ಕಸವನ್ನು ಆಮದು ಮಾಡಿಕೊಳ್ಳವ ರಾಷ್ಟ್ರ

ಭಾರತದಲ್ಲಿ ಕಸದ್ದೇ ದೊಡ್ಡ ಚಿಂತೆ. ರಾಶಿ ಕಸವನ್ನು ಏನು ಮಾಡಬೇಕೆಂದು ಗೊತ್ತಾಗದೇ ಭೂಮಿ ಯೊಳಗೆ ಹೂತು ಹಾಕಿ ಪರಿಸರಕ್ಕೆ ಧಕ್ಕೆ ತರುತ್ತಿದ್ದೇವೆ.

 ಈ ಹಿನ್ನೆಲೆಯಲ್ಲಿ  ವಿಶ್ವದ ಅತ್ಯಂತ ಸ್ವಚ್ಛ ರಾಷ್ಟ್ರಗಳಲ್ಲೊಂದೆನಿಸಿದ ಸ್ವೀಡನ್’ಗೆ ಕಸದ ಅಗತ್ಯವಿದೆಯಂತೆ. ತನ್ನ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ಇಲ್ಲದೇ ಇರುವುದರಿಂದ ಬೇರೆ ರಾಷ್ಟ್ರಗಳಿಂದ ಕಸವನ್ನು ಆಮದು ಮಾಡಿಕೊಳ್ಳು ತ್ತಿದೆ. ಈ ದೇಶದಲ್ಲಿ ಪುನರ್ಬಳಕೆ ತಂತ್ರಜ್ಞಾನದ ಮೂಲಕ ಬಹುತೇಕ ಇಂಧನದ ಉತ್ಪತ್ತಿ ಮಾಡ ಲಾಗುತ್ತದೆ. ಕಸದ ರಾಶಿಯಿಂದ ವಿದ್ಯುತ್, ಇಂಧನವನ್ನು ತಯಾರಿಸಲಾಗುತ್ತದೆ. ಮನೆಗಳಲ್ಲಿ ಸಂಗ್ರಹವಾಗುವ ಬಹುತೇಕ ಕಸವನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ದೇಶದ ಶೇ. 50% ಪ್ರಮಾಣದ ವಿದ್ಯುತ್ ಇದೇ ಪುನರ್ಬಳಕೆ ತಂತ್ರ ಜ್ಞಾನದಿಂದ ತಯಾರಾಗುತ್ತದೆ. ಶೇ. 1% ಕಸ ಮಾತ್ರ ನೆಲ ಸೇರುತ್ತದೆ ಎಂದರೆ ಅಚ್ಚರಿ ಎನಿಸುತ್ತದೆ. ಕಸವನ್ನು ಎಷ್ಟು ಉಪಯೋಗಿಸಬಹುದು ಎಂಬು ದಕ್ಕೆ ಈ ದೇಶ ಮಾದರಿ. ತೀವ್ರ ಶೀತ ವಾತಾವರಣ ಇರುವ ಈ ದೇಶದಲ್ಲಿ ಮನೆಗಳಿಗೆ ಶಾಖ ಕೊಡಲು ಬಹುತೇಕ ಶಕ್ತಿ ವ್ಯಯವಾಗುತ್ತದೆ. ಹೀಗಾಗಿ, ಕಸವನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡು ಅದರಿಂದ ವಿದ್ಯುತ್, ಇಂಧನ ಮತ್ತಿತರ ಶಕ್ತಿಯ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕಾಗಿ ಹಲವು ವರ್ಷಗಳಿಂದ ಕಟ್ಟಿ ಬೆಳೆಸಿದ ಸಮರ್ಪಕ ವ್ಯವಸ್ಥೆ ಅಲ್ಲಿದೆ.

Leave a Reply