ಕಸಾಪ ದತ್ತಿ ಪುರಸ್ಕಾರಕ್ಕೆ   ಮಹೇಶ ಬಳ್ಳಾರಿ ಕವನ ಸಂಕಲನ ಆಯ್ಕೆ

mahesh_bellary ಕೊಪ್ಪಳ, ೧೭- ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನಲ್ಲಿ ಲಿಂ.ಅಮರಪ್ಪ ಅಮರಗುಂಡಪ್ಪ ಸ್ಮರಣಾರ್ಥ ೨೦೧೬-೧೭ನೇ ಸಾಲಿನ ದತ್ತಿ ಪುರಸ್ಕಾರಕ್ಕೆ ಸಾಹಿತಿ ಮಹೇಶ ಬಳ್ಳಾರಿಯವರ ’ಎಡವಿ ಬಿದ್ದ ದೇವರು’ ಕವನ ಸಂಕಲನ ಆಯ್ಕೆಯಾಗಿದೆ.    ಗಂಗಾವತಿಯ ಅರಳಿ ಕುಟುಂಬ ಕೊಪ್ಪಳ ಜಿಲ್ಲಾ ಕಸಾಪದಲ್ಲಿ ಲಿಂ. ಅಮರಪ್ಪ ಅಮರಗುಂಡಪ್ಪ ಸ್ಮರಣಾರ್ಥ ಕವನ ಸಂಕಲನಕ್ಕೆ ದತ್ತಿ ಪುರಸ್ಕಾರ ಸ್ಥಾಪಿಸಿದ್ದು ೨೦೧೬-೧೭ನೇ ಸಾಲಿನ ದತ್ತಿ ಪುರಸ್ಕಾರಕ್ಕೆ ’ಎಡವಿ ಬಿದ್ದ ದೇವರು’ ಕವನ ಸಂಕಲನ ಆಯ್ಕೆಯಾಗಿದೆ.     ಕಸಾಪ ಆಯ್ಕೆ ಸಮಿತಿ ದತ್ತಿ ಪುರಸ್ಕಾರಕ್ಕೆ ’ಎಡವಿ ಬಿದ್ದ ದೇವರು’ ಕವನ ಸಂಕಲನ ಆಯ್ಕೆಗೊಳಿಸಿದ್ದು ಇದೇ ಜೂನ್ ೨೪ರಂದು ಗಂಗಾವತಿಯಲ್ಲಿ ಜರುಗುವ ಕಸಾಪ ದತ್ತಿ ಕಾರ್ಯಕ್ರಮದಲ್ಲಿ ಮಹೇಶ ಬಳ್ಳಾರಿಯವರಿಗೆ ದತ್ತಿ ಪುರಸ್ಕಾರ ಪ್ರದಾನ ಮಾಡಲಾಗುವದು ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ರಾಜಶೇಖರ ಅಂಗಡಿ  ತಿಳಿಸಿದ್ದರೆ.

Please follow and like us:
error

Related posts

Leave a Comment