್ಪ ಮತ್ತೂರ, ಮಾರ್ಕಂಡೆಪ್ಪ ಹಜಗರ, ಬಸನಗೌಡ್ರ ಪಾಟೀಲ್, ಬಸಣ್ಣ ಸಾಹುಕಾರ, ಯಂಕನಗೌಡ್ರ ಪಾಟೀಲ, ಶಣಯ್ಯ ಹಿರೇಮಠ, ರಾಮಣ್ಣ ನರಿತ್ಯಾಗಿ, ಬಸರಡ್ಡಿ ಕರಮುಡಿ ಪಾಂಡಪ್ಪ ಗೌಳಿ, ಶ್ರೀನಿವಾಸ ಪಾಜಾರ, ಶಂಕರಪ್ಪ ಹೊಸಪೇಟಿ, ರಮೇಶ ನಾಯಕ, ಪಂಚಮುಖಿ ಗ್ಯಾಸ್ ಏಜನ್ಸಿ ರವಿಕುಮಾರ ಬನ್ನಿಕೊಪ್ಪ, ಸೇರಿದಂತೆ ಇತರರು ಇದ್ದರು.

Please follow and like us:
error